For Quick Alerts
ALLOW NOTIFICATIONS  
For Daily Alerts
 

ಭಾರತದಲ್ಲಿ ದೊರೆತ ಅದ್ಭುತ ಸ್ವಾಗತಕ್ಕೆ ಮನಸೋತ ಪಾಕ್ ಕ್ರಿಕೆಟಿಗ

ವಿಶ್ವಕಪ್ ಟೂರ್ನಿಯ ಆರಂಭಕ್ಕೆ ಇನ್ನು ಬೆರಳೆಣಿಕೆಯ ದಿನಗಳು ಮಾತ್ರವೇ ಬಾಕಿಯಿದೆ. ಹೀಗಾಗಿ ಒಂದೊಂದೇ ತಂಡಗಳು ಈಗ ಭಾರತಕ್ಕೆ ಆಗಮಿಸುತ್ತಿದ್ದು ಟೂರ್ನಿಗೆ ಸಿದ್ಧತೆ ನಡೆಸಲಿದೆ. ಈ ಮೆಗಾ ಟೂರ್ನಿಗೆ ಇದೀಗ ಪಾಕಿಸ್ತಾನ ಕ್ರಿಕೆಟ್ ತಂಡ ಕೂಡ ಆಗಮಿಸಿದ್ದು ಬುಧವಾರ ಭಾರತಕ್ಕೆ ಬಂದಿಳಿದಿದೆ. ಈ ಸಮದರ್ಭದಲ್ಲಿ ಪಾಕಿಸ್ತಾನ ತಂಡಕ್ಕೆ ಅದ್ಭುತ ಸ್ವಾಗತವನ್ನು ನೀಡಲಾಗಿ.

ಭಾರತದಲ್ಲಿ ದೊರೆತ ಈ ಅದ್ಭುತ ಸ್ವಾಗತಕ್ಕೆ ಪಾಕಿಸ್ತಾನ ತಂಡದ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಮನಸೋತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು ಇಲ್ಲಿಯವರೆಗೆ ನಮಗೆ ಅದ್ಭುತವಾದ ಸ್ವಾಗತ ದೊರೆತಿದೆ ಎಂದು ಬರೆದುಕೊಂಡಿದ್ದಾರೆ. ಪಾಕಿಸ್ತಾನ ತಂಡ ಬುಧವಾರ ಹೈದರಾಬಾದ್‌ಗೆ ಬಂದಿಳಿಯಿತು.

Pakistan pacer Shaheen Shah Afridi happy for rousing reception in India

ಪಾಕಿಸ್ತಾನ ತಂಡ ಹೈದರಾಬಾದ್‌ನಲ್ಲಿ ಎರಡು ಅಭ್ಯಾಸ ಪಂದ್ಯಗಳನ್ನು ಆಡುವ ಮೂಲಕ ವಿಶ್ವಕಪ್‌ಗೆ ತನ್ನ ಸಿದ್ಧತೆಯನ್ನು ನಡೆಸಲಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ತಮಡಗಳ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಅದಾದ ಬಳಿಕ ವಿಶ್ವಕಪ್ ಟೂರ್ನಿಯಲ್ಲಿ ನೆದರ್ಲೆಂಡ್ಸ್ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

ವಿಶ್ವಕಪ್‌ಗೂ ಮುನ್ನ ಪಾಕಿಸ್ತಾನ ಕೊನೆಯ ಬಾರಿಗೆ ಏಷ್ಯಾಕಪ್‌ನಲ್ಲಿ ಕಣಕ್ಕಿಳಿದಿತ್ತು. ಆದರೆ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಬಾಬರ್ ಅಜಮ್ ನೇತೃತ್ವದ ತಂಡ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿ ಸೆಮಿಫೈನಲ್ ತಲುಪಲು ವಿಫಲವಾಗಿತ್ತು. ಹೀಗಾಗಿ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನದ ವಿರುದ್ಧ ಸಾಕಷ್ಟು ಟೀಕೆಗಳು ಕೂಡ ಕೇಳಿ ಬಂದಿದ್ದವು.

ಇದೀಗ ಭಾರತಕ್ಕೆ ಬಂದಿಳಿಯಲಿರುವ ಪಾಕಿಸ್ತಾನ ತಂಡ ವಿಶ್ವಕಪ್‌ನಲ್ಲಿ ತಮ್ಮ ಅಭಿಯಾನವನ್ನು ಆರಂಭಿಸುವುದಕ್ಕೂ ಮುನ್ನ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ನೆದರ್ಲೆಂಡ್ಸ್ ವಿರುದ್ಧ ವಿಶ್ವಕಪ್‌ನಲ್ಲಿ ಅಧಿಕೃತವಾಗಿ ಸೆಣೆಸಾಡುವುದಕ್ಕೂ ಮುನ್ನ ಈ ಅಭ್ಯಾಸ ಪಂದ್ಯದಲ್ಲಿ ಆಡಿ ಟೂರ್ನಿಗೆ ಉತ್ತಮವಾಗಿ ಸಿದ್ಧತೆ ನಡೆಸಲು ಹಾತೊರೆಯುತ್ತಿದೆ.

ಇನ್ನು ವಿಶ್ವಕಪ್‌ಗೆ ಭಾರತಕ್ಕೆ ಪ್ರಯಾಣಿಸುವುದಕ್ಕೂ ಮುನ್ನ ಪಾಕಿಸ್ತಾನ ತಂಡಕ್ಕೆ ವೀಸಾ ದೊರೆಯುವುದು ವಿಳಂಭವಾಗಿತ್ತು. ಆದರೆ ಕಳೆದ ಸೋಮವಾರ ಭಾರತ ಸರ್ಕಾರದಿಂದ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು ವೀಸಾ ಪಡೆದುಕೊಂಡಿದ್ದರು. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಪಾಕಿಸ್ತಾನ ತಂಡ ಸೆಪ್ಟೆಂಬರ್ 25ರಂದು ದುಬೈಗೆ ಪ್ರಯಾಣ ಬೆಳೆಸಿ ಅಲ್ಲಿ ವಿಶ್ವಕಪ್‌ಗೆ ಎರಡು ದಿನಗಳ ಪೂರ್ವಸಿದ್ಧತಾ ಶಿಬಿರದಲ್ಲಿ ಭಾಗಿಯಾಗಬೇಕಾಗಿತ್ತು. ಸೆಪ್ಟೆಂಬರ್ 27ರಂದು ದುಬೈನಿಂದ ಭಾರತಕ್ಕೆ ಪ್ರಯಾಣ ನಡೆಸಬೇಕಾಗಿತ್ತು. ಆದರೆ ವೀಸಾ ಗೊಂದಲದ ಕಾರಣದಿಂದಾಗಿ ಪಾಕಿಸ್ತಾನ ತಂಡ ದುಬೈ ಪ್ರಯಾಣ ಸಾಧ್ಯವಾಗಲಿಲ್ಲ. ಹೀಗಾಗಿ ಸೆಪ್ಟೆಂಬರ್ 27ರಂದು ನೇರವಾಗಿ ಪಾಕಿಸ್ತಾನ ತಂಡ ಭಾರತಕ್ಕೆ ಪ್ರಯಾಣಿಸುತ್ತಿದೆ.

ಇನ್ನು ವಿಶ್ವಕಪ್ ಟೂರ್ನಿ ಅಕ್ಟೋಬರ್ 5ರಿಂದ ಆರಂಭವಾಗಲಿದ್ದು ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ಆದರೆ ಅಭ್ಯಾಸ ಪಂದ್ಯಗಳು ಸೆಪ್ಟೆಂಬರ್ 9ರಿಂದಲೇ ನಡೆಯಲಿದ್ದು ಟೂರ್ನಿಗೆ ಸಿದ್ಧತೆಯನ್ನು ನಡೆಸಿಕೊಳ್ಳಲಿದೆ. ಪಾಕಿಸ್ತಾನ ತಂಡ ತನ್ನ ಮೊದಲ ಅಭ್ಯಾಸ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಸೆಪ್ಟೆಂಬರ್ 29ರಂದು ಹೈದರಾಬಾದ್‌ನಲ್ಲಿ ಆಡಿದ್ದು ಈ ಪಂದ್ಯವನ್ನು ಭದ್ರತೆಯ ಕಾರಣಗಳಿಂದಾಗಿ ಪ್ರೇಕ್ಷಕರಿಗೆ ಅವಕಾಶ ನೀಡದೆ ಆಯೋಜಿಸಲಾಗುತ್ತಿದೆ.

ಪಾಕಿಸ್ತಾನ ವಿಶ್ವಕಪ್ ತಂಡ ಹೀಗಿದೆ: ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್ (ಉಪ ನಾಯಕ), ಮುಹಮ್ಮದ್ ರಿಜ್ವಾನ್, ಇಮಾಮ್-ಉಲ್-ಹಕ್, ಅಬ್ದುಲ್ಲಾ ಶಫೀಕ್, ಸೌದ್ ಶಕೀಲ್, ಫಖರ್ ಜಮಾನ್, ಹಾರಿಸ್ ರೌಫ್, ಹಸನ್ ಅಲಿ, ಇಫ್ತಿಕರ್ ಅಹ್ಮದ್, ಮುಹಮ್ಮದ್ ನವಾಜ್, ಮುಹಮ್ಮದ್ ವಾಸಿಮ್ ಜೂನಿಯರ್, ಅಘಾ ಸಲ್ಮಾನ್, ಶಾಹೀನ್ ಶಾ ಅಫ್ರಿದಿ, ಒಸಾಮಾ ಮಿರ್.

Story first published: Thursday, September 28, 2023, 8:56 [IST]
Other articles published on Sep 28, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+