Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Champions Trophy 2025: ಬಾಡಿಗೆ ಫ್ಲಡ್‌ಲೈಟ್ ಅಳವಡಿಸಿ ಟೂರ್ನಿ ನಡೆಸಲು ಮುಂದಾದ ಪಾಕಿಸ್ತಾನ

ಆಗಸ್ಟ್ 17 ಶನಿವಾರ, 2025ರ ಚಾಂಪಿಯನ್ಸ್ ಟ್ರೋಫಿ ಆಯೋಜನೆ ಮಾಡಲು ಪಾಕಿಸ್ತಾನ ನಿರಂತರವಾಗಿ ತಯಾರಿ ನಡೆಸುತ್ತಿದೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ಈ ಟೂರ್ನಿಯನ್ನು ಪಾಕಿಸ್ತಾನ ಆಯೋಜಿಸಲಿದೆ. ಇದಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹಣದ ಕೊರತೆ ಎದುರಿಸುತ್ತಿದೆ.

ಇಂತಹ ಪರಿಸ್ಥಿತಿಯಲ್ಲಿ ಹಣವನ್ನು ಉಳಿಸಲು ಪಿಸಿಬಿ ಮುಂದಾಗಿದ್ದು, ಕರಾಚಿ ಮತ್ತು ಲಾಹೋರ್ ಸ್ಟೇಡಿಯಂಗಳಿಗೆ ಫ್ಲಡ್‌ಲೈಟ್‌ಗಳನ್ನು ಬಾಡಿಗೆ ಪಡೆಯಲಿದೆ ಎಂದು ತಿಳಿದಬಂದಿದೆ. ಚಾಂಪಿಯನ್ ಟ್ರೋಫಿಗಾಗಿ ಕರಾಚಿ ಮತ್ತು ಲಾಹೋರ್ ಸ್ಟೇಡಿಯಂನಲ್ಲಿರುವ ಹಳೆಯ ಫ್ಲಡ್‌ಲೈಟ್‌ಗಳನ್ನು ಬದಲಾಯಿಸಬೇಕಿದೆ.

Pakistan to host 2025 Champions Trophy by installing rented floodlights

ಆದರೆ ಪಾಕಿಸ್ತಾನ ಹೊಸ ಫ್ಲಡ್‌ಲೈಟ್‌ಗಳನ್ನು ಖರೀದಿಸುವ ಬದಲು ಅವುಗಳನ್ನು ಒಂದು ವರ್ಷಕ್ಕೆ ಬಾಡಿಗೆಗೆ ಪಡೆಯಲು ನಿರ್ಧರಿಸಿದೆ. ಇದಲ್ಲದೆ, ಕರಾಚಿ ಮತ್ತು ಲಾಹೋರ್‌ ಸ್ಟೇಡಿಯಂಗಳಿಗೆ ಒಂದು ವರ್ಷಕ್ಕೆ ಫ್ಲಡ್‌ಲೈಟ್‌ಗಳನ್ನು ಬಾಡಿಗೆಗೆ ನೀಡಲು ಪಿಸಿಬಿ ಟೆಂಡರ್‌ಗಳನ್ನು ಆಹ್ವಾನಿಸಿದೆ.

ಕರಾಚಿ ಮತ್ತು ಲಾಹೋರ್ ಮೈದಾನದಲ್ಲಿ ಈಗಾಗಲೇ ಅಳವಡಿಸಲಾಗಿರುವ ಹಳೆಯ ಫ್ಲಡ್ ಲೈಟ್‌ಗಳನ್ನು ತೆಗೆದು ಕ್ವೆಟ್ಟಾ ಮತ್ತು ರಾವಲ್ಪಿಂಡಿಯ ಕ್ರೀಡಾಂಗಣಗಳಲ್ಲಿ ಅಳವಡಿಸುವ ಬಗ್ಗೆ ಪಾಕಿಸ್ತಾನದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇಷ್ಟೇ ಅಲ್ಲ, ಜನರೇಟರ್ ಬಾಡಿಗೆಗೂ ಪಿಸಿಬಿ ಮುಂದಾಗಿದೆ. ಕರಾಚಿ, ಲಾಹೋರ್, ರಾವಲ್ಪಿಂಡಿ, ಮುಲ್ತಾನ್, ಫೈಸಲಾಬಾದ್, ಅಬೋಟಾಬಾದ್, ಕ್ವೆಟ್ಟಾ, ಪೇಶಾವರ ಸ್ಟೇಡಿಯಂಗಳಿಗೆ ಜನರೇಟರ್‌ಗಳನ್ನು ಪೂರೈಸಲು ಪಿಸಿಬಿ ಟೆಂಡರ್ ಆಹ್ವಾನಿಸಿದೆ. ಮೇಲಿನ ಸ್ಟೇಡಿಯಂಗಳಲ್ಲಿ ಲೋಡ್ ಶೆಡ್ಡಿಂಗ್ ಸಮಸ್ಯೆ ಹೆಚ್ಚಿರುವುದರಿಂದ ಪಂದ್ಯದ ವೇಳೆ ವಿದ್ಯುತ್ ವ್ಯತ್ಯಯವಾಗದಂತೆ ಜನರೇಟರ್ ಗಳನ್ನು ಬಳಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ನೆಟ್ಟಿಗರಿಂದ ಟ್ರೋಲ್ ಶುರು

ಹಣ ಉಳಿಸಲು ಮುಂದಾಗಿರುವ ಪಾಕಿಸ್ತಾನದ ಪರಿಸ್ಥಿತಿಯನ್ನು ಕಂಡು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲು ಆರಂಭಿಸಿದ್ದಾರೆ. ವಿಶ್ವದ ಟಾಪ್ 10 ಶ್ರೀಮಂತ ಕ್ರಿಕೆಟ್ ಮಂಡಳಿಗಳ ಪಟ್ಟಿಯಲ್ಲಿ ಪಾಕಿಸ್ತಾನ ನಾಲ್ಕನೇ ಸ್ಥಾನದಲ್ಲಿದ್ದರೂ, ಇಂತಹ ಕೆಲಸಕ್ಕೆ ಪಾಕಿಸ್ತಾನ ಮುಂದಾಗಿರುವುದು ಸರಿಯಲ್ಲ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

ಒಬ್ಬ ಬಳಕೆದಾರರು ಕ್ರಿಕೆಟ್ ಮಂಡಳಿಯ ಬಳಿ ಹಣವಿಲ್ಲ, ಅವರು ಚಾಂಪಿಯನ್ಸ್ ಟ್ರೋಫಿಯನ್ನು ಹೇಗೆ ಆಯೋಜಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ? ಇತ್ತೀಚೆಗೆ ಲಾಹೋರ್ ಸ್ಟೇಡಿಯಂನಲ್ಲಿ ಬೆಳೆದಿದ್ದ ಭಾರೀ ಗಾತ್ರದ ಹುಲ್ಲುಗಳನ್ನು ಕಟಾವು ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹೀಗೆ ಚಿಂತಾಜನಕ ಸ್ಥಿತಿಯಲ್ಲಿರುವ ಪಾಕಿಸ್ತಾನ​ ಮಾತ್ರ ಬಡಾಯಿ ಕೊಚ್ಚಿಕೊಳ್ಳುತ್ತಿರುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ.

Story first published: Saturday, August 17, 2024, 19:21 [IST]
Other articles published on Aug 17, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+