ಭಾನುವಾರ, ಜೂನ್ 9ರಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್‌ನ ಹೈ-ವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 6 ರನ್‌ಗಳ ರೋಚಕ ಗೆಲುವು ಸಾಧಿಸಿತು.
ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡವು ಭಾರತ ವಿರುದ್ಧ 6 ರನ್‌ಗಳ ಸೋಲಿನ ನಂತರ, ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ 2024ರ ಟಿ20 ವಿಶ್ವಕಪ್‌ನಲ್ಲಿ ನಿರಾಶಾದಾಯಕ ಅಭಿಯಾನವಾಗಿದೆ.

ಗುಂಪು ಹಂತದ ಮೊದಲ ಮುಖಾಮುಖಿಯಲ್ಲಿ ಆತಿಥೇಯ ಯುಎಸ್ಎ ಎದುರು ಸೋತಿದ್ದ ಪಾಕಿಸ್ತಾನ ತಂಡ, ಇದೀಗ ಸತತ ಎರಡನೇ ಪಂದ್ಯದಲ್ಲೂ ಮುಗ್ಗರಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ರಿಷಭ್ ಪಂತ್ ಅವರ 42 ರನ್ ಮತ್ತು ಅಕ್ಷರ್ ಪಟೇಲ್ ಅವರ 20 ರನ್‌ಗಳ ನೆರವಿನಿಂದ 19 ಓವರ್‌ಗಳಲ್ಲಿ ಕೇವಲ 119 ರನ್‌ಗಳಿಗೆ ಆಲೌಟ್ ಆಯಿತು.
ಪಾಕಿಸ್ತಾನ ತಂಡದ ಪರ ನಸೀಮ್ ಶಾ ಮತ್ತು ಹ್ಯಾರಿಸ್ ರೌಫ್ ತಲಾ ಮೂರು ವಿಕೆಟ್ ಪಡೆದು ಭಾರತ ತಂಡ ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಸಫಲರಾದರು.

ಆ ಬಳಿಕ, ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಅವರ ಶಿಸ್ತಿನ ದಾಳಿಯಿಂದ ಪಾಕಿಸ್ತಾನ ತಂಡ ಕಡಿಮೆ ಮೊತ್ತ ಚೇಸ್ ಮಾಡಲು ವಿಫಲವಾಗಿ, ಹೀನಾಯವಾಗಿ ಸೋಲನುಭವಿಸಿತು. ಭಾರತ ವಿರುದ್ಧದ ಸೋಲು ಪಾಕಿಸ್ತಾನ ತಂಡ ಪಂದ್ಯಾವಳಿಯ ಸೂಪರ್ 8ರ ಹಂತವನ್ನು ತಲುಪುವ ಅವಕಾಶಕ್ಕೂ ದೊಡ್ಡ ಪೆಟ್ಟು ಬಿದ್ದಂತಾಗಿದೆ.
ಪಾಕಿಸ್ತಾನ ತಂಡ 2 ಪಂದ್ಯಗಳನ್ನು ಆಡಿದ ನಂತರರೂ ಅಂಕಪಟ್ಟಿಯಲ್ಲಿ 0 ಅಂಕಗಳನ್ನು ಹೊಂದಿದೆ ಮತ್ತು ಅವರ ಅರ್ಹತಾ ಅವಕಾಶಗಳು ಈ ಕ್ಷಣದಲ್ಲಿ ಸಾಕಷ್ಟು ಕ್ಷೀಣವಾಗಿ ಕಾಣುತ್ತಿವೆ.
ಬಾಬರ್ ಅಜಂ ನಾಯಕತ್ವದ ತಂಡವು ತನ್ನ ಮುಂದಿನ ಪಂದ್ಯಗಳಲ್ಲಿ ಕೆನಡಾ ಮತ್ತು ಐರ್ಲೆಂಡ್ ವಿರುದ್ಧ ಆಡಲಿದ್ದು, ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಅಷ್ಟೇ ಅಲ್ಲದೆ, ಯುಎಸ್ಎ ಮತ್ತು ಕೆನಡಾ ಯಾವುದೇ ಪಂದ್ಯಗಳನ್ನು ಗೆಲ್ಲಬಾರದು ಎಂದು ಆಶಿಸಬೇಕಿದೆ.
ಪಾಕಿಸ್ತಾನ ತನ್ನ ಎರಡೂ ಪಂದ್ಯಗಳನ್ನು ಗೆದ್ದರೂ ಮತ್ತು ಯುಎಸ್ಎ ತಂಡ ತನ್ನ ಉಳಿದ ಎರಡು ಪಂದ್ಯಗಳನ್ನು ಸೋತರೂ, ಸೂಪರ್ 8ರ ಹಂತಕ್ಕೆ ಅರ್ಹತೆ ಪಡೆಯಲು ನೆಟ್ ರನ್ ರೇಟ್ ಮುನ್ನೆಲೆಗೆ ಬರುತ್ತದೆ.
ಭಾರತ ಮತ್ತು ಯುಎಸ್ಎ ತಂಡಗಳು ತಂಡಗಳು ತಲಾ 2 ಪಂದ್ಯಗಳಿಂದ 4 ಅಂಕಗಳನ್ನು ಹೊಂದಿವೆ. ಇದೇ ವೇಳೆ ಕೆನಡಾ ತಂಡ 2 ಪಂದ್ಯಗಳಿಂದ 2 ಅಂಕ ಗಳಿಸಿದೆ. ಹೀಗಾಗಿ ಪಾಕಿಸ್ತಾನ ಸೂಪರ್ 8ರ ದಾರಿಯಲ್ಲಿ ಹೋಗಲು ಹಲವು ಫಲಿತಾಂಶಗಳನ್ನು ಅವಲಂಬಿಸಬೇಕಿದೆ.
ಇನ್ನು ಭಾರತ ತಂಡದ ಬಗ್ಗೆ ಮಾತನಾಡುವುದಾದರೆ, ಈಗಾಗಲೇ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ ಮತ್ತು ಎ ಗುಂಪಿನ ಅಗ್ರಸ್ಥಾನದಲ್ಲಿ ಉಳಿಯಲು ಕೇವಲ ಒಂದು ಪಂದ್ಯದ ಗೆಲುವಿನ ಅಗತ್ಯವಿದೆ.
ಟೀಮ್ ಇಂಡಿಯಾ ಜೂನ್ 12ರಂದು ಯುಎಸ್ಎ ತಂಡವನ್ನು ಸೋಲಿಸಿದರೆ, ಇನ್ನೂ ಕೆನಡಾ ವಿರುದ್ಧದ ಪಂದ್ಯವನ್ನು ಹೊಂದಿರುತ್ತಾದೆ. ಯುನೈಟೆಡ್ ಸ್ಟೇಡ್ಸ್ ಆಫ್ ಅಮೆರಿಕ ತಂಡವನ್ನು ಸೋಲಿಸಿದರೆ, ಸೂಪರ್ 8 ಸುತ್ತುಗಳಲ್ಲಿ ಭಾರತ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಬಹುದು.