Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ವಿಶ್ವಕಪ್‌ 2028ಕ್ಕೆ ಪಾಕ್ ಆತಿಥ್ಯ; ತಟಸ್ಥ ಸ್ಥಳದಲ್ಲಿ ಆಡಲಿರುವ ಭಾರತ

ಮಹಿಳಾ ಕ್ರಿಕೆಟ್‌ ಉತ್ತೇಜಿಸಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಹಲವು ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲು ನಿರ್ಧರಿಸಿದೆ. ಇದರ ಭಾಗವಾಗಿ ಪುರುಷರ ಕ್ರಿಕೆಟ್‌ನಂತೆ, ಮಹಿಳಾ ಕ್ರಿಕೆಟ್‌ನಲ್ಲಿ ಚಾಂಪಿಯನ್ಸ್ ಟ್ರೋಫಿಯೂ ಪ್ರಾರಂಭವಾಗಲಿದೆ. ಈ ಟೂರ್ನಿಗೆ ಸಂಬಂಧಿಸಿದಂತೆ ಮೇ 31 ರಂದು ಅಹಮದಾಬಾದ್‌ನಲ್ಲಿ ನಡೆದ ಐಸಿಸಿ ಉನ್ನತ ಮಟ್ಟದ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಮಹಿಳಾ 2027ರ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ ಆಗಲಿದೆ. ಮೊದಲು ಈ ಟೂರ್ನಿಯನ್ನು ಜೂನ್-ಜುಲೈನಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಈಗ ಇದನ್ನು ಫೆಬ್ರವರಿಯಲ್ಲಿ ಮರು ನಿಗದಿಪಡಿಸಲಾಗಿದೆ. ಈ ಮೆಗಾ ಟೂರ್ನಿಯಲ್ಲಿ ಒಟ್ಟು ಎಂಟು ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.

Pakistan

ಐಸಿಸಿ ಈ ಹಿಂದೆ ಜೂನ್-ಜುಲೈ 2027ರಲ್ಲಿ ಮಹಿಳಾ ಟಿ20 ಚಾಂಪಿಯನ್‌ಶಿಪ್‌ ನಡೆಸಲು ನಿಗದಿ ಪಡಿಸಲಾಗಿತ್ತು. ಆದರೆ ಇತ್ತೀಚೆಗೆ ಅಹಮದಾಬಾದ್‌ನಲ್ಲಿ ನಡೆದ ಸಭೆಯಲ್ಲಿ ಪಂದ್ಯಾವಳಿಯ ವೇಳಾಪಟ್ಟಿ ಪರಿಷ್ಕರಿಸಲಾಗಿದೆ. ಈಗ ಈ ಟೂರ್ನಿಯನ್ನು ಫೆಬ್ರವರಿ 14 ರಿಂದ 28, 2027 ರವರೆಗೆ ನಡೆಸಲು ತೀರ್ಮಾನಿಸಲಾಗಿದೆ. ಪುರುಷರ ಕ್ರಿಕೆಟ್‌ನಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಏಕದಿನ ಸ್ವರೂಪದಲ್ಲಿ ಆಡಲಾಗುತ್ತದೆ. ಆದರೆ ಮಹಿಳಾ ಪಂದ್ಯಾವಳಿಯನ್ನು ಟಿ 20 ಸ್ವರೂಪದಲ್ಲಿ ಆಡಲಾಗುತ್ತದೆ.

2028 ರಲ್ಲಿ ನಡೆಯಲಿರುವ ಮಹಿಳಾ ಟಿ 20 ವಿಶ್ವಕಪ್‌ಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ನೀಡಲಿದೆ. ಇನ್ನು ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಣ ಉದ್ವಿಗ್ನತೆಯಿಂದಾಗಿ, ಭಾರತ ತಂಡ ಪಾಕ್‌ ಪ್ರವಾಸವನ್ನು ಕೈಗೊಳ್ಳುವುದಿಲ್ಲ. ಹೀಗಾಗಿ ಭಾರತ ತಂಡ ತನ್ನ ಎಲ್ಲ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಡಲಿದೆ.

ತಟಸ್ಥ ಸ್ಥಳದಲ್ಲಿ ಪಂದ್ಯ

2025 ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತೀಯ ಪುರುಷರ ಕ್ರಿಕೆಟ್ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸಿರಲಿಲ್ಲ. ಇನ್ನು ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ಮಹಿಳಾ ವಿಶ್ವಕಪ್‌, ಈ ವರ್ಷ ನಡೆದಿದ್ದ ಟಿ20 ವಿಶ್ವಕಪ್‌ ಪಂದ್ಯಗಳು ನಡೆದಿದ್ದವು. ಈ ವೇಳೆ ಪಾಕ್‌ ಸಹ ಭಾರತಕ್ಕೆ ಪ್ರವಾಸ ಬೆಳೆಸಿರಲಿಲ್ಲ. ಅಲ್ಲದೆ ಪಾಕ್ ತನ್ನ ಎಲ್ಲ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡಿತ್ತು.

ಮಹಿಳಾ ಕ್ರಿಕೆಟ್‌ ಉತ್ತೇಜನಕ್ಕೆ ಯೋಜನೆ

ಮಹಿಳಾ ಕ್ರಿಕೆಟ್ ಅನ್ನು ಉತ್ತೇಜಿಸಲು ಐಸಿಸಿ ಹೊಸ ಪಂದ್ಯಾವಳಿಯನ್ನು ಪ್ರಾರಂಭಿಸಲು ಸಿದ್ಧತೆ ನಡೆಸಿದೆ. ಮಹಿಳಾ ಉದಯೋನ್ಮುಖ ರಾಷ್ಟ್ರಗಳ ಟ್ರೋಫಿ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಪಂದ್ಯಾವಳಿಯನ್ನು ಟಿ 20 ಸ್ವರೂಪದಲ್ಲಿಯೂ ಆಡಲಾಗುವುದು ಎಂದು ತಿಳಿದು ಬಂದಿದೆ. ಒಟ್ಟು 10 ತಂಡಗಳನ್ನು ಒಳಗೊಂಡ ಈ ಪಂದ್ಯಾವಳಿಯ ಬಗ್ಗೆ ಐಸಿಸಿ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ತಿಳಿದು ಬಂದಿದೆ.

Story first published: Monday, June 1, 2026, 20:21 [IST]
Other articles published on Jun 1, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+