ಕ್ರಿಕೆಟ್ ಪುನಾರಂಭ: ಜುಲೈನಲ್ಲಿ ಇಂಗ್ಲೆಂಡ್‌ಗೆ ತೆರಳಲು ಪಾಕಿಸ್ತಾನ 'ತಾತ್ವಿಕ ಒಪ್ಪಿಗೆ'

ಕೊರೊನಾ ವೈರಸ್ ಕಾರಣದಿಂದಾಗಿ ಎಲ್ಲಾ ಕ್ರೀಡಾ ಕೂಟಗಳು ರದ್ದಾಗಿದೆ. ಈ ಮಧ್ಯೆ ಕೆಲ ದೇಶಗಳಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬರುತ್ತಿದೆ. ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ನಿಯಂತ್ರಣಕ್ಕೆ ಬಾರದಿದ್ದರೂಅನಿವಾರ್ಯವಾಗಿ ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳ ಬೇಕಾದ ಪರಿಸ್ಥಿತಿಯಿದೆ. ಈ ಮಧ್ಯೆ ಪಾಕಿಸ್ತಾನ ಮತ್ತು ಇಂಗ್ಲೆಂಡ್ ವಿರುದ್ಧ ಕ್ರಿಕೆಟ್ ಸರಣಿ ಬಹುತೇಕ ನಡೆಯುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ.
ಪಾಕಿಸ್ತಾನ ಜುಲೈ ತಿಂಗಳಲ್ಲಿ ಇಂಗ್ಲೆಂಡ್ ವಿರುದ್ಧ 3 ಟೆಸ್ಟ್ ಪಂದ್ಯ ಮತ್ತು 3 ಟಿ20 ಪಂದ್ಯಗಳನ್ನು ಎದುರಿಸಬೇಕಾಗಿತ್ತು. ಆದರೆ ಕೊರೊನಾ ವೈರಸ್ ಕಾರಣದಿಂದಾಗಿ ಇದು ತೂಗುಯ್ಯಾಲೆಯಲ್ಲಿತ್ತು. ಆದರೆ ಈಗ ಈ ಸರಣಿ ನಡೆಯುವುದು ಬಹುತೇಕ ಖಚಿತವಾಗಿದೆ. ಇಂಗ್ಲೆಂಡ್ ಮತ್ತು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಈ ಬಗ್ಗೆ ವಿಸ್ತೃತ ಚರ್ಚೆಯನ್ನು ನಡಸಿದ್ದು ಪಾಕಿಸ್ತಾನ 'ತಾತ್ವಿಕ ಒಪ್ಪಿಗೆ' ನೀಡಿದೆ.
ಪಿಸಿಬಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಾಸಿಮ್ ಖಾನ್ ಈ ಬಗ್ಗೆ ಮಾತನಾಡಿ, ಸರಣಿ ಆಯೋಜನೆಯ ಬಗ್ಗೆ ನಾವು ಇಸಿಬಿ ಜೊತೆಗೆ ಸುದೀರ್ಘ ಚರ್ಚೆಯನ್ನು ನಡೆಸಿದ್ದೇವೆ. ಈ ಮಾತುಕತೆಯ ಬಳಿಕ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಇಂಗ್ಲೆಂಡ್ ಪ್ರವಾಸಕ್ಕೆ ಕಳುಹಿಸಲು ತಾತ್ವಿಕ ಒಪ್ಪಿಗೆಯನ್ನು ನೀಡಿದ್ದೇವೆ ಎಂದು ಅವರು ಹೆಳಿದರು.
ಪಾಕಿಸ್ತಾನ ಮತ್ತು ಇಂಗ್ಲೆಂಡ್ ವಿರುದ್ಧ ನಡೆಯುವ ಈ ಸರಣಿ ಪ್ರೇಕ್ಷಕರಿಲ್ಲದೆ ನಡೆಸುವ ತೀರ್ಮಾನವನ್ನು ತೆಗೆದುಕೊಳ್ಳಾಗಿದೆ. ಕ್ರೀಡಾಂಗಣದ ಒಳಗೆಯೇ ಹೋಟೆಲ್ ಇರುವ ಮೈದಾನಗಳಲ್ಲಿ ಪಂದ್ಯಗಳು ನಡೆಯಲಿದೆ. 25 ಕ್ರಿಕೆಟಿಗರು ಇಂಗ್ಲೆಂಡ್‌ಗೆ ವಿಶೇಷ ಚಾರ್ಟೆಡ್ ವಿಮಾನದಲ್ಲಿ ತೆರಳಲಿದ್ದಾರೆ. ಸರಣಿಗೂ ಮುನ್ನ ಕ್ವಾರಂಟೈನ್ ಅವಧಿಯನ್ನು ಆಟಗಾರರು ಪೂರೈಸುವ ನಿರ್ಧಾರವನ್ನು ಮಾಡಲಾಗಿದೆ ಎಂದು ಮಾಹಿತಿಯನ್ನು ಪಿಸಿಬಿ ನೀಡಿದೆ.
ಈ ಸರಣಿಯ ಬಗ್ಗೆ ಪಾಕಿಸ್ತಾನ ಟೆಸ್ಟ್ ತಂಡದ ನಾಯಕ ಅಝರ್ ಅಲಿ ಮತ್ತು ಸೀಮಿತ ಓವರ್‌ಗಳ ನಾಯಕ ಬಾಬರ್ ಅಜಮ್ ಜೊತೆಗೆ ಮುಂದಿನ ವಾರ ವಿವರಗಳನ್ನು ಹಂಚಿಕೊಳ್ಳುವುದಾಗಿ ಪಿಸಿಬಿ ಸಿಇಒ ವಾಸಿಮ್ ಖಾನ್ ಹೇಳಿದ್ದಾರೆ. ಆಟಗಾರರ ಆರೋಗ್ಯ ಇಲ್ಲಿ ಪ್ರಮುಖ ವಿಚಾರವಾಗಿರುತ್ತದೆ, ಯಾವುದೇ ಆಟಗಾರನಿಗೆ ಸರಣಿಯಲ್ಲಿ ಪಾಲ್ಗೊಳ್ಳಲು ಒತ್ತಡವನ್ನು ಹಾಕುವುದಿಲ್ಲ, ಮತ್ತು ಸರಣಿಯಲ್ಲಿ ಪಾಲ್ಗೊಳ್ಳುವ ಸ್ವಾತಂತ್ರ್ಯವನ್ನು ಆಟಗಾರರಿಗೆ ಬಿಡಲಾಗುತ್ತದೆ. ಪಾಲ್ಗೊಳ್ಳಲು ಇಚ್ಛಿಸದ ಆಟಗಾರರಿಗೆ ಯಾವುದೇ ಒತ್ತಡವನ್ನು ಹಾಕುವುದಿಲ್ಲ ಎಂದು ಪಿಸಿಬಿ ಹೇಳಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications