For Quick Alerts
ALLOW NOTIFICATIONS  
For Daily Alerts
 

ಬಗೆ ಹರಿಯದ ಬಾಯ್ಕಟ್‌ ವಿವಾದ: ಟಿ20 ವಿಶ್ವಕಪ್‌ ಆಡಲು ಲಂಕಾ ತಲುಪಿದ ಪಾಕ್ ತಂಡ

ಪಾಕಿಸ್ತಾನ, ಭಾರತದ ವಿರುದ್ಧ ಪಂದ್ಯವನ್ನು ಆಡುತ್ತದೋ ಇಲ್ಲವೋ ಎಂಬ ಬಗ್ಗೆ ಇನ್ನು ಯಾವುದೇ ಅಧಿಕೃತ ಮಾಹಿತಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ)ಯಿಂದ ಬಂದಿಲ್ಲ. ಈ ವೇಳೆ ಪಾಕಿಸ್ತಾನ ಕ್ರಿಕೆಟ್‌ ತಂಡ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ಶ್ರೀಲಂಕಾಕ್ಕೆ ತಲುಪಿದೆ. ಟಿ20 ವಿಶ್ವಕಪ್‌ 2026ರ ತನ್ನ ಎಲ್ಲ ಪಂದ್ಯಗಳನ್ನು ಪಾಕಿಸ್ತಾನ ಶ್ರೀಲಂಕಾದಲ್ಲಿ ಆಡಲಿದೆ. ಫೆಬ್ರವರಿ 7 ರಿಂದ ಪಾಕ್‌ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದ್ದು, ಇದಕ್ಕೂ ಮೊದಲು ಬುಧವಾರ ಪಾಕ್, ಐರ್ಲೆಂಡ್‌ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ.

ಸಲ್ಮಾನ್ ಅಲಿ ಆಘಾ ಮುಂದಾಳತ್ವದ ಪಾಕ್ ತಂಡ ಶ್ರೀಲಂಕಾಕ್ಕೆ ಬಂದಿರುವ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗಿವೆ. ತಂಡದೊಂದಿಗೆ ಸಹಾಯಕ ಸಿಬ್ಬಂದಿ ಸಹ ಪ್ರಯಾಣ ಬೆಳೆಸಿದ್ದಾರೆ. ಫೆಬ್ರವರಿ 15 ರಂದು ಭಾರತದ ವಿರುದ್ಧ ನಡೆಯಲಿರುವ ಲೀಗ್‌ ಹಂತದ ಪಂದ್ಯವನ್ನು ಪಾಕ್‌ ಬಾಯ್ಕಾಟ್‌ ಮಾಡುವುದಾಗಿ ತಿಳಿಸಿದೆ.

Pakistan team arrives in Sri Lanka

ಪಾಕಿಸ್ತಾನ ಹಾಗೂ ಭಾರತದ ಸಂಬಂಧಗಳು ಹದಗೆಡುತ್ತಿವೆ. ಈ ಬೆನ್ನಲ್ಲೇ ಪಾಕ್‌ ಹೊಸ ಬಾಯ್ಕಾಟ್‌ ನಾಟಕ ಆರಂಭಿಸಿದೆ. ಪಾಕ್ 20 ತಂಡಗಳು ಭಾಗವಹಿಸುವ ಈ ವಿಶ್ವಕಪ್‌ನಲ್ಲಿ ಎರಡನೇ ಬಾರಿಗೆ ಕಪ್‌ ಎತ್ತುವ ಕನಸು ಕಾಣುತ್ತಿದೆ. ಅಲ್ಲದೆ "ಎ" ಗುಂಪಿನಲ್ಲಿ ಸ್ಥಾನ ಪಡೆದಿದೆ. ಪಾಕ್‌ ಟಿ20 ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಫೆಬ್ರವರಿ 7 ರಂದು ನೆದರ್ಲ್ಯಾಂಡ್ಸ್ ವಿರುದ್ಧ ಆಡಲಿದೆ. ಫೆಬ್ರವರಿ 10 ರಂದು ಯುಎಸ್‌ಎ ವಿರುದ್ಧ, ಫೆಬ್ರವರಿ 18 ರಂದು ನಮೀಬಿಯಾ ವಿರುದ್ಧ ಕಾದಾಟ ನಡೆಸಲಿದೆ.

ಐಸಿಸಿ ಎಚ್ಚರಿಕೆ

ಪಾಕಿಸ್ತಾನ ಭಾರತದ ವಿರುದ್ಧದ ಪಂದ್ಯವನ್ನು ಆಡುತ್ತದೋ ಇಲ್ಲವೋ ಎಂಬ ಬಗ್ಗೆ ಸೋಮವಾರ ಅಧಿಕೃತ ಮಾಹಿತಿ ಘೋಷಿಸುವುದಾಗಿ ತಿಳಿಸಿತ್ತು. ಆದರೆ ಈ ವರೆಗೆ ಯಾವುದೇ ಪ್ರಕಟಣೆಯನ್ನು ಪಿಸಿಬಿ ಹೊರಡಿಸಿಲ್ಲ. ಈಗಾಗಲೇ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಪಾಕ್ ಪ್ರಧಾನಿ ಅವರೊಂದಿಗೆ ಈ ಸಂಬಂಧ ಚರ್ಚೆಗಳನ್ನು ನಡೆಸಿದ್ದಾರೆ. ಆದರೆ ಭಾರತದ ವಿರುದ್ಧದ ಪಂದ್ಯದ ಬಗ್ಗೆ ಇನ್ನು ಯಾವುದೇ ಮಾಹಿತಿ ಬಂದಿಲ್ಲ. ಒಂದುವೇಳೆ ಪಾಕಿಸ್ತಾನ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದರೆ, ಕಠಿಣ ಕ್ರಮ ಕೈಗೊಳ್ಳುವುದಾಗಿ ಈಗಾಗಲೇ ಐಸಿಸಿ ಎಚ್ಚರಿಕೆಯನ್ನು ನೀಡಿದೆ. ಮತ್ತೊಂದೆಡೆ, ಐಸಿಸಿ ನಿಯಮಗಳ ಪ್ರಕಾರ ಯಾವುದೇ ತಂಡವು ಪಂದ್ಯವನ್ನು ಬಹಿಷ್ಕರಿಸಿದರೆ ಅಂಕಗಳನ್ನು ಎದುರಾಳಿ ತಂಡಕ್ಕೆ ಬಿಟ್ಟುಕೊಡಬೇಕಾಗುತ್ತದೆ. ಇದು ಪಾಕಿಸ್ತಾನದ ಸೆಮಿಫೈನಲ್ ಹಾದಿಯನ್ನು ಕಠಿಣಗೊಳಿಸಬಹುದು.

ಟಿ20 ವಿಶ್ವಕಪ್‌ಗೆ ಪಾಕ್ ತಂಡ: ಸಲ್ಮಾನ್ ಅಲಿ ಅಘಾ, ಸಾಹಿಬ್ಜಾದಾ ಫರ್ಹಾನ್, ಉಸ್ಮಾನ್ ಖಾನ್, ಖವಾಜಾ ನಾಫೆ, ಫಖರ್ ಜಮಾನ್, ಮೊಹಮ್ಮದ್ ನವಾಜ್, ಬಾಬರ್ ಅಜಮ್, ಫಹೀಮ್ ಅಶ್ರಫ್, ಶದಬ್ ಖಾನ್, ಶಾಹೀನ್ ಶಾ ಅಫ್ರಿದಿ, ಅಬ್ರಾರ್ ಅಹ್ಮದ್, ನಸೀಮ್ ಶಾ, ಸೈಮ್ ಅಯೂಬ್, ಸಲ್ಮಾನ್ ಮಿರ್ಜಾ, ಉಸ್ಮಾನ್ ತಾರಿಕ್.

Story first published: Tuesday, February 3, 2026, 10:14 [IST]
Other articles published on Feb 3, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+