Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಾಬರ್‌, ಶಾಹೀನ್‌ ಟಿ20 ತಂಡದಿಂದ ಹೊರಕ್ಕೆ

ಭಾರತ ಹಾಗೂ ಶ್ರೀಲಂಕಾ ಜಂಟಿಯಾಗಿ 2026ರ ಟಿ20 ವಿಶ್ವಕಪ್ ಆಯೋಜಿಸುತ್ತಿವೆ. ಈ ಸರಣಿಗೆ ಮೊದಲ ಹಲವು ತಂಡಗಳು ಟಿ20 ಸರಣಿಯನ್ನು ಆಡಲಿವೆ. ಇದಕ್ಕೆ ಪೂರಕವಾಗಿ ಪಾಕ್‌ ಸಹ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳನ್ನು ಆಡಲಿವೆ. ಈ ಸರಣಿಗೆ ಪಾಕಿಸ್ತಾನ ತಂಡವನ್ನು ಪ್ರಕಟಿಸಲಾಗಿದೆ. ಪ್ರಕಟಿತ ತಂಡದಲ್ಲಿ ಪಾಕ್ ತಂಡದ ಸೂಪರ್ ಸ್ಟಾರ್ ಆಟಗಾರರಾದ ಬಾಬರ್‌ ಅಜಮ್‌ ಹಾಗೂ ಶಾಹೀನ್ ಅಫ್ರಿಧಿ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಇನ್ನು ಟಿ20 ಸರಣಿಯಲ್ಲಿ ತಂಡವನ್ನು ಸಲ್ಮಾನ್ ಅಲಿ ಅಘಾ ಮುನ್ನಡೆಸಲಿದ್ದಾರೆ.

ಬಾಬರ್‌ ಅಜಮ್‌ ಹಾಗೂ ಶಾಹೀದ್ ಆಫ್ರಿದಿ ಅವರು ಪ್ರಸ್ತುತ ಬಿಗ್ ಬ್ಯಾಷ್‌ ಲೀಗ್‌ನಲ್ಲಿ ಆಡುತ್ತಿದ್ದಾರೆ. ಹೀಗಾಗಿ ಇವರಿಗೆ ತಂಡದಲ್ಲಿ ಸ್ಥಾನ ಲಭಿಸಿಲ್ಲ. ಬಾಬರ್‌ ಅಜಮ್‌ ಟಿ20 ತಂಡಕ್ಕೆ ಇತ್ತೀಚಿಗೆ ಸೇರಿಸಲ್ಪಟ್ಟಿದ್ದರು. ನಂತರ ಇವರನ್ನು ಶ್ರೀಲಂಕಾ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾಗಿತ್ತು. ಇವರು ಈ ಸರಣಿಯಲ್ಲಿ ಪ್ರಭಾವಶಾಲಿ ಇನಿಂಗ್ಸ್‌ ಆಡಿ ಗಮನ ಸೆಳೆದಿದ್ದರು. ಪಾಕ್‌ ತಂಡದ ಹಲವು ಸ್ಟಾರ್ ಆಟಗಾರರು ಪ್ರಸ್ತುತ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡುತ್ತಿದ್ದಾರೆ. ಇದರಲ್ಲಿ ಮೊಹಮ್ಮದ್‌ ರಿಜ್ವಾನ್‌, ಹ್ಯಾರೀಸ್‌ ರೌಫ್‌ ಸಹ ಸೇರಿದ್ದಾರೆ. ಪಾಕಿಸ್ತಾನಿ ಆಯ್ಕೆದಾರರು ಖವಾಜಾ ನಫೇ ಅವರನ್ನು ಮೊದಲ ಬಾರಿಗೆ ಟಿ 20 ತಂಡಕ್ಕೆ ಸೇರಿಸಿಕೊಂಡಿದ್ದಾರೆ.

Pakistan s T20 Squad vs Sri Lanka Salman Ali Agha to Lead Babar and Shaheen Miss Out

ಖವಾಜಾ ನಫೇ ದೇಶೀಯ ಟೂರ್ನಿಗಳಲ್ಲಿ ಅಮೋಘ ಪ್ರದರ್ಶನ ನೀಡಿದ ಆಟಗಾರು. ಇವರು ಈ ವರೆಗೆ ಒಂದೇ ಒಂದು ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಆಡಿಲ್ಲ. ದೇಶೀಯ ಹಾಗೂ ಲೀಗ್‌ ಪಂದ್ಯಗಳಲ್ಲಿ ಇವರು ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಖವಾಜಾ ಈ ವರೆಗೆ 32 ಟಿ20 ಪಂದ್ಯಗಳನ್ನು ಆಡಿದ್ದು 132.81 ಸ್ಟ್ರೈಕ್ ರೇಟ್‌ನಲ್ಲಿ 688 ರನ್ ಸಿಡಿಸಿದ್ದಾರೆ. ಇವರು ಪಾಕಿಸ್ತಾನ ಸೂಪರ್‌ ಲೀಗ್‌ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರ ಆಡಿ ಸೈ ಎನಿಸಿಕೊಂಡಿದ್ದಾರೆ.

ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯ ಜನವರಿ 7 ರಂದು ನಡೆಯಲಿದೆ. ಎರಡನೇ ಪಂದ್ಯ ಜ.9 ರಂದು, ಮೂರನೇ ಪಂದ್ಯ ಜ.11 ರಂದು ನಡೆಯಲಿದೆ. ಮೂರು ಪಂದ್ಯಗಳಿಗೆ ದಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಟಿ20 ವಿಶ್ವಕಪ್‌ಗೆ ಪೂರ್ವಭಾವಿಯಾಗಿ ಈ ಸರಣಿಯನ್ನು ನೋಡಲಾಗುತ್ತಿದೆ.

Pakistan s T20 Squad vs Sri Lanka Salman Ali Agha to Lead Babar and Shaheen Miss Out

ಪಾಕ್‌ ತಂಡ : ಸಲ್ಮಾನ್ ಅಲಿ ಅಘಾ (ನಾಯಕ), ಅಬ್ದುಲ್ ಸಮದ್, ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಜಮಾನ್, ಖವಾಜಾ ನಫೆ, ಮೊಹಮ್ಮದ್ ನವಾಜ್, ಮೊಹಮ್ಮದ್ ಸಲ್ಮಾನ್ ಮಿರ್ಜಾ, ಮೊಹಮ್ಮದ್ ವಾಸಿಮ್ ಜೂನಿಯರ್, ನಸೀಮ್ ಶಾ, ಸಾಹಿಬ್ಜಾದಾ ಫರ್ಹಾನ್, ಸೈಮ್ ಅಯೂಬ್, ಶಾದಾಬ್ ಖಾನ್, ಉಸ್ಮಾನ್ ಖಾನ್, ಉಸ್ಮಾನ್ ತಾರೀಕ್

Story first published: Sunday, December 28, 2025, 13:10 [IST]
Other articles published on Dec 28, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+