'ಸೂಕ್ತವಲ್ಲದ ಭಾಷೆ' ಬಳಸಿದ ಪಾಕ್‌ನ ಸರ್ಫರಾಜ್ ಅಹ್ಮದ್‌ಗೆ ದಂಡ

ಇಸ್ಲಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಸರ್ಫರಾಜ್ ಖಾನ್‌ಗೆ ಪಂದ್ಯದ ಸಂಭಾವನೆಯ ಶೇ. 35ರಷ್ಟು ದಂಡ ವಿಧಿಸಲಾಗಿದೆ. ಕ್ವಾಯ್ದ್ ಇ ಅಝಾಮ್ ಟ್ರೋಫಿ ಪಂದ್ಯದ ವೇಳೆ 'ಸೂಕ್ತವಲ್ಲದ ಭಾಷೆ' ಬಳಸಿದ್ದಕ್ಕಾಗಿ ಅಹ್ಮದ್‌ಗೆ ದಂಡ ಹಾಕಲಾಗಿದೆ.
33ರ ಹರೆಯದ ವಿಕೆಟ್ ಕೀಪರ್ ಸರ್ಫರಾಜ್ ಅಹ್ಮದ್, ಸಿಂಧ್ ಫಸ್ಟ್ XIಗೆ ನಾಯಕತ್ವ ವಹಿಸಿಕೊಂಡಿದ್ದಾರೆ. ಶನಿವಾರ ನಡೆದ ಪಂದ್ಯದ ವೇಳೆ ಅಸಂಬದ್ಧ ಪದಗಳನ್ನು ಬಳಸಿ ಅಂಪೈರ್ ನಿಂದಿಸಿದ್ದರು. ಇದು ನಿಯಮ ಉಲ್ಲಂಘಿಸಿದಂತಾಗಿತ್ತು.
'ಆಟದ ವೇಳೆ ಸರ್ಫರಾಜ್ ಸತತವಾಗಿ ಅಂಪೈರಿಂಗ್ ನಿರ್ಧಾರದ ವಿರುದ್ಧ ಕಾಮೆಂಟ್‌ಗಳನ್ನು ಮಾಡಿದ್ದರು. ಹೀಗಾಗಿ ಅವರಿಗೆ ದಂಡ ವಿಧಿಸಲಾಗಿದೆ,' ಎಂದು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
'ಆರ್ಟಿಕಲ್ 2.21ನಲ್ಲಿರುವ ಪಿಸಿಬಿ ಕೋಡ್ ಆಫ್ ಕಂಡಕ್ಟ್ ಮತ್ತು ಬೆಂಬಲ ಸಿಬ್ಬಂದಿಗೆ ಸಂಬಂಧಿಸಿ ಸರ್ಫರಾಜ್ ನೀತಿ ಉಲ್ಲಂಘಿಸಿರುವುದಾಗಿ ಆನ್ ಫೀಲ್ಡ್ ಅಂಪೈರ್ ಫೈಸಲ್ ಅಫ್ರಿದಿ ಮತ್ತು ಸಕೀಬ್ ಖಾನ್ ದೂರಿತ್ತಿದ್ದಾರೆ,' ಎಂದು ಪಿಸಿಬಿ ಹೇಳಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications