For Quick Alerts
ALLOW NOTIFICATIONS  
For Daily Alerts
 

Ind vs Pak: ಇದು ಏಕದಿನ ವಿಶ್ವಕಪ್ ಪಂದ್ಯದಂತೆ ಇರಲಿಲ್ಲ ಎಂದ ಪಾಕ್ ತಂಡದ ನಿರ್ದೇಶಕ

ಏಕದಿನ ವಿಶ್ವಕಪ್ 2023ರ ಪಂದ್ಯಾವಳಿಯಲ್ಲಿ ಬಹು ನಿರೀಕ್ಷಿತ ಪಂದ್ಯವಾದ ಭಾರತ ಪಾಕಿಸ್ತಾನ ಪಂದ್ಯಕ್ಕೆ ಭಾರಿ ಪ್ರಚಾರ ಮಾಡಲಾಗಿತ್ತು. 1.10 ಲಕ್ಷ ಜನ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಪಂದ್ಯಕ್ಕೆ ಸಾಕ್ಷಿಯಾದರು.

ಉಭಯ ತಂಡಗಳು ಬಲಿಷ್ಠವಾಗಿದ್ದ ಕಾರಣ ರೋಚಕ ಹಣಾಹಣಿ ನಿರೀಕ್ಷೆ ಮಾಡಲಾಗಿತ್ತಾದರೂ, ಭಾರತ ತಂಡ ಪ್ರಾಬಲ್ಯ ಮೆರೆಯಿತು. ಭಾರತದ ಸಂಘಟಿತ ದಾಳಿಗೆ ಸಿಲುಕಿದ ಪಾಕಿಸ್ತಾನ ಕೇವಲ 191 ರನ್‌ಗಳಿಗೆ ಆಲೌಟ್ ಆಯಿತು, . ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್ ಸೇರಿದಂತೆ ಐವರು ಭಾರತೀಯ ಬೌಲರ್‌ಗಳು ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು, ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಅವರ ಅತ್ಯುತ್ತಮ ಬ್ಯಾಟಿಂಗ್ ನೆರವಿನಿಂದ ಭಾರತ 7 ವಿಕೆಟ್‌ಗಳ ಜಯ ಸಾಧಿಸಿತು.

Pakistan Team Directors Unconventional Take on World Cup Loss to India

ಈ ಪಂದ್ಯದಲ್ಲಿ ಭಾರತ ತಂಡಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿತ್ತು, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನೀಲಿ ಸಮುದ್ರ ಇರುವಂತೆ ಭಾಸವಾಗುತ್ತಿತ್ತು. ಪಂದ್ಯದ ಬಳಿಕ ಮಾತನಾಡಿದ ಪಾಕಿಸ್ತಾನ ತಂಡದ ನಿರ್ದೇಶಕ ಮಿಕ್ಕಿ ಆರ್ಥರ್, ಇಂದಿನ ಪಂದ್ಯ ಐಸಿಸಿ ವಿಶ್ವಕಪ್‌ ಪಂದ್ಯ ಎನ್ನುವುದಕ್ಕಿಂತ ಬಿಸಿಸಿಐ ಕಾರ್ಯಕ್ರಮ ಎನಿಸಿತು ಎಂದರು.

ಪಾಕಿಸ್ತಾನಕ್ಕೆ ಬೆಂಬಲ ಸಿಗಲಿಲ್ಲ

ಈ ಬಗ್ಗೆ ವಿವರವಾಗಿ ಮಾತನಾಡಿದ ಮಿಕ್ಕಿ ಆರ್ಥರ್, 'ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದು ಐಸಿಸಿ ಕಾರ್ಯಕ್ರಮದಂತೆ ಕಾಣಲಿಲ್ಲ ಬದಲಾಗಿ ದ್ವಿಪಕ್ಷೀಯ ಸರಣಿಯಂತೆ ಕಾಣಿಸುತ್ತಿತ್ತು. ದಿಲ್ ದಿಲ್ ಪಾಕಿಸ್ತಾನ್ ಎಂದು ಮೈಕ್ರೋಫೋನ್‌ಗಳ ಮೂಲಕ ಆಗಾಗ್ಗೆ ಬರುತ್ತಿದ್ದರೂ, ಅದರ ತೀವ್ರತೆ ಹೆಚ್ಚಾಗಿರಲಿಲ್ಲ, ಮೈದಾನದಲ್ಲಿ ಬೆಂಬಲದ ಕೊರತೆಯಿಂದ ಪಾಕಿಸ್ತಾನ ತಂಡ ಸೋಲನ್ನಪ್ಪಿತು ಎಂದು ಸಮಜಾಯಿಷಿ ನೀಡಲಾಗದು' ಎಂದು ಹೇಳಿದರು.

"ಹೌದು, ಪ್ರೇಕ್ಷಕರ ಬೆಂಬಲ ಕೂಡ ಒಂದು ಪಾತ್ರವನ್ನು ವಹಿಸುತ್ತದೆ, ಆದರೆ ನಾನು ಅದನ್ನು ಕ್ಷಮಿಸಲು ಹೋಗುವುದಿಲ್ಲ ಏಕೆಂದರೆ ಅದು ನಮಗೆ ಈ ಕ್ಷಣವನ್ನು ಜೀವಿಸುವ ಬಗ್ಗೆ ಮಾತ್ರ ಗಮನ ಇರಬೇಕು, ಭಾರತ ತಂಡವನ್ನು ಹೇಗೆ ಎದುರಿಸಬೇಕು ಎಂದು ಅಷ್ಟೇ ನಾವು ಯೋಚನೆ ಮಾಡಬೇಕು, ಆದರೆ ಅದು ಆಗಲಿಲ್ಲ, ಇಂದು ಭಾರತ ತಂಡದ ದಿನ' ಎಂದು ಅವರು ಹೇಳಿದರು.
'ದಿಲ್ ದಿಲ್ ಪಾಕಿಸ್ತಾನ್' ಎಂಬುದು ದಿವಂಗತ ಜುನೈದ್ ಜಮ್ಶೆಡ್ ಅವರ ಮುಂದಾಳತ್ವದಲ್ಲಿ ಪ್ರಸಿದ್ಧ ಗುಂಪು ವೈಟಲ್ ಸೈನ್ಸ್ ಹಾಡಿರುವ ಜನಪ್ರಿಯ ಹಾಡು. ದಿಲ್ ದಿಲ್ ಪಾಕಿಸ್ತಾನ ಹಾಡು ಅಹಮದಾಬಾದ್‌ನಲ್ಲಿ ಕೇಳಲಿಲ್ಲ ಎಂದು ಆರ್ಥರ್ ಹೇಳಿದ್ದಕ್ಕೆ ಪತ್ರಕರ್ತರು ಮತ್ತಷ್ಟು ಪ್ರಶ್ನೆಗಳನ್ನು ಕೇಳಿದರು.

ವಿಶ್ವಕಪ್‌ನಲ್ಲಿ ಅದಕ್ಕೆ ಅವಕಾಶ ನೀಡಬೇಕೇ? ಎಂದು ಕೆಲವು ಪತ್ರಕರ್ತರು ಪ್ರಶ್ನೆ ಮಾಡಿದ್ದಕ್ಕೆ, "ನೋಡಿ, ನಾನು ಇನ್ನೂ ಅದರ ಬಗ್ಗೆ ಕಾಮೆಂಟ್ ಮಾಡಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ನಾನು ದಂಡವನ್ನು ಹಾಕಿಸಿಕೊಳ್ಳಲು ಬಯಸುವುದಿಲ್ಲ," ಆರ್ಥರ್ ಹೇಳಿದರು.

ಪಾಕ್ ತಂಡದ ಟೀಕೆ

ಪಾಕಿಸ್ತಾನ ತಂಡ ಉತ್ತಮ ಪ್ರದರ್ಶನ ನೀಡಲಿಲ್ಲ ಎಂದು ಮಿಕಿ ಆರ್ಥರ್ ಒಪ್ಪಿಕೊಂಡರು, ನಾವು ಇಂದು ಧೈರ್ಯವಾಗಿ ಪಂದ್ಯವನ್ನು ಆಡಲಿಲ್ಲ. ಇನ್ನೂ ಹೆಚ್ಚಿನ ರನ್ ಗಳಿಸಬೇಕಿತ್ತು, ಇದೊಂದು ದೊಡ್ಡ ಪಂದ್ಯ ಎಲ್ಲರಿಗೂ ಗೊತ್ತಿದೆ, ಒತ್ತಡದಲ್ಲಿ ಉತ್ತಮವಾಗಿ ಆಡಿದಾಗ ಮಾತ್ರ ಗೆಲುವು ಸಿಗುತ್ತದೆ ಎಂದು ಹೇಳಿದರು.

Story first published: Sunday, October 15, 2023, 10:25 [IST]
Other articles published on Oct 15, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+