Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಾಕಿಸ್ತಾನದ ಸಂಭಾವ್ಯ ತಂಡದಿಂದ ಉಮರ್, ವಹಾಬ್ ಔಟ್

Pakistan names 23 probables for World Cup Squad

ಕರಾಚಿ, ಏಪ್ರಿಲ್ 07: ಐಸಿಸಿ ಕ್ರಿಕೆಟ್ ವಿಶ್ವಕಪ್ 2019ಗಾಗಿ ಪಾಕಿಸ್ತಾನದ ಆಯ್ಕೆ ಸಮಿತಿಯು 23 ಮಂದಿ ಸದಸ್ಯರ ಸಂಭಾವ್ಯ ತಂಡವನ್ನು ಪ್ರಕಟಿಸಿದೆ. ಆದರೆ, ಎಲ್ಲಾ ಸದಸ್ಯರು ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗಬೇಕು ಎಂಬ ಷರತ್ತು ವಿಧಿಸಲಾಗಿದೆ.

23 ಮಂದಿ ಸದಸ್ಯರ ಪಟ್ಟಿಯಲ್ಲಿ ಪ್ರಮುಖವಾಗಿ ಉಮರ್ ಅಕ್ಮಲ್ ಹಾಗೂ ವಹಾಬ್ ರಿಯಾಜ್ ಹೆಸರು ಕಾಣಿಸಿಕೊಂಡಿಲ್ಲ. ಮಿಕ್ಕಂತೆ ಆಯ್ಕೆಯಾದವರು ಲಾಹೋರ್ ನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಏಪ್ರಿಲ್ 15 ಹಾಗೂ 16ರಂದು ಪರೀಕ್ಷೆಗೊಳಪಡಬೇಕಿದೆ. ಏಪ್ರಿಲ್ 18ರಂದು ಆಯ್ಕೆಯಾದವರ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ.

ಮೊಹಮ್ಮದ್ ಅಬ್ಬಾದ್, ಶಾನ್ ಮಸೂದ್, ಮೊಹಮ್ಮದ್ ಹಸ್ನಾಯಿನ್ ಹೊಸಮುಖಗಳಾಗಿವೆ. 2015ರ ಕ್ರಿಕೆಟ್ ವಿಶ್ವಕಪ್ ನಲ್ಲಿ ಆಡಿದ್ದಾ ವೇಗಿ ವಹಾಬ್ ರಿಯಾಜ್ 2017ರಿಂದ ಏಕದಿನ ಪಂದ್ಯವಾಡಿಲ್ಲ ಹಾಗೂ ಸಂಭಾವ್ಯ ತಂಡಕ್ಕೆ ಆಯ್ಕೆಯಾಗಿಲ್ಲ. 121 ಪಂದ್ಯಗಳನ್ನಾಡಿರುವ 28 ವಯಸ್ಸಿನ ಉಮರ್ ಅಕ್ಮಲ್ ಅವರನ್ನು ಪರಿಗಣಿಸಿಲ್ಲ.

ಸಂಭಾವ್ಯ ತಂಡ ಹೀಗಿದೆ: ಸರ್ಫರಾಜ್ ಅಹ್ಮದ್ (ನಾಯಕ), ಅಬಿದ್ ಅಲಿ, ಅಸಿಫ್ ಅಲಿ, ಬಾಬರ್ ಅಜಮ್, ಫಹೀಂ ಅಶ್ರಫ್, ಫಖಾರ್ ಜಮಾನ್, ಹಾರಿಸ್ ಸೊಹೈಲ್, ಹಸನ್ ಅಲಿ, ಇಮಾದ್ ವಾಸಿಂ ಇಮಾಮ್ ಉಲ್ ಹಕ್, ಜುನೈದ್ ಖಾನ್, ಮೊಹಮ್ಮದ್ ಅಬ್ಬಾಸ್, ಮೊಹಮ್ಮದ್ ಅಮೀರ್, ಮೊಹಮ್ಮದ್ ಹಫೀಜ್, ಮೊಹಮ್ಮದ್ ಹಸ್ನಾಯಿನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಶಾಬಾದ್ ಖಾನ್, ಶಹೀನ್ ಶಾ ಅಫ್ರಿದಿ, ಶಾನ್ ಮಸೂದ್, ಶೊಯಿಬ್ ಮಲೀಕ್, ಉಸ್ಮಾನ್ ಶಿನ್ವಾರಿ, ಯಾಸೀರ್ ಶಾ.

Story first published: Wednesday, April 17, 2019, 21:28 [IST]
Other articles published on Apr 17, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+