ತವರಿನಲ್ಲಿ ಆಸ್ಟ್ರೇಲಿಯಾಕ್ಕೆ ಮುಖಭಂಗ: ಪಾಕ್‌ಗೆ ಸರಣಿ
ತವರಿನಲ್ಲಿ ಆಸ್ಟ್ರೇಲಿಯಾ ಭಾರೀ ಮುಖಭಂಗ ಅನುಭವಿಸಿದೆ. ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಜೋಶ್ ಇಂಗ್ಲಿಷ್ ಪಡೆ ಕೈ ಚೆಲ್ಲಿದೆ. ಈ ಮೂಲಕ ತವರಿನಲ್ಲಿ ನಡೆದ ಸರಣಿಯನ್ನು ಕೈ ಚೆಲ್ಲಿದೆ. ಮೂರನೇ ಏಕದಿನ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದ ಪಾಕ್ ಸರಣಿಯನ್ನು ವಶಕ್ಕೆ ಪಡೆದು ಬೀಗಿದೆ. ಆಸ್ಟ್ರೇಲಿಯಾ ತವರಿನಲ್ಲಿ ಮೊದಲ ಏಕದಿನ ಪಂದ್ಯವನ್ನು ಗೆದ್ದಿತ್ತು. ಎರಡನೇ ಹಾಗೂ ಮೂರನೇ ಪಂದ್ಯವನ್ನು ಪ್ರವಾಸಿ ತಂಡ ಗೆದ್ದು ಬೀಗಿದೆ.
ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 31.5 ಓವರ್‌ಗಳಲ್ಲಿ 140 ರನ್‌ಗಳಿಗೆ ಸರ್ವಪತನ ಕಂಡಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಪಾಕಿಸ್ತಾನ 26.5 ಓವರ್‌ಗಳಲ್ಲಿ 2 ವಿಕೆಟ್‌ಗೆ 143 ರನ್ ಸೇರಿಸಿ ಜಯ ಸಾಧಿಸಿದೆ. ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದ ಹ್ಯಾರೀಸ್ ರೌಫ್‌ಗೆ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಸಂದಿದೆ.

ಕಳಪೆ ಆರಂಭ
ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಆರಂಭಿಕ ಹಾಗೂ ಮಧ್ಯಮ ಕ್ರಮಾಂಕದ ಆಟಗಾರರು ಜವಾಬ್ದಾರಿಯುತ ಆಟವನ್ನು ಆಡುವಲ್ಲಿ ಎಡವಿತು. ತಂಡದ ಪರ ಉತ್ತಮ ಜೊತೆಯಾಟಗಳು ಬಾರದೇ ಇರುವುದು ತಂಡಕ್ಕೆ ಪೆಟ್ಟು ನೀಡಿತು. ಕೆಳ ಮಧ್ಯಮ ಕ್ರಮಾಂಕದ ಸೀನ್ ಅಬೋಟ್ 30 ರನ್ ಸಿಡಿಸಿದ್ದು, ತಂಡದ ಪರ ಗರಿಷ್ಠ ಸ್ಕೋರ್ ಆಗಿದೆ. ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ಪಾಕಿಸ್ತಾನ ಪರ ವೇಗಿ ಶಾಹಿನ್ ಶಾ ಅಫ್ರಿದಿ 32 ರನ್ ನೀಡಿ ಮೂರು ವಿಕೆಟ್ ಪಡೆದರೆ, ನಸೀಮ್ ಶಾ 54 ರನ್ ನೀಡಿ 3 ವಿಕೆಟ್ ಕಬಳಿಸಿದರು. ಉಳಿದಂತೆ ಹ್ಯಾರಿಸ್ ರೌಫ್ 7 ಓವರ್ ಬೌಲ್ ಮಾಡಿ 24 ರನ್ ನೀಡಿ 2 ವಿಕೆಟ್ ಪಡೆದರು.
ಭರ್ಜರಿ ಓಪನಿಂಗ್
ಗುರಿಯನ್ನು ಹಿಂಬಾಲಿಸಿದ ಪಾಕ್ ತಂಡದ ಆರಂಭ ಭರ್ಜರಿಯಾಗಿತ್ತು. ಸಾಯಿಮ್ ಅಯೂಬ್ ಹಾಗೂ ಅಬ್ದುಲ್ ಶಫೀಕ್ ಜೋಡಿ ಮೊದಲ ವಿಕೆಟ್‌ಗೆ 84 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಸಾಯಿಮ್ 42 ರನ್ ಸಿಡಿಸಿದರೆ, ಅಬ್ದುಲ್ ಶಫೀಕ್ 37 ರನ್ ಗಳಿಗೆ ಔಟ್ ಆದರು. ಪಾಕ್ ತಂಡದ ಭರವಸೆಯ ಬ್ಯಾಟರ್ ಬಾಬರ್ ಅಜಮ್ ಹಾಗೂ ಮೊಹಮ್ಮದ್ ರಿಜ್ವಾನ್ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು. ಬಾಬರ್ ಅಜೇಯ 28, ನಾಯಕ ರಿಜ್ವಾನ್ ಅಜೇಯ 30 ರನ್ ಸಿಡಿಸಿದರು.

ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವಣ ಏಕದಿನ ಸರಣಿ ಮುಗಿದಿದೆ. ಇನ್ನು ಉಭಯ ತಂಡಗಳ ನಡುವೆ ಟಿ20 ಸರಣಿಗಳು ನಡೆಯಬೇಕಿದೆ. ಈ ಸರಣಿಯ ಮೊದಲ ಪಂದ್ಯ ನವೆಂಬರ್ 14 ರಂದು ಬ್ರಿಸ್ಬೇನ್‌ನಲ್ಲಿ, ಎರಡನೇ ಪಂದ್ಯ ನವೆಂಬರ್ 16 ರಂದು ಸಿಡ್ನಿಯಲ್ಲಿ, ಮೂರನೇ ಪಂದ್ಯ ನವೆಂಬರ್ 18 ರಂದು ಹೋಬಾರ್ಟ್‌ನಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications