PAK vs BAN: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಪಾಕಿಸ್ತಾನ ಪ್ಲೇಯಿಂಗ್-11 ಘೋಷಣೆ; ಸ್ಟಾರ್ ಆಲ್‌ರೌಂಡರ್ ಔಟ್!
ಆಗಸ್ಟ್ 20 ಮಂಗಳವಾರ, ಭಾರತ ಪ್ರವಾಸ ಕೈಗೊಳ್ಳುವ ಮೊದಲು ಬಾಂಗ್ಲಾದೇಶ ತಂಡವು ಪಾಕಿಸ್ತಾನ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಯ ಮೊದಲ ಪಂದ್ಯ ಆಗಸ್ಟ್ 21 ರಿಂದ 24 ವರೆಗೆ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಎರಡನೇ ಟೆಸ್ಟ್ ಪಂದ್ಯ ಕರಾಚಿಯಲ್ಲಿ ಆಗಸ್ಟ್ 30 ರಿಂದ ಸೆಪ್ಟೆಂಬರ್ 3 ರವರೆಗೆ ನಡೆಯಲಿದೆ. ಇದಕ್ಕೂ ಮುನ್ನ ಸರಣಿಗೆ ಎರಡು ದಿನಗಳು ಬಾಕಿ ಇರುವಂತೆ ಸೋಮವಾರ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಪಾಕಿಸ್ತಾನ ತನ್ನ ಆಡಿವ ಹನ್ನೊಂದರ ಬಳಗವವನ್ನು ಪ್ರಕಟಿಸಿದೆ.

ಈ ಸರಣಿ ಮೂಲಕ ಜೇಸನ್ ಗಿಲ್ಲೆಸ್ಪಿ ಅವರು ಪಾಕಿಸ್ತಾನದ ಟೆಸ್ಟ್ ಕೋಚ್ ಆಗಿ ತಮ್ಮ ಮೊದಲ ಅವಧಿಯನ್ನು ಪ್ರಾರಂಭಿಸಲಿದ್ದಾರೆ. ಪಾಕಿಸ್ತಾನ ತಂಡವನ್ನು ಟೆಸ್ಟ್‌ನಲ್ಲಿ ಶಾನ್ ಮಸೂದ್ ನಾಯಕನಾಗಿ ಮುನ್ನಡೆಸಲಿದ್ದಾರೆ. ಈ ಹಿಂದೆ ಪಾಕಿಸ್ತಾನ ತಂಡದಲ್ಲಿ ನಾಯಕತ್ವಕ್ಕಾಗಿ ಶುರುವಾದ ಒಳ ಜಗಳ ಪಿಸಿಬಿ ಮುಂದೆ ಬಂದು ನಿಂತಿತ್ತು.
ಪಾಕಿಸ್ತಾನ ತಂಡದಲ್ಲಿ ಶಾಹೀನ್ ಶಾ ಆಫ್ರಿದಿ, ನಸೀಮ್ ಶಾ, ಖುರ್ರಂ ಶಹಜಾದ್ ಮತ್ತು ಮೊಹಮ್ಮದ್ ಅಲಿ ಅವರು ಪಾಕಿಸ್ತಾನದ ಅಗ್ರ ನಾಲ್ಕು ವೇಗದ ಬೌಲರ್‌ಗಳಾಗಿದ್ದು, ಸೌದ್ ಶಕೀಲ್ ಮತ್ತು ಸಲ್ಮಾನ್ ಅಲಿ ಸ್ಪಿನ್ ಬೌಲಿಂಗ್ ಜವಬ್ದಾರಿಯನ್ನು ಹೊತ್ತಿಕೊಂಡಿದ್ದಾರೆ.
ಅಬ್ದುಲ್ಲಾ ಶಫೀಕ್ ಮತ್ತು ಸ್ಯಾಮ್ ಅಯೂಬ್ ಪಾಕಿಸ್ತಾನಕ್ಕೆ ಆರಂಭಿಕರಾದರೆ, ನಾಯಕ ಶಾನ್ ಮಸೂದ್, ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾಗಿದ್ದಾರೆ.
ಸ್ಟಾರ್ ಆಲ್‌ರೌಂಡರ್ ಔಟ್
ಪಾಕಿಸ್ತಾನದ ಅಲ್‌ರೌಂಡರ್ ಅಮೀರ್ ಜಮಾಲ್ ಗಾಯಗೊಂಡಿದ್ದು, ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರ ಬಿದ್ದಿದ್ದಾರೆ. ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಆಡುವಾಗ ಜಮಾಲ್ ಬೆನ್ನುನೋವಿಗೆ ಒಳಗಾಗಿದ್ದರು. ಈ ನೋವಿನಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಅವರನ್ನು ಲಾಹೋರ್‌ನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಕಳುಹಿಸಲಾಗಿದೆ.
ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ಗಾಗಿ ಪಾಕಿಸ್ತಾನ-11
ಅಬ್ದುಲ್ಲಾ ಶಫೀಕ್, ಸ್ಯಾಮ್ ಅಯೂಬ್, ಶಾನ್ ಮಸೂದ್ (ನಾಯಕ), ಬಾಬರ್ ಅಜಮ್, ಸೌದ್ ಶಕೀಲ್ (ಉಪನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಸಲ್ಮಾನ್ ಅಲಿ ಆಗಾ, ಶಾಹೀನ್ ಶಾ ಆಫ್ರಿದಿ, ನಸೀಮ್ ಶಾ, ಖುರ್ರಂ ಶಹಜಾದ್, ಮೊಹಮ್ಮದ್ ಅಲಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications