ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಮಾರ್ಟ್ ವಾಚ್ ಕಟ್ಟದಂತೆ ಪಾಕ್ ಕ್ರಿಕೆಟಿಗರಿಗೆ ಐಸಿಸಿ ಸೂಚನೆ

Pakistan told to stop wearing smartwatches by ICC anti-corruption team

ಲಂಡನ್, ಮೇ 26: ಪಂದ್ಯದ ವೇಳೆ ಕೈಗೆ ಸ್ಮಾರ್ಟ್ ವಾಚ್ ಕಟ್ಟದಿರುವಂತೆ ಪಾಕಿಸ್ತಾನ ಆಟಗಾರರಿಗೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನ ಭ್ರಷ್ಟಾಚಾರ ನಿಗ್ರಹದಳ ಎಚ್ಚರಿಸಿದೆ. ಮ್ಯಾಚ್ ಫಿಕ್ಸಿಂಗ್ ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಐಸಿಸಿ ಹೇಳಿದೆ.

ಸದ್ಯ ಪಾಕಿಸ್ತಾನ ತಂಡ ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಟೆಸ್ಟ್ ಸರಣಿಯನ್ನು ಆಡುತ್ತಿದೆ. ಈ ಸಂದರ್ಭ ಕೈಗೆ ಸ್ಮಾರ್ಟ್ ವಾಚ್ ಕಟ್ಟದಂತೆ ಐಸಿಸಿ ಸೂಚಿಸಿರುವುದಾಗಿ ಪಾಕ್ ಬೌಲರ್ ಹಸನ್ ಅಲಿ ಹೇಳಿದ್ದಾರೆ.

ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವೆ ಲಾರ್ಡ್ ನಲ್ಲಿ ನಡೆದ ಮೊದಲ ಟೆಸ್ಟ್ ದಿನದ ಪಂದ್ಯದ ಬಳಿಕ ಪಾಕ್ ಆಟಗಾರರನ್ನು ಭೇಟಿಯಾದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಭ್ರಷ್ಟಾಚಾರ ನಿಗ್ರಹದಳ ಇನ್ನುಮುಂದೆ ಪಂದ್ಯದ ವೇಳೆ ಆಟಗಾರರು ಸ್ಮಾರ್ಟ್ ವಾಚ್ ಕಟ್ಟಿಕೊಳ್ಳುವಂತಿಲ್ಲ ಎಂದು ಸೂಚಿಸಿದ್ದಾರೆ ಎಂದು ಹಸನ್ ತಿಳಿಸಿದರು.

ಸ್ಮಾರ್ಚ್ ವಾಚ್ ಗಳ ಮೂಲಕ ಸಂದೇಶ ಕಳುಹಿಸಬಹುದು. ಕರೆಗಳನ್ನು ಮಾಡಬಹುದು. ಇದು ಮ್ಯಾಚ್ ಫಿಕ್ಸಿಂಗ್ ಗೆ ಕಾರಣವಾಗುವ ಸಾಧ್ಯತೆಯಿದೆ. ಹೀಗಾಗಿ ಐಸಿಸಿ ಆಟಗಾರರಿಗೆ ಸ್ಮಾರ್ಟ್ ವಾಚ್ ಧರಿಸದಂತೆ ಸೂಚಿಸಿದೆ ಎನ್ನಲಾಗಿದೆ.

ಪಾಕಿಸ್ತಾನ ತಂಡದ ಬಾಬರ್ ಅಜಮ್ ಮತ್ತು ಅಸಾದ್ ಶಾಫಿಕ್ ಅವರು ಪಂದ್ಯದ ವೇಳೆ ಸ್ಮಾರ್ಟ್ ವಾಚ್ ಧರಿಸಿರುವುದನ್ನು ಐಸಿಸಿ ಅಧಿಕಾರಿಗಳು ಗಮನಸಿಸಿದ್ದರು. ಆದರೆ ಇವರು ಫಿಕ್ಸಿಂಗ್ ಅನುಮಾನಕ್ಕೀಡಾಗುವಂತೆ ನಡೆದುಕೊಂಡಿದ್ದು ಕಂಡುಬರಲಿಲ್ಲ. ಜೊತೆಗೆ ಆ ಸ್ಮಾರ್ಟ್ ವಾಚ್ ಮೊಬೈಲ್ ಫೋನ್ ಗೆ ಸಂಪರ್ಕ ಹೊಂದಿತ್ತೇ ಎಂಬುದರ ಬಗ್ಗೆಯೂ ಮಾಹಿತಿಯಿಲ್ಲ.

ಒಟ್ಟಿನಲ್ಲಿ ಇನ್ನುಮುಂದೆ ವ್ಯರ್ಥ ಅನುಮಾನಕ್ಕೆಡೆಮಾಡುವ ಸ್ಮಾರ್ಟ್ ವಾಚನ್ನು ಆಟಗಾರರು ಪಂದ್ಯದ ವೇಳೆ ಧರಿಸಬಾರದು ಎಂಬ ಸೂಚನೆಯನ್ನು ಐಸಿಸಿ ಹೊರಡಿಸಿದೆ.

Story first published: Saturday, May 26, 2018, 15:32 [IST]
Other articles published on May 26, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X