ಟೆಸ್ಟ್ ಶ್ರೇಯಾಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ ಬಾಬರ್ ಅಜಂ: ಎಲ್ಲಾ ಮಾದರಿಯಲ್ಲೂ ಅಗ್ರಸ್ಥಾನದ ಮೇಲೆ ಕಣ್ಣು!

ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಪ್ರಸ್ತುತ ಅದ್ಭುತ ಪ್ರದರ್ಶನ ನಿಡುತ್ತಿದ್ದು ಎಲ್ಲಾ ಮಾದರಿಯಲ್ಲಿಯೂ ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಐಸಿಸಿ ಬಿಡುಗಡೆ ಮಾಡಿರುವ ನೂತನ ಟೆಸ್ಟ್ ಬ್ಯಾಟರ್‌ಗಳ ಶ್ರೇಯಾಂಕಪಟ್ಟಿಯಲ್ಲಿ ಬಾಬರ್ ಅಜಂ 3ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ನಿಡಿದ ಅಮೋಘ ಪ್ರದರ್ಶನದ ಬಳಿಕ ಬಾಬರ್ ಅಜಂ ಆಸಿಸ್ ದಿಗ್ಗಜ ಆಟಗಾರ ಸ್ಟೀವ್ ಸ್ಮಿತ್ ಅವರನ್ನು ಕೂಡ ಹಿಂದಿಕ್ಕಿದ್ದಾರೆ.
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಬಾಬರ್ ಅಜಂ ಅದ್ಭುತ ಪ್ರದರ್ಶನ ನೀಡಿ ಶತಕ ಸಿಡಿಸಿದ್ದರು. ತಂಡ ಗಳಿಸಿದ ರನ್‌ಗಳ ಪೈಕಿ ಶೇಕಡಾ ರನ್ ಬಾಬರ್ ಅಜಂ ಅವರ ಬ್ಯಾಟ್‌ನಿಂದಲೇ ಬಂದಿತ್ತು. ಈ ಪ್ರದರ್ಶನದ ಕಾರಣದಿಂದಾಗಿ ಪಾಕಿಸ್ತಾನ ಮೊದಲ ಪಂದ್ಯದಲ್ಲಿ ಗೆದ್ದು ಸರಣಿಯನ್ನು ಮುನ್ನಡೆ ಸಾಧಿಸಿತ್ತು.

ಏಕದಿನ, ಟಿ20ಯಲ್ಲಿ ನಂಬರ್ 1
ಬಾಬರ್ ಅಜಂ ಈಗಾಗಲೇ ಏಕದಿನ ಹಾಗೂ ಟಿ20 ಮಾದರಿಯಲ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ. ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿಯೂ ತಮ್ಮ ಅತ್ಯುತ್ತಮ 874 ಅಂಕಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಸ್ಥಾನದಲ್ಲಿ ಇಂಗ್ಲೆಂಡ್ ನಾಯಕ ಜೋ ರೂಟ್ ಇದ್ದು 923 ಅಂಕಗಳನ್ನು ಹೊಂದಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಯುವ ಆಟಗಾರ ಮಾರ್ನಾಸ್ ಲ್ಯಾಬುಶೈನ್ ಇದ್ದು 88 ಅಂಕಗಳನ್ನು ಹೊಂದಿದ್ದಾರೆ.

ಎಲ್ಲಾ ಮಾದರಿಯಲ್ಲೂ ನಂಬರ್ 1 ಕನಸು ಬಿಚ್ಚಿಟ್ಟಿದ ಬಾಬರ್
ಇನ್ನು ಇದಕ್ಕೂ ಮುನ್ನವೇ ಬಾಬರ್ ಅಜಂ ಎಲ್ಲಾ ಮಾದರಿಯಲ್ಲಿಯೂ ನಂಬರ್1 ಬ್ಯಾಟರ್ ಆಗಬೇಕು ಎಂಬ ಕನಸನ್ನು ಬಿಚ್ಚಿದ್ದರು. "ಆಟಗಾರನಾಗಿ ಎಲ್ಲಾ ಮಾದರಿಯಲ್ಲಿಯೂ ನಂಬರ್ 1 ಆಗಬೇಕು ಎಂಬುದು ಕನಸು. ಅದನ್ನು ಸಾಧಿಸಬೇಕಾದರೆ ನಮ್ಮ ಕಠಿಣ ಪರಿಶ್ರಮದತ್ತ ಗಮನಹರಿಸಬೇಕು. ಒಂದು ಅಥವಾ ಎರಡು ಮಾದರಿಯಲ್ಲಿ ಮಾತ್ರವೇ ಅಗ್ರಸ್ಥಾನಕ್ಕೇರಿದಷ್ಟು ಸುಲಭವಲ್ಲ" ಎಂದು ಈ ಹಿಂದೆಯೇ ಬಾಬರ್ ಅಜಂ ಕಳೆದ ಜೂನ್‌ನಲ್ಲಿ ಹೇಳಿಕೊಂಡಿದ್ದರು. ಇನ್ನು ಎಲ್ಲಾ ಮಾದರಿಯಲ್ಲಿಯೂ ಅಗ್ರಸ್ಥಾನಕ್ಕೇರಬೇಕಾದರೆ ದೈಹಿಕವಾಗಿಯೂ ಫಿಟ್ ಆಗಿರಬೇಕು ಹಾಗಾದಲ್ಲಿ ಮಾತ್ರವೇ ಮೂರು ಂಆದರಿಯಲ್ಲಿಯೂ ಅಗ್ರಸ್ಥಾನಕ್ಕೇರಲು ಸಾಧ್ಯ ಎಂದಿದ್ದರು ಬಾಬರ್ ಅಜಂ

ಟಾಪ್ 10ನಲ್ಲಿ ಇಬ್ಬರು ಭಾರತೀಯರು
ಇನ್ನು ಟೆಸ್ಟ್ ಮಾದರಿಯಲ್ಲಿ ಶ್ರೇಯಾಂಕಪಟ್ಟಿಯಲ್ಲಿ ಭಾರತದ ಇಬ್ಬರು ಆಟಗಾರರು ಸ್ಥಾನ ಪಡೆದುಕೊಂಡಿದ್ದಾರೆ. ರಿಷಭ್ ಪಂತ್ 5ನೇ ಸ್ಥಾನದಲ್ಲಿದ್ದು ಭಾರತದ ಬ್ಯಾಟರ್‌ಗಳ ಪೈಕಿ ಅಗ್ರಸ್ಥಾನದಲ್ಲಿದ್ದಾರೆ, ಇನ್ನು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 9ನೇ ಸ್ಥಾನದಲ್ಲಿದ್ದಾರೆ. ಇನ್ನು ಕಳಪೆ ಫಾರ್ಮ್‌ನಲ್ಲಿರುವ ಮಾಜಿ ನಾಯಕ ವಿರಾಟ್ ಕೊಹ್ಲಿ 12ನೇ ಸ್ಥಾನದಲ್ಲಿದ್ದಾರೆ.

ಬೌಲಿಂಗ್‌ನಲ್ಲಿ ಮೇಲೆರಿದ ಪಾಕ್ ವೇಗಿ
ಇನ್ನು ಪಾಕಿಸ್ತಾನದ ಯುವ ವೇಗಿ ಶಾಹೀನ್ ಶಾ ಅಫ್ರಿದಿ ಬೌಲಿಂಗ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದ ಶ್ರೇಯಾಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಈ ಮೂಲಕ ಭಾರತದ ವೇಗಿ ಜಸ್ಪ್ರೀತ್ ಬೂಮ್ರಾ ಅವರನ್ನು ಹಿಂದಿಕ್ಕಿದ್ದಾರೆ. ಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಸಂಪಾದಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications