For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಲಿದ್ದಾರೆ ಪಾಕ್‌ನ ಬಾಬರ್ ಅಝಾಮ್

Pakistans Babar Azam eyes fastest to 2,000 T20I runs record

ಹರಾರೆ: ಜಿಂಬಾಬ್ವೆ ಪ್ರವಾಸದಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡ ಏಪ್ರಿಲ್ 21ರಿಂದ ಮೂರು ಪಂದ್ಯಗಳ ಟಿ20ಐ ಸರಣಿ ಆಡಲಿದೆ. ಈ ಸರಣಿಯಲ್ಲಿ ಪಾಕ್‌ ನಾಯಕ ಬಾಬರ್ ಅಝಾಮ್ ವಿಶೇಷ ದಾಖಲೆ ನಿರ್ಮಿಸಲಿದ್ದಾರೆ. ಇದೇ ಸರಣಿಯ ವೇಳೆ ಬಾಬರ್‌ಗೆ ಭಾರತದ ನಾಯಕ ವಿರಾಟ್ ಕೊಹ್ಲಿ ಹೆಸರಿನಲ್ಲಿರುವ ದಾಖಲೆ ಮೀರಿಸಲು ಅವಕಾಶವಿದೆ.

ಜಿಂಬಾಬ್ವೆ ವಿರುದ್ಧದ ಟಿ20ಐ ಸರಣಿಯಲ್ಲಿ ಬಾಬರ್ ಅಝಾಮ್‌ ಟಿ20 ಕ್ರಿಕೆಟ್‌ನಲ್ಲಿ 2000 ರನ್ ಬಾರಿಸಲು ಅವಕಾಶವಿದೆ. ಈಗ 49 ಇನ್ನಿಂಗ್ಸ್‌ಗಳಲ್ಲಿ ಬಾಬರ್ 1940 ರನ್ ಬಾರಿಸಿದ್ದಾರೆ. ಇನ್ನು ಕೇವಲ 60 ರನ್ ಬಾರಿಸಿದರೆ ಅವರ ಹೆಸರಿನಲ್ಲಿ ಮೈಲಿಗಲ್ಲು ಸ್ಥಾಪನೆಯಾಗಲಿದೆ.

ಅಷ್ಟೇ ಅಲ್ಲ, ಜಿಂಬಾಬ್ವೆ ವಿರುದ್ಧದ ಟಿ20ಐ ಸರಣಿಯಲ್ಲಿ ಬಾಬರ್ ಏನಾದರೂ 2000 ರನ್ ಬಾರಿಸಿದರೆ ಟಿ20ಐನಲ್ಲಿ ಅತೀ ವೇಗವಾಗಿ 2000 ರನ್ ಬಾರಿಸಿದ ಆಟಗಾರರಾಗಿ ಬಾಬರ್ ದಾಖಲೆ ನಿರ್ಮಿಸಲಿದ್ದಾರೆ. ವಿರಾಟ್ ಹೆಸರಿನಲ್ಲಿರುವ ದಾಖಲೆ ಬದಿಗೆ ಸರಿಯಲಿದೆ.

ಕೊಹ್ಲಿ ಟಿ20ಐನಲ್ಲಿ 2000 ರನ್ ಗಡಿಯನ್ನು 56 ಇನ್ನಿಂಗ್ಸ್‌ಗಳಲ್ಲಿ ತಲುಪಿದ್ದರು. 26ರ ಹರೆಯದ ಬಾಬರ್, 31 ಟೆಸ್ಟ್‌ ಪಂದ್ಯಗಳಲ್ಲಿ 2167 ರನ್, 80 ಏಕದಿನ ಪಂದ್ಯಗಳಲ್ಲಿ 3808 ರನ್ ದಾಖಲೆ ಹೊಂದಿದ್ದಾರೆ. ಟಿ20ಐ ರ್‍ಯಾಂಕಿಂಗ್‌ನಲ್ಲಿ ಬಾಬರ್ 3ನೇ ಸ್ಥಾನದಲ್ಲಿದ್ದರೆ, ವಿರಾಟ್ 5ನೇ ಸ್ಥಾನದಲ್ಲಿದ್ದಾರೆ.

Story first published: Tuesday, April 20, 2021, 20:18 [IST]
Other articles published on Apr 20, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+