PAK vs BAN: ತವರಿನಲ್ಲಿ ಪಾಕ್ ಸದ್ದಡಗಿಸಿದ ಬಾಂಗ್ಲಾ
ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಡುವಣ ಟೆಸ್ಟ್ ಸರಣಿಯ ಮೊದಲ ಪಂದ್ಯ ನಡೆಯುತ್ತಿದೆ. ಮೂರನೇ ಪಂದ್ಯ ರೋಚಕತೆ ಹೆಚ್ಚಿಸಿದೆ. ಪಾಕ್‌ಗೆ ಪ್ರವಾಸಿ ತಂಡ ಭರ್ಜರಿ ತಿರುಗೇಟು ನೀಡಿದೆ. ಈ ಮೂಲಕ ತಮ್ಮನ್ನು ಹಗುರವಾಗಿ ಪರಿಗಣಿಸಿದಿ ಎಂದು ಸಂದೇಶವನ್ನು ರವಾನಿಸಿದೆ.
ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನವಾದ ಶುಕ್ರವಾರ ಬಾಂಗ್ಲಾ ವಿಕೆಟ್ ನಷ್ಟವಿಲ್ಲದೆ 27 ರನ್‌ಗಳಿಂದ ಆಟ ಮುಂದುವರಿಸಿ, ದಿನದಾಟದಂತ್ಯಕ್ಕೆ 5 ವಿಕೆಟ್‌ಗೆ 316 ರನ್ ಸೇರಿಸಿ ಉತ್ತಮ ಸ್ಥಿತಿಯಲ್ಲಿದೆ. ಬಾಂಗ್ಲಾ ಪರ ಮುಷ್ಫೀಕರ್ ರಹೀಮ್ ಹಾಗೂ ಲಿಟನ್ ದಾಸ್ ಅರ್ಧಶತಕ ಬಾರಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಭರ್ಜರಿ ಜೊತೆಯಾಟ ಆಟ
ಬಾಂಗ್ಲಾದೇಶದ ಪರ ಶದ್ಮನ್ ಇಸ್ಲಾಂ ಹಾಗೂ ಜಕೀರ್ ಹಸನ್ ಇನಿಂಗ್ಸ್ ಆರಂಭಿಸಿದರು. ಜಕೀರ್ 13, ನಜ್ಮುಲ್ 16 ರನ್‌ಗಳಿಗೆ ಆಟ ಮುಗಿಸಿದರು. 53 ರನ್ ಆಗುವಷ್ಟರಲ್ಲಿ ಪ್ರಮುಖ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಬಾಂಗ್ಲಾ ತಂಡಕ್ಕೆ ಶದ್ಮನ್ ಇಸ್ಲಾಂ ಹಾಗೂ ಮೊಮಿನುಲ್ ಹಕ್ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು.
ಆರಂಭಿಕನ ಅಬ್ಬರ
ಈ ಜೋಡಿಯನ್ನು ಕಟ್ಟಿಹಾಕಲು ಪಾಕ್ ಹರಸಾಹಸ ಪಟ್ಟಿತು. ಆದರೆ ಈ ಜೋಡಿ ಅವರ ರಣ ತಂತ್ರವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿ ರನ್ ಕಲೆ ಹಾಕುತ್ತಾ ಸಾಗಿತು. ಈ ಜೋಡಿ ಮೂರನೇ ವಿಕೆಟ್‌ಗೆ 94 ರನ್ ಜೊತೆಯಾಟಗಳ ಕಾಣಿಕೆ ನೀಡಿದರು. ಮೊಮಿನುಲ್ 50 ರನ್‌ಗಳಿಗೆ ಆಟ ಮುಗಿಸಿದರು. ಶದ್ಮನ್ ಇಸ್ಲಾಂ 12 ಬೌಂಡರಿ ಸೇರಿದಂತೆ 93 ರನ್ ಸಿಡಿಸಿ ಔಟ್ ಆದರು.
ಸ್ಟಾರ್ ಆಲ್‌ರೌಂಡರ್ ಶಕೀಬ್ ಅಲ್ ಹಸನ್ (15) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು.
ಅನುಭವಿಗಳ ದರ್ಬಾರ್
ಬಾಂಗ್ಲಾದೇಶ ತಂಡ ಅನುಭವಿಗಳಾದ ಮುಷ್ಫೀಕರ್ ರಹೀಮ್ ಹಾಗೂ ಲಿಟನ್ ದಾಸ್ ತಾಳ್ಮೆಯ ಆಟವನ್ನು ಪ್ರದರ್ಶಿಸಿದರು. ಈ ಜೋಡಿ ಪಾಕ್ ಬೌಲರ್‌ಗಳನ್ನು ಕಾಡಿತು. ಈ ಜೋಡಿ ಆರನೇ ವಿಕೆಟ್‌ಗೆ ಅಜೇಯ 98 ರನ್‌ಗಳ ಜೊತೆಯಾಟ ನೀಡಿತು. ಈ ಜೋಡಿ ನಾಲ್ಕನೇ ದಿನದಾಟದಲ್ಲಿ ಎಚ್ಚರಿಕೆಯ ಆಟವನ್ನು ಆಡಿ ಇನಿಂಗ್ಸ್ ಮುನ್ನಡೆ ಸಾಧಿಸುವ ಕನಸು ಕಾಣುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications