ಎರಡು ರನ್ ಗಳಿಸಲು ಒದ್ದಾಡಿದ ಪಾಕಿಸ್ತಾನ
ದುಬೈ, ಅ. 13 : ಕೊನೆಯ ಓವರ್‌ನಲ್ಲಿ ಬೇಕಿದ್ದಿದ್ದು ಕೇವಲ ಎರಡು ರನ್. ಬ್ಯಾಟಿಂಗ್ ಪಡೆಯ ಬಳಿ ಇದ್ದದ್ದು ಎರಡು ವಿಕೆಟ್. ಟಿ-20ಯ ಈ ಜಮಾನದಲ್ಲಿ ಎಂಥ ಗಟ್ಟಿ ಬೌಲರ್ ಆದರೂ ಕೊನೆ ಒವರ್ ಮೇಡನ್ ಎಸೆಯುವುದು ಕಷ್ವೇ ಬಿಡಿ. ಅದೂ ಚೆಸಿಂಗ್ ನಲ್ಲಿ! ಆದರೆ ಪಾರ್ಟ್ ಟೈಮ್ ಬೌಲರ್ ಒಬ್ಬರು ಭಾನುವಾರ ರಾತ್ರಿ ಮ್ಯಾಜಿಕ್ ಮಾಡಿದ್ದಾರೆ. ಕೈ ತಪ್ಪಿ ಹೋಗಿದ್ದ ಪಂದ್ಯವನ್ನು ವಾಪಸ್ ರಾಷ್ಟ್ರದ ಬುಟ್ಟಿಗೆ ಹಾಕಿದ್ದಾರೆ.
ದುಬೈನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 231 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನದ ಎಂಟು ವಿಕೆಟ್ ಪತನವಾಗಿತ್ತು. ಕೊನೆಯ ಓವರ್ ನಲ್ಲಿ ಕೇವಲ ಎರಡು ರನ್ ಬೇಕಿತ್ತು. ಆದರೆ ಗ್ಲೇನ್ ಮ್ಯಾಕ್ಸ್ ವೆಲ್ ಪಂದ್ಯದ ಸೊಹೇಲ್ ತನ್ವೀರ್ ಮತ್ತು ಮಹಮದ್ ಇರ್ಫಾನ್ ವಿಕೆಟ್ ಉರುಳಿಸಿದಲ್ಲದೇ ಮೇಡಿನ್ ಓವರ್ ಎಸೆದು ಆಸ್ಟ್ರೇಲಿಯಾಕ್ಕೆ ಜಯಮಾಲೆ ಹಾಕಿದರು.[ಅ.12 ರಿಂದ ಇಂಡಿಯನ್ ಸೂಪರ್ ಲೀಗ್]

ಒಂದು ವೇಳೆ ಪಂದ್ಯ ಸೋತಿದ್ದರೆ ಆಸ್ಟ್ರೇಲಿಯಾ ಏಕದಿನ ಶ್ರೇಯಾಂಕದಲ್ಲಿ ನಂ.1 ಸ್ಥಾನ ಕಳೆದುಕೊಳ್ಳಬೇಕಾಗಿತ್ತು. ಆದರೆ ಪಂದ್ಯ ಗೆಲ್ಲುವ ಮೂಲಕ 3-0 ದಿಂದ ಸರಣಿ ಕೈವಶ ಮಾಡಿಕೊಂಡಿತು.
ಪಾಕಿಸ್ತಾನಕ್ಕೆ ಬಾಲ್ ಟು ಬಾಲ್ ರನ್ ಬೇಕಾಗಿತ್ತು. ಈ ಸಂದರ್ಭ 47 ನೇ ಓವರ್ ನ 5 ನೇ ಎಸೆತವನ್ನು ಸಿಕ್ಸರ್ ಅಟ್ಟಿದ ಸೊಹೆಲ್ ತನ್ವೀರ್ ಪಾಕಿಸ್ತಾನದ ಆಟಗಾರರು ಮತ್ತು ಪ್ರೇಕ್ಷಕರಲ್ಲಿ ಸಂಚಲನ ಮೂಡಿಸಿದ್ದರು. ನಾಯಕ ಅಫ್ರೀದಿ ಪೆವಿಲಿಯನ್ ಕಂಬಕ್ಕೆ ಒರಗಿ ನಿಂತಿದ್ದರು. ಈ ಹಂತದಲ್ಲಿ ಆಸ್ಟ್ರೇಲಿಯಾದ ಮಿಸ್ ಫೀಲ್ಡ್ ಲಾಭ ಪಡೆದ ಪಾಕಿಸ್ತಾನ ಕೊನೆಯ ಓವರ್‌ನಲ್ಲಿ ಕೇವಲ ಎರಡು ರನ್ ಗಳಿಸಬೇಕಿತ್ತು.[ಶ್ರೀಮಂತರ ಪಟ್ಟಿ: ಟಾಪ್ 5ಕ್ಕೇರಿದ ಧೋನಿ]
ಮ್ಯಾಕ್ಸ್ ವೆಲ್ ಮ್ಯಾಜಿಕ್
50 ನೇ ಓವರ್ ಎಸೆಯಲು ಬಂದ ಮ್ಯಾಕ್ಸ್ ವೆಲ್ ಪಂದ್ಯ ಗೆಲ್ಲಿಸಿಕೊಡುತ್ತಾರೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಅತ್ತ ಒಂದು ಸಿಕ್ಸರ್ ನೆರವಿನಿಂದ 10 ರನ್ ಗಳಿಸಿದ್ದ ತನ್ವೀರ್ ಬ್ಯಾಟಿಂಗ್ ಮಾಡುತ್ತಿದ್ದರು. ಮೊದಲ ಎಸೆತ ಎದುರಿಸಿದ ತನ್ವೀರ್ ಯಾವ ರನ್ ಗಳಿಸಲಿಲ್ಲ. ಎರಡನೇ ಎಸತೆಕ್ಕೆ ದೊಡ್ಡ ಹೊಡೆತಕ್ಕೆ ಯತ್ನಿಸಿದ ತನ್ವೀರ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಆಗ ನಾಲ್ಕು ಎಸೆತಗಳಲ್ಲಿ ಎರಡು ರನ್ ಬೇಕಾಗಿತ್ತು.
ಬ್ಯಾಟಿಂಗ್ ಗೆ ಆಗಮಿಸಿದ ಕೊನೆಯ ಆಟಗಾರ ಮಹಮದ್ ಇರ್ಫಾನ್ ತಾವೆದುರಿಸಿದ ಮೊದಲ ಎಸೆತವನ್ನು ಬ್ಯಾಟ್‌ಗೆ ತಾಗಿಸಲಷ್ಟೇ ಶಕ್ತರಾದರು. ಆಫ್ ಸ್ಟಂಪ್ ನಿಂದ ಹೊರಕ್ಕೆ ಎಸೆದ ನಾಲ್ಕನೇ ಎಸೆತದಲ್ಲಿ ಪಾಕಿಸ್ತಾನಕ್ಕೆ ಯಾವ ರನ್ ಲಭ್ಯವಾಗಲಿಲ್ಲ. ಐದನೇ ಎಸೆತದಲ್ಲೂ ಇದೇ ಪುನರಾವರ್ತನೆಯಾಗಿತ್ತು. ಕೊನೆಯ ಬಾಲ್‌ಗೆ ಎರಡು ರನ್ ಬೇಕಿದ್ದಾಗ ಇರ್ಫಾನ್ ದೊಡ್ಡ ಹೊಡೆತಕ್ಕೆ ಯತ್ನಿಸಿದರು. ಆದರೆ ಅದು ಮಿಸ್ ಟೈಮಿಂಗ್ ಆಗಿ ಹತ್ತಿರದಲ್ಲೇ ಇದ್ದ ಫೀಲ್ಡರ್ ಕೈ ಸೇರಿತ್ತು.
ಒಂದು ರನ್‌ನಿಂದ ಗೆದ್ದ ಆಸ್ಟ್ರೇಲಿಯಾ ಏಕದಿನ ಶ್ರೇಯಾಂಕ ಭದ್ರಪಡಿಸಿಕೊಂಡಿತು. ಇತ್ತ ಹೊಸದಾಗಿ ಪಾಕಿಸ್ತಾನದ ನಾಯಕತ್ವ ವಹಿಸಿಕೊಂಡಿದ್ದ ಅಫ್ರೀದಿ ನಿರಾಶೆ ಅನುಭವಿಸಿದರು. ಪಂದ್ಯದ ನಿಜವಾದ ಹೀರೋ ಆಗಿ ಮೂಡಿಬಂದಿದ್ದು ಮ್ಯಾಕ್ಸ್ ವೆಲ್.
ಸ್ಕೋರ್ ಕಾರ್ಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications