Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಾಕ್ 'ಗಲಿವರ್' ಗುಜ್ಜರ್‌ಗೆ ವಿಶ್ವದ ಅತೀ ಎತ್ತರದ ಬೌಲರ್ ಆಗುವಾಸೆ!

Pakistan spinner Mudassir Gujjar aims to become ‘world’s tallest bowler’

ಇಸ್ಲಮಾಬಾದ್: ಪಾಕಿಸ್ತಾನದ 21ರ ಹರೆಯದ ಮುದಾಸಿರ್ ಗುಜ್ಜರ್‌ಗೆ ಕ್ರಿಕೆಟ್‌ ರಂಗದಲ್ಲಿ ಅತೀ ಎತ್ತರ ಬೌಲರ್ ಅನ್ನಿಸಿಕೊಳ್ಳುವ ಮಹದಾಸೆಯಿದೆಯಂತೆ. ನೋಡೋಕೆ ಗಲಿವರ್ ರೀತಿ ಕಾಣುವ ಗುಜ್ಜರ್ ಎತ್ತರ 7 ಅಡಿ 6 ಇಂಚು. ಹೀಗಾಗಿ ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ಎತ್ತರದ ಬೌಲರ್ ಅನ್ನಿಸಿರುವ ಪಾಕಿಸ್ತಾನದ ಮೊಹಮ್ಮದ್ ಇರ್ಫಾನ್ ಅವರನ್ನು ಹಿಂದಿಕ್ಕುವ ಎಲ್ಲಾ ಅವಕಾಶ ಗುಜ್ಜರ್‌ಗಿದೆ.

ಪಾಕಿಸ್ತಾನ್ ಸೂಪರ್‌ ಲೀಗ್‌ನ ತಂಡ ಲಾಹೋರ್ ಕಲಂದರ್ ನಲ್ಲಿ ಆಟಗಾರರ ಅಭಿವೃದ್ಧಿ ಕಾರ್ಯಕ್ರಮದ ಭಾಗವಾಗಿರುವ ಗುಜ್ಜರ್‌, ಪಾಕಿಸ್ತಾನ ಕ್ರಿಕೆಟ್ ತಂಡದ ಪರ ಆಡುವ ಕನಸಿಟ್ಟುಕೊಂಡಿದ್ದಾರೆ. ತನ್ನ ಕ್ರಿಕೆಟ್ ವೃತ್ತಿ ಬದುಕಿನ ಕನಸಿನ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ತನಗೆ ವಿಶ್ವದ ಅತೀ ಎತ್ತರದ ಬೌಲರ್ ಆಗುವಾಸೆಯಿದೆ ಎಂದು ಗುಜ್ಜರ್ ಹೇಳಿದ್ದಾರೆ.

ಮೇಲ್ ಆನ್‌ಲೈನ್ ಜೊತೆ ಮಾತನಾಡಿದ ಗುಜ್ಜರ್, 'ನನ್ನ ಎತ್ತರ ನನಗೆ ವರದಾನವಾಗಿದೆ. ಇದರಿಂದ ನಾನು ವೇಗವಾಗಿ ಓಡಬಲ್ಲೆ, ವೇಗದ ಬೌಲರ್ ಆಗಬಲ್ಲೆ. ಬೌಲರ್ ಆಗಬೇಕೆಂದು ನಾನು ಏಳು ತಿಂಗಳ ಹಿಂದೆ ಅಭ್ಯಾಸ ಆರಂಭಿಸಿದ್ದೆ. ಆದರೆ ಕೋವಿಡ್-19ನಿಂದಾಗಿ ಮಧ್ಯೆ ಅಭ್ಯಾಸ ನಡೆಸಲಾಗಲಿಲ್ಲ. ಆದರೆ ಒಂದು ದಿನ ನಾನು ವಿಶ್ವದ ಅತೀ ಎತ್ತರದ ಬೌಲರ್ ಎನಿಸಿಕೊಳ್ಳುತ್ತೇನೆ ಎಂಬ ವಿಶ್ವಾಸವಿದೆ' ಎಂದಿದ್ದಾರೆ.

'ಬಾಲಕನಾಗಿದ್ದಾಗ ಶಾಲೆಯಲ್ಲಿ ಮತ್ತು ನೆರೆಹೊರೆಯಲ್ಲಿ ನಾನು ಬಲು ಎತ್ತರದ ಹುಡುಗನಾಗಿದ್ದೆ. 10 ವರ್ಷದವನಾಗಿದ್ದಾಗ ಮತ್ತು ಹೈಸ್ಕೂಲ್ ವೇಳೆಗಾಗಲೇ ನಾನು 6 ಅಡಿ ಎತ್ತರ ಬೆಳೆದಿದ್ದೆ.' ಎಂದು ಗುಜ್ಜರ್ ತನ್ನ ಬಾಲ್ಯದ ಬದುಕಿನ ಬಗ್ಗೆಯೂ ವಿಚಾರಗಳನ್ನು ಹಂಚಿಕೊಂಡರು. ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎತ್ತರದ ಬೌಲರ್ ಎನಿಸಿರುವ ಮೊಹಮ್ಮದ್ ಇರ್ಫಾನ್ ಎಡಗೈ ವೇಗಿ. ಆದರೆ ಗುಜ್ಜರ್ ಸದ್ಯ ಸ್ಪಿನ್ ಬೌಲಿಂಗ್ ಮಾಡುತ್ತಾರೆ.

Story first published: Saturday, October 10, 2020, 17:18 [IST]
Other articles published on Oct 10, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+