Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯಾ ಕಪ್: ಪಾಕ್ ವಿರುದ್ಧ ರೋಚಕ ಜಯ ಸಾಧಿಸಿದ ಬಾಂಗ್ಲಾ ಫೈನಲ್ ಗೆ

Pakistan vs Bangladesh, Super Four, Match 6 - Live Score

ದುಬೈ, ಸೆಪ್ಟೆಂಬರ್ 26: ಮುಷ್ಫಿಕುರ್ ರಹೀಮ್ ಆಕರ್ಷಕ ಬ್ಯಾಟಿಂಗ್, ಮುಸ್ತಫಿಝುರ್ ರಹಮಾನ್ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಪಾಕಿಸ್ತಾನ ತಂಡ ಏಷ್ಯಾ ಕಪ್ ಸೂಪರ್ ಫೋರ್ 6ನೇ ಪಂದ್ಯದಲ್ಲಿ ಬಾಂಗ್ಲಾ ದೇಶದ ವಿರುದ್ಧ 37 ರನ್ ಗಳಿಂದ ಶರಣಾಗಿದೆ. ಪ್ರಶಸ್ತಿ ಸುತ್ತಿನಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಶುಕ್ರವಾರ (ಸೆಪ್ಟೆಂಬರ್ 28) ಸೆಣಸಾಡಲಿವೆ.

ಸ್ಕೋರ್ ಕಾರ್ಡ್ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
44057

ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಬಾಂಗ್ಲಾಕ್ಕೆ ಮುಷ್ಫಿಕುರ್ ರಹೀಮ್ ಮತ್ತು ಮೊಹಮ್ಮದ್ ಮಿಥುನ್ ಅವರ ಭರ್ಜರಿ ಅರ್ಧ ಶತಕ ನೆರವು ದೊರೆಯಿತು. ರಹೀಮ್ 99, ಮಿಥುನ್ 60 ರನ್ ಸೇರಿಸಿ ತಂಡಕ್ಕೆ ರನ್ ಬಲ ತುಂಬಿದರು. ಬಾಂಗ್ಲಾ 50 ಓವರ್ ಮುಕ್ತಾಯಕ್ಕೆ ಎಲ್ಲಾ ವಿಕೆಟ್ ಕಳೆದು 239 ರನ್ ಪೇರಿಸಿತು.

ಬಾಂಗ್ಲಾ ನೀಡಿದ್ದ 240 ರನ್ ಗುರಿ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಆರಂಭದಿಂದಲೂ ಆಘಾತ ಎದುರಾಯಿತು. ಆರಂಭಿಕ ಆಟಗಾರ ಫಕರ್ ಜಮಾನ್ ಕೇವಲ 1 ರನ್ ಪೇರಿಸಿ ಔಟಾದರು. ಇಮಾಮ್ ಉಲ್ ಹಕ್ 83, ಶೋಯೆಬ್ ಮಲ್ಲಿಕ್ 30, ಆಸಿಫ್ ಆಲಿ 31 ರನ್ ಸೇರಿಸಿದ್ದೇ ಹೆಚ್ಚೆನಿಸಿತು. ಮುಸ್ತಫಿಝುರ್ ರಹಮಾನ್ ಪಾಕ್ 4 ವಿಕೆಟ್ ಕಬಳಿಸಿ ಗಮನ ಸೆಳೆದರು.

ಬ್ಯಾಟ್ಸ್ಮನ್ ಗಳ ಬೆಂಬಲವಿಲ್ಲದೆ ಇಕ್ಕಟ್ಟಿಕ್ಕೀಡಾದ ಪಾಕ್ ಬೇಗನೆ ವಿಕೆಟ್ ಕಳೆದುಕೊಳ್ಳುತ್ತ ಬಂತು. ಅಂತಿಮವಾಗಿ ಪಾಕ್ 50 ಓವರ್ ಗಳಲ್ಲಿ 9 ವಿಕೆಟ್ ಕಳೆದು 202 ರನ್ ಪೇರಿಸಲಷ್ಟೇ ಶಕ್ತವಾಯಿತು. ಬಾಂಗ್ಲಾ ತಂಡದ ಮುಷ್ಫಿಕುರ್ ರಹೀಮ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ಪಾಕಿಸ್ತಾನ ತಂಡ: ಇಮಾಮ್ ಉಲ್ ಹಕ್, ಫಖರ್ ಜಮಾನ್, ಬಾಬರ್ ಅಝಾಮ್, ಶೋಯೆಬ್ ಮಲ್ಲಿಕ್, ಸರ್ಫರಾಜ್ ಅಹ್ಮದ್ (ಸಿ / ಸಿ), ಆಸಿಫ್ ಅಲಿ, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಜುನೈದ್ ಖಾನ್, ಶಾಹೈನ್ ಅಫ್ರಿದಿ.

ಬಾಂಗ್ಲಾ ತಂಡ: ಲಿಟಾನ್ ದಾಸ್, ಸೌಮ್ಯ ಸರ್ಕಾರ್, ಮೊಹಮ್ಮದ್ ಮಿಥುನ್, ಮುಷ್ಫಿಕರ್ ರಹೀಮ್ (W), ಮೊಮಿನುಲ್ ಹಕ್, ಇಮ್ರುಲ್ ಕೇಸ್, ಮಹಮೂದುಲ್ಲಾ, ಮಷ್ರಫೇ ಮೊರ್ಟಾಜಾ (ಸಿ), ಮೆಹಿದ್ ಹಸನ್, ರುಬೆಲ್ ಹುಸೇನ್, ಮುಸ್ತಾಫಿಜರ್ ರಹಮಾನ್.

Story first published: Thursday, September 27, 2018, 1:37 [IST]
Other articles published on Sep 27, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+