
ಲಂಡನ್, ಜುಲೈ 8: ಇಂಗ್ಲೆಂಡ್‌ಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರವಾಸ ಸರಣಿಗಳು ಆಗಸ್ಟ್ 5ರಿಂದ ಆರಂಭವಾಗಲಿದೆ. ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ ಇದನ್ನು ಖಾತರಿಪಡಿಸಿದೆ. ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಇಂಗ್ಲೆಂಡ್ ತಂಡ ಐರ್ಲೆಂಡ್ ವಿರುದ್ಧ ಏಕದಿನ ಸರಣಿ ಆಡಲಿದೆ.
ಪಾಕಿಸ್ತಾನ vs ಇಂಗ್ಲೆಂಡ್ ಸರಣಿ 3 ಟೆಸ್ಟ್ ಪಂದ್ಯಗಳು ಮತ್ತು 3 ಟಿ20 ಪಂದ್ಯಗಳನ್ನು ಒಳಗೊಂಡಿರಲಿದೆ. ಇಂಗ್ಲೆಂಡ್-ಐರ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಕ್ರಮವಾಗಿ ಜುಲೈ 30, ಆಗಸ್ಟ್ 1 ಮತ್ತು ಆಗಸ್ಟ್ 4ರಂದು ನಡೆಯಲಿದೆ.
ಆಗಸ್ಟ್ 5ರಂದು ಇಂಗ್ಲೆಂಡ್-ಪಾಕ್ ಮೊದಲ ಟೆಸ್ಟ್ ಪಂದ್ಯ ಮ್ಯಾನ್ಚೆಸ್ಟರ್‌ನ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ದ್ವಿತೀಯ ಪಂದ್ಯ ಆಗಸ್ಟ್ 13-17ರ ವರೆಗೆ ಸೌತಾಂಪ್ಟನ್‌ನ ರೋಸ್‌ಬೌಲ್ ಸ್ಟೇಡಿಯಂನಲ್ಲಿ, 3ನೇ ಟೆಸ್ಟ್ ಆಗಸ್ಟ್ 21ರಿಂದ 25ರ ವರೆಗೆ ಸೌತಾಂಪ್ಟನ್‌ನಲ್ಲಿ ನಡೆಯಲಿದೆ.
ಇಂಗ್ಲೆಂಡ್-ಪಾಕಿಸ್ತಾನ ಟಿ20 ಸರಣಿ ಆಗಸ್ಟ್ 28ರಿಂದ ಶುರುವಾಗಲಿದೆ. ಮೊದಲ ಪಂದ್ಯ ಆಗಸ್ಟ್ 28ರಂದು ಮ್ಯಾನ್ಚೆಸ್ಟರ್‌ನ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ, ದ್ವಿತೀಯ ಪಂದ್ಯ ಆಗಸ್ಟ್ 30ರಂದು ಮ್ಯಾನ್ಚೆಸ್ಟರ್‌ನಲ್ಲಿ, ಮೂರನೇ ಪಂದ್ಯ ಸೆಪ್ಟೆಂಬರ್ 1ರಂದು ಮ್ಯಾನ್ಚೆಸ್ಟರ್‌ನಲ್ಲಿ ನಡೆಯಲಿದೆ.