ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮಾದರಿಗೆ ನಿವೃತ್ತಿ ಘೋಷಿಸಿದ ಸೋಹೈಲ್ ತನ್ವೀರ್

ಪಾಕಿಸ್ತಾನ ಕಂಡ ಪ್ರತಿಭಾನ್ವಿತ ವೇಗಿಗಳಲ್ಲಿ ಒಬ್ಬರೆನಿಸಿದ ಹಿರಿಯ ಆಟಗಾರ ಸೊಹೈಲ್ ತನ್ವೀರ್ ಅಂತಾರಾಷ್ಟ್ರೀಯ ಕ್ರಿಕೆಟ್ ಎಲ್ಲಾ ಮಾದರಿಗೆ ವಿದಾಯ ಘೋಷಣೆ ಮಾಡಿದ್ದಾರೆ. 2007ರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿರುವ ಸೋಹೈಲ್ ತನ್ವೀರ್ ಇದೀಗ ವಿದಾಯ ಹೇಳಿದ್ದಾರೆ. ಆದರೆ ದೇಶೀಯ ಕ್ರಿಕೆಟ್ ಹಾಗೂ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ತಾನು ಆಡುವುದನ್ನು ಮುಂದುವರಿಸುವುದಾಗಿಯೂ ಸೋಹೈಲ್ ತನ್ವೀರ್ ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನದ ಹಿರಿಯ ಆಟಗಾರ ಸಾಮಾಜಿಕ ಜಾಲತಾಣದಲ್ಲಿ ಈ ಮಹತ್ವದ ಘೋಷಣೆ ಮಾಡಿದ್ದಾರೆ. ಇನ್ನು ಈ ಸಂದರ್ಭದಲ್ಲಿ ದೇಶೀಯ ಕ್ರಿಕೆಟ್ ಹಾಗೂ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸುವುದಾಗಿ ಸೋಹೈಲ್ ತನ್ವೀರ್ ತಿಳಿಸಿದ್ದಾರೆ.
"ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮಾದರಿಗೆ ನಿವೃತ್ತಿ ಘೋಷಿಸುತ್ತಿದ್ದೇನೆ, ಆದರೆ ದೇಶೀಯ ಕ್ರಿಕೆಟ್ ಹಾಗೂ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸಲಿದ್ದೇನೆ. ನನ್ನ ದೇಶದ ಪರವಾಗಿ ಆಡಲು ಅವಕಾಶ ನೀಡಿದ ಪಿಸಿಬಿಗೆ ಧನ್ಯವಾದಗಳು" ಎಂದಿದ್ದಾರೆ ಸೋಹೈಲ್ ತನ್ವೀರ್. 2017ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪೋರ್ಟ್ ಆಫ್ ಸ್ಪೈನ್‌ನ್ಲಲಿ ನಡೆದ ಪಂದ್ಯದಲ್ಲಿ ಕೊನೆಯ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು ಪಾಕಿಸ್ತಾನ್ ಈ ವೇಗದ ಬೌಲರ್.
2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸೋಹೈಲ್ ಆರಂದಲ್ಲಿಯೇ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಖ್ಯಾತರಾದರು. ವಿಭಿನ್ನ ಬೌಲಿಂಗ್ ಶೈಲಿ ಹಾಗೂ ವೇಗದ ಕಾರಣದಿಂದಾಗಿ ಎದುರಾಳಿ ಬ್ಯಾಟರ್‌ಗಳು ಸೋಹೈಲ್ ಬೌಲಿಂಗ್ ದಾಳಿ ಎದುರಿಸಲು ತಿಣುಕಾಡುತ್ತಿದ್ದರು. ಹೀಗಾಗಿ ಸಾಕಷ್ಟು ಪ್ರಮುಖ ವಿಕೆಟ್‌ಗಳನ್ನು ಪಾಕಿಸ್ತಾನದ ಪರವಾಗಿ ಪಡೆದಿದ್ದಾರೆ.
ಆದರೆ ಆರಂಭದಲ್ಲಿ ಪಡೆದ ಯಶಸ್ಸನ್ನು ಸ್ಥಿರವಾಗಿ ಸುದೀರ್ಘ ಕಾಲ ಮುಂದುವರಿಸಿಕೊಂಡು ಸಾಗಲು ಸೋಹೈಲ್ ತನ್ವೀರ್ ವಿಫಲವಾದರು. ಹೀಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ವೀರ್ ಪಾಕಿಸ್ತಾನ ಪರವಾಗಿ 62 ಏಕದಿನ ಪಂದ್ಯಗಳಲ್ಲಿ ಆಡಿದ್ದರೆ 57 ಟಿ20 ಪಂದ್ಯಗಳನ್ನು ಆಡಿದ್ದಾರೆ ಹಾಗೂ ಎರಡು ಟೆಸ್ಟ್ ಪಂದ್ಯಗಳಲ್ಲಿಯೂ ಆಡಿದ್ದಾರೆ. ಇದರಲ್ಲಿ ಅವರು ಕ್ರಮವಾಗಿ 71, 54 ಹಾಗೂ ಐದು ವಿಕೆಟ್‌ಗಳನ್ನು ಸಂಪಾದಿಸಿದ್ದಾರೆ.
ಇನ್ನು ಸೋಹೈಲ್ ತನ್ವೀರ್ 2009ರ ಟಿ20 ವಿಶ್ವಕಪ್ ವಿಜೇತ ಪಾಕಿಸ್ತಾನ ತಂಡದ ಸದಸ್ಯರೂ ಆಗಿದ್ದಾರೆ. ಕುತೂಹಲಕಾರಿ ಅಂಶವೆಂದರೆ 2007ರ ಐಪಿಎಲ್‌ನಲ್ಲಿ ಭಾಗವಹಿಸಿದ್ದ ತನ್ವೀರ್ ಆ ಆವೃತ್ತಿಯ ಚಾಂಪಿಯನ್ ರಾಜಸ್ಥಾನ್ ರಾಯಲ್ಸ್ ತಂಡದ ಸದಸ್ಯರಾಗಿದ್ದು ಅಲ್ಲದೆ ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದು ಐಪಿಎಲ್‌ನ ಚೊಚ್ಚಲ ಪರ್ಪಲ್ ಕ್ಯಾಪ್ ವಿಜೇತ ಎನಿಸಿಕೊಂಡಿದ್ದಾರೆ. ಆಡಿದ 11 ಪಂದ್ಯಗಳಲ್ಲಿ ತನ್ವೀರ್ 22 ವಿಕೆಟ್ ಸಂಪಾದಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications