ಬಾಂಗ್ಲಾದೇಶದಂತೆ ಪಾಕ್ ಸಹ ಟಿ20 ವಿಶ್ವಕಪ್‌ನಿಂದ ಹಿಂದೆ ಸರಿದರೆ, ಈ ದೇಶಕ್ಕೆ ಅವಕಾಶ
ನವದೆಹಲಿ: ಭಾರತ ಹಾಗೂ ಶ್ರೀಲಂಕಾ ಜಂಟಿಯಾಗಿ 2026ರ ಟಿ20 ವಿಶ್ವಕಪ್ ಆಯೋಜಿಸುತ್ತಿವೆ. ಈ ಟೂರ್ನಿಗಾಗಿ ಸಿದ್ಧತೆಗಳು ನಡೆದಿವೆ. ಈ ಬೆನ್ನೆಲ್ಲೆ ಬಾಂಗ್ಲಾದೇಶ ಟೂರ್ನಿಯಿಂದ ಹೊರ ನಡೆದಿದೆ. ಈ ಬಗ್ಗೆ ದೊಡ್ಡ ನಿರ್ಧಾರವನ್ನು ಐಸಿಸಿ ಶನಿವಾರ ಪ್ರಕಟಿಸಿದೆ. ಒಂದು ವೇಳೆ ಪಾಕಿಸ್ತಾನ ಸಹ ಬಾಂಗ್ಲಾದೇಶದ ಹಾದಿಯನ್ನು ಹಿಡಿದರೆ, ಯಾವ ದೇಶಕ್ಕೆ ಲಾಭ ಎಂಬ ಪ್ರಶ್ನೆಗಳು ಮೂಡಿದೆ.
ಭಾರತದಲ್ಲಿ ಭದ್ರತಾ ಕಾರಣಗಳನ್ನು ನೀಡಿ ಬಾಂಗ್ಲಾದೇಶ ಟೂರ್ನಿಯಿಂದ ಹೊರ ನಡೆಯುವುದಾಗಿ ತಿಳಿಸಿತ್ತು. ಅಲ್ಲದೆ ಐಸಿಸಿ ಬಳಿ ಬಾಂಗ್ಲಾ ಸ್ಥಳ ಬದಲಿಸುವಂತೆ ಮನವಿಯನ್ನು ಮಾಡಿತ್ತು ಹಾಗೂ ತನ್ನ ಗುಂಪನ್ನು ಬದಲಿಸುವಂತೆ ಐಸಿಸಿಯಲ್ಲಿ ಕೇಳಿಕೊಂಡಿತ್ತು. ಆದರೆ ಐಸಿಸಿ ಈ ಯಾವುದಕ್ಕೂ ಸೊಪ್ಪು ಹಾಕಿರಲಿಲ್ಲ. ಅಲ್ಲದೆ ಆಡುವುದಿದ್ದರೆ ಭಾರತದಲ್ಲಿ ಆಡುವಂತೆ ತಿಳಿಸಿತ್ತು. ಬಾಂಗ್ಲಾದೇಶ ಸಹ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಹೀಗಾಗಿ ಐಸಿಸಿ ಬಾಂಗ್ಲಾದೇಶ ತಂಡವನ್ನು ಟಿ20 ವಿಶ್ವಕಪ್‌ನಿಂದ ಹೊರಗಿಟ್ಟು, ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶ ನೀಡಿತು. ಈಗ ಎದ್ದಿರುವ ಪ್ರಶ್ನೆ ಎಂದರೆ ಪಾಕಿಸ್ತಾನ ಸಹ ಬಾಂಗ್ಲಾದೇಶದ ಹಾದಿಯನ್ನು ಹಿಡಿದರೆ ಯಾವ ದೇಶಕ್ಕೆ ಲಾಭ ಎಂಬ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಈ ಬಗ್ಗೆ ಈ ಬಗ್ಗೆ ಈಗ ದೊಡ್ಡ ಹೇಳಿಕೆ ನೀಡಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಆಡುವ ಬಗ್ಗೆ ಸರ್ಕಾರ ಅನುಮೋದನೆಗಾಗಿ ಕಾಯುತ್ತಿದೆ ಎಂದು ತಿಳಿಸಿದ್ದಾರೆ. ಸದ್ಯ ಪಾಕ್ ಪ್ರಧಾನಿ ದೇಶದಲ್ಲಿಲ್ಲ. ಅವರು ಸ್ವದೇಶಕ್ಕೆ ಮರಳಿದ ಬಳಿಕ ಅವರೊಂದಿಗೆ ಈ ಬಗ್ಗೆ ಚರ್ಚಿಸಲಾಗುವುದು. ಬಳಿಕವೇ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ. ಬಾಂಗ್ಲಾದೇಶ ತಂಡಕ್ಕೆ ಅನ್ಯಾಯವಾಗಿದೆ. ಒಂದು ದೇಶಕ್ಕೆ ಒಂದು ನಿಯಮವನ್ನು ಮತ್ತು ಇನ್ನೊಂದು ದೇಶಕ್ಕೆ ಇನ್ನೊಂದು ನಿಯಮವನ್ನು ಅನ್ವಯಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಪಾಕ್ ಹಿಂದೆ ಸರಿದರೆ ಯಾರಿಗೆ ಲಾಭ?
ಒಂದು ವೇಳೆ ಪಾಕಿಸ್ತಾನ ಸಹ ಟಿ20 ವಿಶ್ವಕಪ್‌ನಿಂದ ಹೊರನಡೆದರೆ ಯಾವ ದೇಶ ಆಡುವ ಅವಕಾಶ ಪಡೆಯಬಹುದು ಎಂಬ ಪ್ರಶ್ನೆಗಳು ಉದ್ಭವಿಸಿವೆ. ಒಂದು ವೇಳೆ ಪಾಕ್ ಟೂರ್ನಿಯಿಂದ ಹೊರ ನಡೆದರೆ, ಈ ತಂಡವನ್ನು ಉಗಾಂಡಾ ತಂಡದೊಂದಿಗೆ ಬದಲಾಯಿಸಬಹುದು. ಬಾಂಗ್ಲಾದೇಶವನ್ನು ಸ್ಕಾಟ್ಲೆಂಡ್ ಬದಲಿಸಿದಾಗ ಉಗಾಂಡ ಎರಡನೇ ಸ್ಥಾನದಲ್ಲಿತ್ತು. ಪಾಕಿಸ್ತಾನ ಟೂರ್ನಿಯಲ್ಲಿ ಭಾಗವಹಿಸದಿದ್ದರೆ ಉಗಾಂಡ ಅವಕಾಶ ಪಡೆಯಬಹುದು. ಸುಮಾರು 50 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಪಾಕಿಸ್ತಾನವನ್ನು ಬದಲಿಸುವ ಅವಕಾಶವನ್ನು ಪಡೆಯಬಹುದು. ಪಾಕಿಸ್ತಾನವು ಈ ಹಿಂದೆ ಹಲವಾರು ಬಾರಿ ಐಸಿಸಿ ಪಂದ್ಯಾವಳಿಗಳಿಂದ ಹಿಂದೆ ಸರಿಯುವುದಾಗಿ ಬೆದರಿಕೆ ಹಾಕಿತ್ತು. ಆದರೆ ಎಂದೂ ಐಸಿಸಿ ಟೂರ್ನಿಯಿಂದ ಹಿಂದೆ ಸರಿಯುವ ಧೈರ್ಯ ಮಾಡಿರಲಿಲ್ಲ.
ಪಾಕಿಸ್ತಾನ ಟಿ20 ವಿಶ್ವಕಪ್‌ನಲ್ಲಿ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯ ಫೆಬ್ರವರಿ 15 ರಂದು ನಡೆಯಲಿದೆ. ಈ ಪಂದ್ಯಕ್ಕೆ ಶ್ರೀಲಂಕಾದ ಕೊಲಂಬೊ ಅಂಗಳ ಸಾಕ್ಷಿಯಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications