ಮುಂದಿನ ಎರಡು ವಿಶ್ವಕಪ್ ಗೆಲ್ಲುವುದು ನಮ್ಮ ಗುರಿ: ಪಾಕಿಸ್ತಾನ ನಾಯಕ ಬಾಬರ್ ಅಜಂ

ಪಾಕಿಸ್ತಾನ ಕ್ರಿಕೆಟ್ ತಂಡ ಪ್ರಸ್ತುತ ಅದ್ಭುತ ಪ್ರದರ್ಶನ ನೀಡುತ್ತಿದ್ದು ಆತ್ಮವಿಶ್ವಾಸದಿಂದ ಬೀಗುತ್ತಿದೆ. ಅದರಲ್ಲೂ ತಂಡದ ಪ್ರಮುಖ ಆಟಗಾರರೆಲ್ಲರೂ ಅದ್ಭುತ ಫಾರ್ಮ್‌ನಲ್ಲಿರುವುದು ತಂಡದ ಪ್ರದರ್ಶನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ಈ ಸಂದರ್ಬದಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಂ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ. ಮುಂದಿನ 18 ತಿಂಗಳಲ್ಲಿ ಎರಡು ವಿಶ್ವಕಪ್ ನಡೆಯಲಿದ್ದು ಈ ಎರಡು ವಿಶ್ವಕಪ್‌ಗಳನ್ನು ಕೂಡ ಗೆಲ್ಲುವುದು ನಮ್ಮ ಪ್ರಮುಖ ಗುರಿಯಾಗಿದೆ ಎಂದಿದ್ದಾರೆ ಬಾಬರ್ ಅಜಂ.
ಈ ಸಂದರ್ಭದಲ್ಲಿ ತಾವು ಮುಂದೆ ನಿಂತು ತಂಡವನ್ನು ಮುನ್ನಡೆಸಲು ಬಯಸುತ್ತಿರುವುದಾಗಿ ಬಾಬರ್ ಅಜಂ ಹೇಳಿದ್ದಾರೆ. ತಾನು ಮುಂದೆ ನಿಂತು ಉತ್ತಮ ಪ್ರದರ್ಶನ ನೀಡಿದರೆ ತಂಡದ ಆಟಗಾರರಿಗೆ ಕೂಡ ಸ್ಪೂರ್ತಿ ದೊರೆಯುತ್ತದೆ. ಅದರಿಂದಾಗಿ ತಂಡ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ ಎಂದಿದ್ದಾರೆ ಬಾಬರ್ ಅಜಂ.

ಅದ್ಭುತ ಫಾರ್ಮ್‌ನಲ್ಲಿ ಪಾಕ್ ನಾಯಕ
ಪಾಖಿಸ್ತಾನದ ನಾಯಕ ಬಾಬರ್ ಅಜಂ ಅದ್ಭುತ ಪ್ರದರ್ಶನ ನಿಡಿ ಮಿಂಚಿತ್ತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿಯೂ ಬಾಬರ್ ಅಜಂ ಅವರಿಂದ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಬಂದಿದೆ. ವಿಂಡೀಸ್ ವಿರುದ್ಧದ ಸರಣಿ ಗೆಲುವಿನಲ್ಲಿ ಬಾಬರ್ ಅಜಂ ಬ್ಯಾಟಿಂಗ್ ಪ್ರದರ್ಶನದ ಪಾತ್ರ ಕುಡ ಮಹತ್ವದ ಪಾತ್ರವಹಿಸಿತ್ತು. ಈ ಸಂದರ್ಭದಲ್ಲಿ ಬಾಬರ್ ತನ್ನ ಫಾರ್ಮ್‌ಅನ್ನು ನಾನು ಉತ್ತಮವಾಗಿ ಆನಂದಿಸುತ್ತಿದ್ದು ಎಂದಿದ್ದಾರೆ. ಅಲ್ಲದೆ ಈ ಫಾರ್ಮ್‌ನೊಂದಿಗೆ ತನ್ನ ಮುಂದಿನ ಗುರಿಯನ್ನು ಕೂಡ ಸ್ಪಷ್ಟಪಡಿಸಿದ್ದಾರೆ.

ಎರಡು ವಿಶ್ವಕಪ್ ಗೆಲ್ಲುವುದು ಗುರಿ
"ನಾನು ನನ್ನ ಫಾರ್ಮ್‌ಅನ್ನು ಆನಂದಿಸುತ್ತಿದ್ದೇನೆ ಅದರಲ್ಲಿ ಅನುಮಾನವಿಲ್ಲ. ಆದರೆ ನನ್ನ ಈ ಫಾರ್ಮ್‌ನಲ್ಲಿ ಪ್ರಮುಖ ಗುರಿಯೆಂದರೆ ಮುಂದಿನ ಒಂದೂವರೆ ವರ್ಷದಲ್ಲಿ ಬರುವ ಎರಡು ವಿಶ್ವಕಪ್‌ಗಳನ್ನು ಗೆಲ್ಲುವುದಾಗಿದೆ. ಅದು ಸಾಧ್ಯವಾದರೆ ನನ್ನ ರನ್‌ಗಳಿಗೆ ಚಿನ್ನದ ಮೌಲ್ಯ ಬರುತ್ತದೆ ಎಂದು ನಾನು ನಂಬುತ್ತೇನೆ" ಎಂದಿದ್ದಾರೆ ಬಾಬರ್ ಅಜಂ. ಪಾಕಿಸ್ತಾನ 2009ರ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಕೊನೆಯ ಬಾರಿಗೆ ವಿಶ್ವಕಪ್ ಗೆದ್ದುಕೊಂಡಿದೆ.

ಸತತವಾಗಿ ಅದ್ಭುತ ಪ್ರದರ್ಶನ ನೀಡುತ್ತಿರುವ ಬಾಬರ್
ವಿಶ್ವ ಕ್ರಿಕೆಟ್‌ನಲ್ಲಿ ಪ್ರಸ್ತುತ ಅತ್ಯುತ್ತಮ ಆಟಗಾರರಲ್ಲಿ ಬಾಬರ್ ಅಜಂ ಕೂಡ ಒಬ್ಬರು ಎನಿಸಿಕೊಂಡಿದ್ದಾರೆ. ಏಕದಿನ ಮಾದರಿಯಲ್ಲಿ ಬಾಬರ್ ಸರಾಸರಿ ಬಹುತೇಕ 60ರ ಸನಿಹದಲ್ಲಿದೆ. 87 ಇನ್ನಿಂಗ್ಸ್‌ಗಳನ್ನು ಆಡಿರುವ ಬಾಬರ್ ಅಜಂ 17 ಶತಕ ಹಾಗೂ 19 ಅರ್ಧ ಶತಕವನ್ನು ಗಳಿಸಿದ್ದಾರೆ. 2022ರಲ್ಲಿ 457 ರನ್‌ಗಳನ್ನು ಗಳಿಸಿರುವ ಬಾಬರ್ ಅಜಂ ಅವರ ಸರಾಸರಿ 100ರ ಸನಿಹದಲ್ಲಿದೆ. ಇದರಲ್ಲಿ ಕಳೆದ ಆರು ಪಂದ್ಯಗಳಲ್ಲಿ ಅವರು ಮೂರು ಶತಕಗಳನ್ನು ಕೂಡ ಗಳಿಸಿದ್ದಾರೆ. ತನ್ನಿಂದ ಇಂಥಾದ್ದೇ ಪ್ರದರ್ಶನ ಬಂದರೆ ಉಳಿದ ಆಟಗಾರರು ಕೂಡ ತನ್ನನ್ನು ಅನುಸರಿಸಲು ಸಾಧ್ಯವಾಗುತ್ತದೆ ಎಂಬುದು ಬಾಬರ್ ಅಜಂ ಅಭಿಪ್ರಾಯವಾಗಿದೆ.

ಆಸ್ಟ್ರೇಲಿಯಾ ಹಾಗೂ ಭಾರತದಲ್ಲಿ ನಡೆಯಲಿದೆ ವಿಶ್ವಕಪ್
ಈ ವರ್ಷಾಂತ್ಯದಲ್ಲಿ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಕಳೆದ ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಪಾಕಿಸ್ತಾನ ಸೆಮಿಫೈನಲ್ ಹಂತದವರೆಗೆ ತಲುಪಿತ್ತು. ಹೀಗಾಗಿ ಈ ವಿಶ್ವಕಪ್‌ನಲ್ಲಿ ಮತ್ತಷ್ಟು ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ ಪಾಕಿಸ್ತಾನ ಅದಾದ ಬಳಿಕ ಮುಂದಿನ ವರ್ಷ 2023ರಲ್ಲಿ ಏಕದಿನ ವಿಶ್ವಕಪ್ ನಡೆಯಲಿದ್ದು ಈ ಪ್ರತಿಷ್ಟಿತ ಟೂರ್ನಿಯ ಆತಿಥ್ಯವನ್ನು ಭಾರತ ವಹಿಸಿಕೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications