'ಮ್ಯಾಚ್ ಫಿಕ್ಸಿಂಗ್ ನಿಂದ ಪಾಕ್ ಫೈನಲ್ ಪ್ರವೇಶಿಸಿದೆ'
ನವದೆಹಲಿ, ಜೂನ್ 16 : ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿರುವ ಪಾಕಿಸ್ತಾನದ ವಿರುದ್ಧ ಪಾಕ್ ಮಾಜಿ ಕ್ರಿಕೆಟಿಗ ಗಂಭೀರ ಆರೋಪ ಮಾಡಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡ ಸ್ವಂತ ಬಲದಲ್ಲಿ ಫೈನಲ್ ತಲುಪಿಲ್ಲ. ಪಾಕ್ ಫೈನಲ್ ತಲುಪಲು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದೆ ಎಂದು ಪಾಕ್ ಮಾಜಿ ಕ್ರಿಕೆಟಿಗ ಅಮೀರ್ ಸೊಹೈಲ್ ಪಾಕಿಸ್ತಾನ ಮಾಧ್ಯಮವೊಂದರ ಸಂದರ್ಶನದಲ್ಲಿ ಆರೋಪಿಸಿದ್ದಾರೆ.

ಚೆನ್ನಾಗಿ ಆಡಿದರೆ ಅವರನ್ನು ಅಭಿನಂದಿಸುತ್ತೇವೆ. ಕಳಪೆ ಪ್ರದರ್ಶನ ನೀಡಿದರೆ ಟೀಕಿಸುತ್ತೇವೆ. ಇಂಗ್ಲೆಂಡ್ ತಂಡವನ್ನು ಪಾಕಿಸ್ತಾನ ಪರಾಭವಗೊಳಿಸಿದಾಗ ಪಾಕ್ ಕ್ರಿಕೆಟ್ ತಂಡ ಸಂತೋಷದಿಂದ ಕುಣಿದಾಡಿದ್ದು ಕಾಣಿಸಲಿಲ್ಲ. ಯಾಕೆಂದರೆ ಫೈನಲ್ ಗೆ ತಲುಪುತ್ತೇವೆ ಎಂದು ಅವರಿಗೆ ಮುಂಚಿತವಾಗಿಯೇ ತಿಳಿದಿತ್ತು.
ಇದಕ್ಕಿಂತ ಹೆಚ್ಚೇನೂ ಹೇಳಲಾರೆ, ಇನ್ನುಳಿದದ್ದು ಪಂದ್ಯವನ್ನು ವೀಕ್ಷಿಸಿದ ಜನರೇ ಹೇಳುತ್ತಾರೆ ಎಂದು ಸೊಹೈಲ್ ಸಂದರ್ಶನದಲ್ಲಿ ಹೇಳಿದ್ದಾರೆ.
ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಸುಲಭ ಗೆಲುವು ಪಡೆದು ಫೈನಲ್ ಗೆ ತಲುಪಿರುವ ಪಾಕಿಸ್ತಾನ ಜೂನ್ 18ರಂದು ಫೈನಲ್ ನಲ್ಲಿ ಭಾರತವನ್ನು ಎದುರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications