Pakistan Squad For World Cup 2023: ವಿಶ್ವಕಪ್‌ಗೆ 15 ಸದಸ್ಯರ ಪಾಕಿಸ್ತಾನ ತಂಡ ಪ್ರಕಟ; ಸ್ಟಾರ್ ವೇಗಿ ಔಟ್!
ಭಾರತದಲ್ಲಿ ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗಾಗಿ ತಂಡಗಳ ಸಲ್ಲಿಕೆ ಗಡುವು ಹತ್ತಿರವಾಗುತ್ತಿದೆ. ಈಗಾಗಲೇ ಹಲವು ತಂಡಗಳು ತಯಾರಿ ನಡೆಸುತ್ತಲೇ ತಮ್ಮ ವಿಶ್ವಕಪ್ ತಂಡಗಳನ್ನು ಪ್ರಕಟಿಸಿವೆ.
ಇದೀಗ ಐಸಿಸಿ ಟ್ರೋಫಿ ಗೆಲ್ಲುವ ನೆಚ್ಚಿನ ಸ್ಪರ್ಧಿಗಳಲ್ಲಿ ಒಂದಾಗಿರುವ ಪಾಕಿಸ್ತಾನ ಕೂಡ ಶುಕ್ರವಾರ, ಸೆಪ್ಟೆಂಬರ್ 22ರಂದು ಪ್ರಮುಖ ಪಂದ್ಯಾವಳಿಗಾಗಿ 15 ಸದಸ್ಯರ ತಮ್ಮ ತಂಡವನ್ನು ಪ್ರಕಟಿಸಿದೆ.

2023ರ ವಿಶ್ವಕಪ್‌ಗಾಗಿ ಪಾಕಿಸ್ತಾನ ತಂಡವನ್ನು ಅದರ ಲೆಜೆಂಡ್ ಕ್ರಿಕೆಟಿಗ ಹಾಗೂ ಪಿಸಿಬಿ ಆಯ್ಕೆ ಸಮಿತಿ ಮುಖ್ಯಸ್ಥ ಇಂಜಮಾಮ್-ಉಲ್-ಹಕ್ ಅವರು ಪತ್ರಿಕಾಗೋಷ್ಠಿ ಮೂಲಕ ಪ್ರಕಟಿಸಿದ್ದಾರೆ. ಕೆಲವು ಅಚ್ಚರಿ ಆಯ್ಕೆಗಳು ಒಳಗೊಂಡಿವೆ.
ಅನುಭವಿ ಬೌಲರ್ ಹಸನ್ ಅಲಿ ಪಾಕ್ ತಂಡಕ್ಕೆ ಮರಳಿದ್ದು, ಸ್ಟಾರ್ ವೇಗದ ಬೌಲರ್ ನಸೀಮ್ ಶಾ ಗಾಯದ ಸಮಸ್ಯೆಯಿಂದ ವಿಶ್ವಕಪ್ ತಂಡದಿಂದ ಹೊರಬಿದ್ದಿದ್ದಾರೆ. ಹಾರಿಸ್ ರೌಫ್ ಅವರು ಇತ್ತೀಚಿನ ದಿನಗಳಲ್ಲಿ ಗಾಯಗಳಿಂದ ಬಳಲುತ್ತಿದ್ದರೂ, ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮೊಹಮ್ಮದ್ ವಾಸಿಂ ಜೂನಿಯರ್ ಕೂಡ ಮುಂಚೂಣಿ ವೇಗಿಗಳಲ್ಲಿ ಒಬ್ಬರಾಗಿದ್ದಾರೆ.
ಏಷ್ಯಾ ಕಪ್ ವೈಫಲ್ಯದ ಬಳಿಕವೂ ಬಾಬರ್ ಅಜಂ ನಾಯಕತ್ವದ ತಂಡಕ್ಕೆ ಅಲ್‌ರೌಂಡರ್ ಶಾದಾಬ್ ಖಾನ್ ಉಪನಾಯಕನಾಗಿ ಮುಂದುವರೆದಿದ್ದಾರೆ. ಸ್ಪಿನ್ನರ್ ಉಸಾಮಾ ಮಿರ್ ಕೂಡ 15 ಆಟಗಾರರ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದೇ ವೇಳೆ ಜಮಾನ್ ಖಾನ್, ಮೊಹಮ್ಮದ್ ಹ್ಯಾರಿಸ್ ಮತ್ತು ಅಬ್ರಾರ್ ಅಹ್ಮದ್ ಮೀಸಲು ಆಟಗಾರರಾಗಿ ಪ್ರಯಾಣಿಸಲಿದ್ದಾರೆ.
2023ರ ಏಕದಿನ ವಿಶ್ವಕಪ್‌ಗೆ ಪಾಕಿಸ್ತಾನ ತಂಡ
ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಫಖರ್ ಜಮಾನ್, ಇಮಾಮ್-ಉಲ್-ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಜ್ವಾನ್, ಇಫ್ತಿಕರ್ ಅಹ್ಮದ್, ಅಘಾ ಸಲ್ಮಾನ್, ಸೌದ್ ಶಕೀಲ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಹಸನ್ ಅಲಿ, ಉಸಾಮಾ ಮಿರ್, ಮೊಹಮ್ಮದ್ ವಾಸಿಂ ಜೂನಿಯರ್.
ಪ್ರಯಾಣ ಮೀಸಲು ಆಟಗಾರರು: ಅಬ್ರಾರ್ ಅಹ್ಮದ್, ಜಮಾನ್ ಖಾನ್, ಮೊಹಮ್ಮದ್ ಹ್ಯಾರಿಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications