Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೋವಿಡ್ 19 ನೀತಿ ಸಂಹಿತೆ ಉಲ್ಲಂಘಿಸಿದಕ್ಕೆ ಪಾಕಿಸ್ತಾನದ ರಾಜಾ ಹಸ್ಸನ್ ಟೂರ್ನಿಯಿಂದ ಹೊರಕ್ಕೆ

Pakistan’s Raza Hasan throw out for breaching Covid-19 protocols

ಕೊರೊನಾ ವೈರಸ್‌ನ ಕಾರಣದಿಂದಾಗಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಕ್ರಿಕೆಟ್ ಸರಣಿಗಳನ್ನು ಆಯೋಜಿಸಲಾಗುತ್ತಿದೆ. ಓರ್ವ ಮಾಡುವ ಎಡವಟ್ಟಿನಿಂದ ತಂಡದ ಎಲ್ಲರೂ ಅಪಾಯಕ್ಕೆ ಒಳಗಾಗುವ ಸಾಧ್ಯತೆಯಿರುವ ಕಾರಣ ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆದರೆ ಈ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕೆ ಪಾಕಿಸ್ತಾನದಲ್ಲಿ ಕ್ರಿಕೆಟಿಗನನ್ನು ಟೂರ್ನಿಯಿಂದಲೇ ಹೊರಹಾಕಲಾಗಿದೆ.

ಪಾಕಿಸ್ತಾನದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಲ್ಗೊಂಡಿರುವ ಹಸ್ಸನ್ ರಾಜಾ ಪಾಕಿಸ್ತಾನ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಕೋವಿಡ್ 19 ನೀತಿ ಸಂಹಿತೆ ಉಲ್ಲಂಘಿಸಿರುವ ಆಟಗಾರ. ಈ ಕಾರಣಕ್ಕಾಗಿ ಆತನನ್ನು ಟೂರ್ನಿಯಿಂದ ಹೊರಹಾಕುವ ನಿರ್ಧಾರವನ್ನು ಪಾಕಿಸ್ತಾನಕ್ರಿಕೆಟ್ ಮಂಡಳಿ ತೆಗೆದುಕೊಂಡಿದೆ.

"ಬಯೋ ಸೆಕ್ಯೂರ್ ವಲಯವನ್ನು ಉಲ್ಲಂಘಿಸಿ ಮೈದ್ಯಕೀಯ ತಂಡದ ಅನುಮತಿಯನ್ನು ಪಡೆಯದೆ ಸ್ಥಳೀಯ ಹೋಟೆಲ್‌ಗೆ ಹಸನ್ ರಾಜಾ ತೆರಳಿದ್ದರು" ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಸ್ಸನ್ ರಾಜಾ ಅವರ ನೀತಿಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಧಿಸಿದಂತೆ ಹೇಳಿಕೆ ನೀಡಿದೆ.

28ರ ಹರೆಯದ ಎಡಗೈ ಸ್ಪಿನ್ನರ್ ಹಸ್ಸನ್ ರಾಜಾ ಕೈದ್ ಈ ಅಜಂ ಟ್ರೋಫಿಯಲ್ಲಿ ನಾರ್ಥರ್ನ್ಸ್ XI ತಂಡವನ್ನು ಪ್ರತಿನಿಧಿಸುತ್ತಿದ್ದರು. ಇದಕ್ಕೂ ಮುನ್ನ ಹಸ್ಸನ್ ರಾಜಾಗೆ ಬಯೋ ಸೆಕ್ಯೂರ್ ಬಬಲ್ ಉಲ್ಲಂಘಿಸದಂತೆ ಕೆಲ ಎಚ್ಚರಿಕೆಗಳನ್ನು ನೀಡಲಾಗಿತ್ತು ಎಂದು ಕೂಡ ಮಂಡಳಿ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ.

ಹಸ್ಸನ್ 2012ರ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶೇನ್ ವಾಟ್ಸನ್ ಹಾಗೂ ಮ್ಯಾಕ್ಸ್‌ವೆಲ್ ವಿಕೆಟ್ ಪಡೆಯುವ ಮೂಲಕ ಭರವಸೆಯನ್ನು ಮೂಡಿಸಿದ್ದರು. ಆದರೆ ಅದಾದ ಬಳಿಕ ಕೇವಲ 10 ಅಂತಾರಾಷ್ಟ್ರೀಯ ಟಿ20 ಹಾಗೂ ಒಂದು ಒಡಿಐ ಪಂದ್ಯವನ್ನು ಆಡಿದ್ದಾರೆ. 2015ರಲ್ಲಿ ನಿಶೇಧಿತ ದ್ರವ್ಯ ಸೇವನೆಯ ಆರೋಪದಲ್ಲಿ ಎರಡು ವರ್ಷಗಳ ಕಾಲ ಅಮಾನತು ಶಿಕ್ಷೆಗೆ ಹಸ್ಸನ್ ಗುರಿಯಾಗಿದ್ದರು.

Story first published: Tuesday, December 1, 2020, 12:53 [IST]
Other articles published on Dec 1, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+