ವಿಶ್ವಕಪ್ 2019: ಪಾಕಿಸ್ತಾನದ ತಂಡ ಪ್ರಕಟ, ಅಬಿದ್ ಅಲಿಗೆ ಚಾನ್ಸ್

ಕರಾಚಿ, ಏಪ್ರಿಲ್ 18: ಐಸಿಸಿ ಕ್ರಿಕೆಟ್ ವಿಶ್ವಕಪ್ 2019ಗಾಗಿ ಪಾಕಿಸ್ತಾನದ ಆಯ್ಕೆ ಸಮಿತಿ ಅಧ್ಯಕ್ಷ ಇನ್ಜಮಾಮ್ ಉಲ್ ಹಕ್ ಅವರು 15 ಸದಸ್ಯರ ಅಧಿಕೃತ ತಂಡವನ್ನು ಗುರುವಾರ(ಏಪ್ರಿಲ್ 18) ದಂದು ಪ್ರಕಟಿಸಿದ್ದಾರೆ.
ಆರಂಭಿಕ ಆಟಗಾರ ಅಬಿದ್ ಅಲಿ ಹಾಗೂ ಯುವ ವೇಗಿ ಮೊಹಮ್ಮದ್ ಹಸ್ನಾಯಿನ್ ಅವರಿಗೆ ಅವಕಾಶ ಸಿಕ್ಕಿದೆ. ಮೊಹಮ್ಮದ್ ಹಫೀಜ್ ಅವರು ಫಿಟ್ನೆಸ್ ಸಾಮರ್ಥ್ಯದಲ್ಲಿ ಪಾಸ್ ಆಗಬೇಕಿದೆ. ತಂಡದಲ್ಲಿ ಏನೇ ಬದಲಾವಣೆ ಇದ್ದರೂ ಏಪ್ರಿಲ್ 23ರೊಳಗೆ ಐಸಿಸಿಗೆ ತಿಳಿಸಬೇಕಾಗುತ್ತದೆ.
ಪಾಕಿಸ್ತಾನ ತಂಡದಲ್ಲಿ ಮೂವರು ಓಪನರ್ಸ್, ನಾಲ್ವರು ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್, ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕಮ್ ನಾಯಕನಾಗಿ ಸರ್ಫರಾಜ್ ಅಹ್ಮದ್, ಇಬ್ಬರು ಸ್ಪಿನ್ನರ್ಸ್, ಐವರು ವೇಗಿಗಳಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ 2017 ಗೆದ್ದ ತಂಡದಲ್ಲಿದ್ದಾ 11 ಮಂದಿ ಈಗ 2019ರ ವಿಶ್ವಕಪ್ ತಂಡದಲ್ಲೂ ಆಡುತ್ತಿರುವುದು ವಿಶೇಷ.
ಫಖಾರ್ ಜಮಾನ್ ಹಾಗೂ ಇಮಾಮ್ ಉಲ್ ಹಕ್ ಜೊತೆಗೆ ಬದಲಿ ಓಪನರ್ ಆಗಿ ಅಬಿದ್ ಅಲಿಗೆ ಅವಕಾಶ ಸಿಕ್ಕಿದೆ. ಅನುಭವಿ ಆಟಗಾರ ಮೊಹಮ್ಮದ್ ಹಫೀಜ್ ರನ್ನು ಕೂಡಾ ಆರಂಭಿಕನಾಗಿ ಕಣಕ್ಕಿಳಿಸಲು ಮುಂದಾಗಿದ್ದರೂ ಫಿಟ್ನೆಸ್ ಪರೀಕ್ಷೆ ಪಾಸಾಗಬೇಕಾಗುತ್ತದೆ. 23 ಮಂದಿ ಸದಸ್ಯರ ಪಟ್ಟಿಯಲ್ಲಿ ಪ್ರಮುಖವಾಗಿ ಉಮರ್ ಅಕ್ಮಲ್ ಹಾಗೂ ವಹಾಬ್ ರಿಯಾಜ್ ಹೆಸರು ಕಾಣಿಸಿಕೊಂಡಿಲ್ಲ.
ವಿಶ್ವಕಪ್ 2019ಗಾಗಿ ಪಾಕಿಸ್ತಾನದ 15 ಮಂದಿ ತಂಡ
1. ಸರ್ಫರಾಜ್ ಅಹ್ಮದ್ (ವಿಕೆಟ್ ಕೀಪರ್, ನಾಯಕ)
2. ಅಬಿದ್ ಅಲಿ
3. ಬಾಬರ್ ಅಜಮ್
4. ಫಹೀಮ್ ಅಶ್ರಫ್
5. ಫಖಾರ್ ಜಮಾನ್
6. ಹಾರೀಸ್ ಸೊಹೈಲ್
7. ಹಸನ್ ಅಲಿ
8. ಇಮಾದ್ ವಾಸೀಂ
9. ಇಮಾಮ್ ಉಲ್ ಹಕ್
10. ಜುನೈದ್ ಖಾನ್
11. ಮೊಹಮ್ಮದ್ ಹಫೀಜ್
12. ಮೊಹಮ್ಮದ್ ಹಸ್ನಾಯಿನ್
13. ಶದಾಬ್ ಖಾನ್
14. ಶಹೀನ್ ಶಾ ಅಫ್ರಿದಿ
15. ಶೊಯಿಬ್ ಮಲೀಕ್
ರಿಸರ್ವ್ಸ್: ಆಸಿಫ್ ಅಲಿ, ಮೊಹಮ್ಮದ್ ಆಮೀರ್
ವಿಶ್ವಕಪ್ 2019 ಪಾಕಿಸ್ತಾನದ ಪಂದ್ಯಗಳು
ಅಭ್ಯಾಸ ಪಂದ್ಯಗಳು
ಮೇ 24: ಅಫ್ಘಾನಿಸ್ತಾನ, ಬ್ರಿಸ್ಟೋಲ್
ಮೇ 26: ಬಾಂಗ್ಲಾದೇಶ, ಕಾರ್ಡಿಫ್
ಲೀಗ್ ಪಂದ್ಯಗಳು
ಮೇ 31: ವೆಸ್ಟ್ ಇಂಡೀಸ್, ಟ್ರೆಂಟ್ ಬ್ರಿಜ್
ಜೂನ್ 03: ಇಂಗ್ಲೆಂಡ್, ಟ್ರೆಂಟ್ ಬ್ರಿಜ್
ಜೂನ್ 07: ಶ್ರೀಲಂಕಾ, ಬ್ರಿಸ್ಟೋಲ್
ಜೂನ್ 12 : ಆಸ್ಟ್ರೇಲಿಯಾ, ಟಾಂಟಾನ್
ಜೂನ್ 16: ಭಾರತ, ಓಲ್ಡ್ ಟ್ರಾಫರ್ಡ್
ಜೂನ್ 23 : ದಕ್ಷಿಣ ಆಫ್ರಿಕಾ, ಲಾರ್ಡ್ಸ್
ಜೂನ್ 26 : ನ್ಯೂಜಿಲೆಂಡ್, ಎಜ್ ಬಾಸ್ಟನ್
ಜೂನ್ 29 : ಅಫ್ಘಾನಿಸ್ತಾನ, ಹೆಡಿಂಗ್ಲೆ
ಜುಲೈ 05: ಬಾಂಗ್ಲಾದೇಶ, ಲಾರ್ಡ್ಸ್(ಹಗಲು/ರಾತ್ರಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications