Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತಂಡದಲ್ಲಿನ ತಮಾಷೆಯ ಆಟಗಾರನ ಹೆಸರಿಸಿದ ಪಾಕಿಸ್ತಾನ ಕ್ರಿಕೆಟರ್ಸ್

Pakistan players reveal the funniest cricketer in the team

ಇಸ್ಲಮಾಬಾದ್: ಪಾಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಚಟುವಟಿಕೆಗಳು ಚಾಲನೆಗೊಂಡಿವೆ. ಈಚೆಗಷ್ಟೇ ಪಾಕ್‌ ತಂಡ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಜಿಂಬಾಬ್ವೆ ತಂಡಕ್ಕೆ ಆತಿಥ್ಯ ನೀಡಿತ್ತು. ಸರಣಿಯಲ್ಲಿ ಪಾಕಿಸ್ತಾನ 2-1ರ ಗೆಲುವು ದಾಖಲಿಸಿತ್ತು.

ನವೆಂಬರ್ 7ರಿಂದ ಪಾಕಿಸ್ತಾನ್ ಮತ್ತು ಜಿಂಬಾಬ್ವೆ ಮಧ್ಯೆ ಮೂರು ಪಂದ್ಯಗಳ ಟಿ20 ಸರಣಿ ಆರಂಭಗೊಳ್ಳಲಿದೆ. ಟಿ20 ಪಂದ್ಯಗಳು ನವೆಂಬರ್ 7, 8 ಮತ್ತು 10ರಂದು ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿವೆ. ಈ ಸರಣಿ ಆರಂಭಕ್ಕೂ ಮುನ್ನ ಪಾಕಿಸ್ತಾನ ವಿಚಿತ್ರ ಪ್ರಶ್ನೆ ಮುಂದಿಟ್ಟು ಒಂದು ಟ್ವೀಟ್ ಮಾಡಿದೆ.

ಪಾಕಿಸ್ತಾನ್ ಡ್ರೆಸ್ಸಿಂಗ್ ರೂಮ್‌ನಲ್ಲಿ ತಮಾಷೆಯ ಆಟಗಾರ ಯಾರು ಅಂತ ಟ್ವೀಟ್‌ನಲ್ಲಿ ಪ್ರಶ್ನಿಸಲಾಗಿದೆ. ಆರಂಭಿಕ ಬ್ಯಾಟ್ಸ್‌ಮನ್ ಫಖರ್ ಝಮಾನ್, ಆಲ್ ರೌಂಡರ್ ಶದಾಬ್ ಖಾನ್, ಎಡಗೈ ವೇಗಿ ವಹಾಬ್ ರಿಯಾಝ್ ಮತ್ತು ವೇಗಿ ಹ್ಯಾರಿಸ್ ರೌಫ್ ತಂಡದಲ್ಲಿನ ತಮಾಷೆಯ ಆಟಗಾರನ ಬಗ್ಗೆ ಮಾತನಾಡಿದ್ದಾರೆ.

ಫಖರ್ ಝಮಾನ್ ಅವರು ವೇಗಿ ಇಮ್ರಾನ್ ಖಾನ್ ಅವರನ್ನು ಹೆಸರಿಸಿದರೆ, ಶದಾಬ್ ಅವರು ಇಮಾಮ್ ಉಲ್ ಹಕ್ ಅವರನ್ನು ಆರಿಸಿದ್ದಾರೆ. ವಹಾಬ್ ಪ್ರಕಾರ ಅಹ್ಮದ್ ಶಹಝಾಬ್ ಫನ್ನಿಯೆಸ್ಟ್ ಪ್ಲೇಯರ್ ಅಂತೆ. ಹೀಗೆ ಒಬ್ಬೊಬ್ಬರು ಒಬ್ಬೊಬ್ಬರ ಹೆಸರು ಹೇಳಿದ್ದಾರೆ.

Story first published: Friday, November 6, 2020, 20:03 [IST]
Other articles published on Nov 6, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+