Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ICC ಚಾಟಿ ತಪ್ಪಿಸಿಕೊಳ್ಳಲು PCB ಮಾಸ್ಟರ್‌ ಪ್ಲ್ಯಾನ್‌; ಫೋರ್ಸ್ ಮೆಜರ್ ಮೊರೆ

ನವದೆಹಲಿ: ಪಾಕಿಸ್ತಾನ ತಂಡ ಟಿ20 ವಿಶ್ವಕಪ್‌ 2026ರಲ್ಲಿ ಭಾರತದ ವಿರುದ್ಧ ಪಂದ್ಯವನ್ನು ಆಡುವುದಿಲ್ಲ ಎಂದು ಬುಧವಾರ ತಡ ರಾತ್ರಿ ಪ್ರಕಟಿಸಿದೆ. ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಕ್ಯಾಬಿನೆಟ್‌ನಲ್ಲಿ ಭಾರತದ ವಿರುದ್ಧ ಪಾಕ್ ಪಂದ್ಯ ಆಡುವುದಿಲ್ಲ ಎಂದು ಪುನಃರುಚ್ಚಸಿದ್ದರು. ಅಲ್ಲದೆ ಪಾಕ್‌ ತನ್ನ ಹಳೆಯ ನಿಲುವಿಗೆ ಬದ್ಧವಾಗಿದೆ ಎಂಬುದನ್ನು ಸಹ ಸ್ಪಷ್ಟಪಡಿಸಿದರು. ಇದರಿಂದ ತನ್ನ ಮೇಲೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಕ್ರಮ ಕೈಗೊಳ್ಳುವುದನ್ನು ತಪ್ಪಿಸಿಕೊಳ್ಳಲು ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ (ಪಿಸಿಬಿ) ಮಾಸ್ಟರ್‌ ಪ್ಲ್ಯಾನ್ ಮಾಡಿಕೊಂಡಿದೆ.

ಪಾಕಿಸ್ತಾನ ಭಾರತದ ವಿರುದ್ಧದ ಪಂದ್ಯವನ್ನು ಬಾಯ್ಕಟ್‌ ಮಾಡಿದಲ್ಲಿ, ಟೀಮ್ ಇಂಡಿಯಾಗೆ ಲಾಭವಾಗಲಿದೆ. ಅಲದಲ್ಲದೆ ಪೂರ್ಣ ಎರಡು ಅಂಕವನ್ನು ನೀಡಲಾಗುತ್ತದೆ. ಅಲ್ಲದೆ ಐಸಿಸಿ, ಪಿಸಿಬಿ ಮೇಲೆ ಭಾರೀ ಮೊತ್ತದ ದಂಡವನ್ನು ವಿಧಿಸಬಹುದಾಗಿದೆ. ಐಸಿಸಿ ಪೂರ್ಣ ಸದಸ್ಯರು ಮಾಡಿಕೊಂಡಿರುವ ಷರತ್ತಿನ ಉಲ್ಲಂಘನೆ ಆಗುತ್ತದೆ ಎಂದು ತಿಳಿದು ಬಂದಿದ್ದು. ಇದರಿಂದ ಪಿಸಿಬಿ ಖಜಾನೆಗೆ ದೊಡ್ಡ ಮೊತ್ತದ ನಷ್ಟವಾಗಲಿದೆ. ಇದನ್ನು ತಪ್ಪಿಸಿಕೊಳ್ಳಲು ಪಿಸಿಬಿ ದೊಡ್ಡ ಯೋಜನೆಯನ್ನು ಹೆಣೆದುಕೊಂಡಿದೆ.

Force Majeure

ಪಿಸಿಬಿ ಭಾರತದ ವಿರುದ್ಧದ ಪಂದ್ಯವನ್ನು ಆಡದಿರುವುದಕ್ಕೆ ತನ್ನ ನಿರ್ಧಾರಕ್ಕೆ ಸಮರ್ಥಿಸಿಕೊಳ್ಳಲು, ಪಾಕಿಸ್ತಾನ ಸರ್ಕಾರವು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದ 'ಬಹಿಷ್ಕಾರ'ದ ಪೋಸ್ಟ್ ಅನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ. ಈ ನಿರ್ಧಾರ ಪಿಸಿಬಿಯದಲ್ಲ ಬದಲಿಗೆ ಸರ್ಕಾರ ನಿರ್ಧಾರ ತೆಗೆದುಕೊಂಡಿದ್ದು, ನಾವು ಅದಕ್ಕೆ ಬದ್ಧರಾಗಿದ್ದೇವೆ ಎಂದು ವಾದಿಸಲು ಪಿಸಿಬಿ ಯೋಜಿಸಿದೆ ಎಂದು ತಿಳಿದುಬಂದಿದೆ.

ಬಿಸಿಸಿಐ ಹೇಳಿದ್ದೇನು?

ಪಾಕಿಸ್ತಾನ ತಂಡಕ್ಕೆ ಅಂಡರ್ 19 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಆಡಲು ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಟಿ20 ವಿಶ್ವಕಪ್‌ನಲ್ಲಿ ಆಡುವಾಗ ತೊಂದರೆ ಆಗಿದೆ ಎಂದು ಪಿಸಿಬಿ ಕುಂಟು ನೆಪವನ್ನು ಹೇಳುತ್ತಿದೆ. ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಹಾಗೂ ಪಾಕ್‌ ಸರ್ಕಾರ ಯಾರಾದರೂ ನಿರ್ಧಾರ ತೆಗೆದುಕೊಂಡರೂ ವ್ಯತ್ಯಾಸ ಏನು ಇಲ್ಲ. ಪಾಕ್ ಪ್ರಧಾನಿ ಪಿಸಿಬಿಯ ಪೋಷಕರಾಗಿದ್ದು, ಪಿಸಿಬಿ ಮುಖ್ಯಸ್ಥರು ಸರ್ಕಾರದಲ್ಲಿ ಮಂತ್ರಿಗಳಾಗಿದ್ದಾರೆ ಎಂದು ಬಿಸಿಸಿಐ ಮೂಲಗಳು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದೆ.

ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಗಳು ಕ್ರಿಕೆಟ್‌ನಲ್ಲಿ ರಾಜಕೀಯವನ್ನು ಮಾಡುತ್ತಿವೆ. ಬಾಂಗ್ಲಾ ತಂಡ, ಭದ್ರತಾ ಕಾರಣಗಳನ್ನು ನೀಡಿ ಹಿಂದೆ ಸರಿಯಲು ಇಚ್ಚಿಸಿದಾಗ, ಭಾರತ ಸರ್ಕಾರ ಭಧ್ರತೆಗೆ ಬದ್ಧ ಎಂದು ಈ ಮೊದಲೇ ಹೇಳಿತ್ತು. ಇನ್ನು ಭಾರತ ಹಾಗೂ ಪಾಕಿಸ್ತಾನ ನಡುವಣ ಒಪ್ಪಂದದಂತೆ ಉಭಯ ದೇಶಗಳು ಐಸಿಸಿ ಟೂರ್ನಿಯಲ್ಲಿ ತಟಸ್ಥ ಸ್ಥಳದಲ್ಲಿ ಆಡಲಿವೆ. ಪಾಕ್‌ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದು ಹೀನವಾಗಿದೆ ಎಂದು ಬಿಸಿಸಿಐ ಮೂಲಗಳು ಸ್ಪಷ್ಟಪಡಿಸಿವೆ.

ಪಾಕಿಸ್ತಾನ ಟಿ20 ವಿಶ್ವಕಪ್‌ನಲ್ಲಿ "ಎ" ಗುಂಪಿನಲ್ಲಿ ಸ್ಥಾನ ಪಡೆದಿದ್ದು, ತನ್ನ ಎಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಈ ಟೂರ್ನಿಯಲ್ಲಿ ಭಾಗವಹಿಸಲು ಪಾಕ್‌ ಈಗಾಗಲೇ ಶ್ರೀಲಂಕಾ ಪ್ರವಾಸವನ್ನು ಸಹ ಬೆಳೆಸಿದೆ. ಪಾಕ್ ಫೆಬ್ರವರಿ 7 ರಂದು ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ.

Story first published: Thursday, February 5, 2026, 12:53 [IST]
Other articles published on Feb 5, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+