2650 ದಿನಗಳ ಬಳಿಕ ಆಸ್ಟ್ರೇಲಿಯಾವನ್ನು ಮಣಿಸಿದ ಪಾಕಿಸ್ತಾನ
ಲಾಹೋರ್: ಪಾಕಿಸ್ತಾನ ಬಹುದಿನಗಳಿಂದ ಕಾಯುತ್ತಿದ್ದ ಆ ಒಂದು ಕನಸು ನನಸಾಗಿದೆ. ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ಟಿ20 ಕ್ರಿಕೆಟ್‌ನಲ್ಲಿ ಬಹು ವರ್ಷಗಳ ಬಳಿಕ ಮೊದಲ ಜಯ ಸಾಧಿಸಿದೆ. ಮೊದಲ ಟಿ20 ಪಂದ್ಯದಲ್ಲಿ ಪಾಕ್ 22 ರನ್‌ಗಳಿಂದ ಆಸ್ಟ್ರೇಲಿಯಾವನ್ನು ಮಣಿಸಿ ಅಬ್ಬರಿಸಿದರು. ಈ ಪಂದ್ಯದಲ್ಲಿ ಸೈಮ್ ಅಯೂಬ್ ಸ್ಥಿರ ಪ್ರದರ್ಶನ ನೀಡಿ ಮಿಂಚಿದರು.
ಪಾಕಿಸ್ತಾನ 2650 ದಿನಗಳ ಬಳಿಕ ಆಸ್ಟ್ರೇಲಿಯಾ ತಂಡವನ್ನು ಪುರುಷರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಯಲ್ಲಿ ಮಣಿಸಿದೆ. ತವರಿನ ಅಂಗಳದಲ್ಲಿ ಪಾಕ್ ಸ್ಥಿರ ಪ್ರದರ್ಶನ ನೀಡಿ ಅಬ್ಬರಿಸಿದೆ. ಈ ಮೂಲಕ ಪಾಕಿಸ್ತಾನ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಟಿ20 ವಿಶ್ವಕಪ್‌ಗೂ ಮುನ್ನ ಪಾಕಿಸ್ತಾನ ಗೆಲುವಿನ ಟ್ರ್ಯಾಕ್‌ಗೆ ಮರಳಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.

ಟಾಸ್ ಗೆದ್ದ ಪಾಕಿಸ್ತಾನ ತಂಡ ಮೊದಲು ಬ್ಯಾಟ್ ಮಾಡಿತು. ತಂಡದ ಆರಂಭಿಕರು ತಂಡಕ್ಕೆ ಉತ್ತಮ ಜೊತೆಯಾಟ ನೀಡಲಲ್ಲ. ಎರಡನೇ ವಿಕೆಟ್‌ಗೆ ಸೈಮ್ ಅಯೂಬ್ ಹಾಗೂ ನಾಯಕ ಸಲ್ಮಾನ್ ಅಲಿ ಅಘಾ ಜೊಡಿ ತಂಡಕ್ಕೆ ಆಧಾರವಾಯಿತು. ಈ ಜೋಡಿ ಪವರ್ ಪ್ಲೇನಲ್ಲಿ ಪಾಕಿಸ್ತಾನ ಮತ್ತೆ ವಿಕೆಟ್ ಬೀಳದಂತೆ ನೋಡಿಕೊಳ್ಳುವಲ್ಲಿ ಸಫಲವಾಯಿತು. ಈ ಜೊಡಿ 74 ರನ್ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ 3 ಬೌಂಡರಿ, 2 ಸಿಕ್ಸರ್ ನೆರವಿನಿಂದ 40 ರನ್ ಬಾರಿಸಿದ್ದ ಸೈಮ್ ಅಯೂಬ್ ಔಟ್ ಆದರು.
ನಾಯಕ ಸಲ್ಮಾನ್ ಅಘಾ 1 ಬೌಂಡರಿ, 4 ಸಿಕ್ಸರ್ ನೆರವಿನಿಂದ 39 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಸ್ಟಾರ್ ಆಟಗಾರ ಬಾಬರ್ ಅಜಮ್ 24 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಫಖರ್ ಜಮಾನ್ (10), ಉಸ್ಮಾನ್ ಖಾನ್ (18), ಮೊಹಮ್ಮದ್ ನವಾಜ್ (15) ತಂಡದ ಮೊತ್ತ ಹಿಗ್ಗಿಸಿದರು. ಪಾಕ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 168 ರನ್ ಸೇರಿಸಿತು. ಆಸ್ಟ್ರೇಲಿಯಾ ಪರ ಆಡಂ ಜಂಪಾ 4 ವಿಕೆಟ್ ಉರುಳಿಸಿದರು.

ರನ್ ಕಲೆ ಹಾಕಲು ಆಸೀಸ್ ಬ್ಯಾಟರ್ಸ್ ಪರದಾಟ
ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಮ್ಯಾಥ್ಯೂ ಶಾರ್ಟ್ (5), ಟ್ರಾವಿಸ್ ಹೆಡ್ (23), ಕ್ಯಾಮರೂನ್ ಗ್ರೀನ್ (36), ಮ್ಯಾಟ್ ರೆನ್ಶಾ (15), ಕ್ಸೇವಿಯರ್ ಬಾರ್ಟ್ಲೆಟ್ (ಅಜೇಯ 34), ಜೋಶ್ ಫಿಲಿಪ್ (12) ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಪರಿಣಾಮ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 146 ರನ್ ಸೇರಿಸಿತು. ಪಾಕ್ ಪರ ಸೈಮ್ ಅಯೂಬ್, ಅಬ್ರಾರ್ ಅಹ್ಮದ್ ತಲಾ 2 ವಿಕೆಟ್ ಕಬಳಿಸಿದರು. ಆಲ್‌ರೌಂಡರ್ ಆಟದ ಪ್ರದರ್ಶನ ನೀಡಿದ ಸೈಮ್ ಅಯೂಬ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಉಭಯ ತಂಡಗಳ ನಡುವಣ ಎರಡನೇ ಪಂದ್ಯ ಶನಿವಾರ (ಜ.31) ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications