For Quick Alerts
ALLOW NOTIFICATIONS  
For Daily Alerts
 

Pak vs Eng 1st Test : ಒಂದು ಓವರ್‌ನಲ್ಲಿ ಆರು ಬೌಂಡರಿ: ಇಂಗ್ಲೆಂಡ್ ಪರ ವಿಶೇಷ ದಾಖಲೆ ಬರೆದ ಬ್ರೂಕ್

Pakistan vs England: England batter Harry Brook hits 6 fours in one over

ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಿದ್ದು ಮೊದಲ ಟೆಸ್ಟ್ ಪಂದ್ಯ ರಾವಲ್ಪಿಂಡಿಯಲ್ಲಿ ಆಯೋಜನೆಯಾಗಿದೆ. ಮೊದಲ ಪಂದ್ಯ ಮೊದಲ ದಿನದಾಟದಲ್ಲಿ ಇಂಗ್ಲೆಂಡ್ ತಂಡ ಸ್ಪೋಟಕ ಪ್ರದರ್ಶನ ನೀಡಿದ್ದು ಮೊದಲ ದಿನದಾಟದಲ್ಲಿ ಭರ್ಜರಿ 506 ರನ್‌ಗಳಿಸಿದೆ. ಈ ಪಂದ್ಯದಲ್ಲಿ ಶತಕ ಸಿಡಿಸಿದ ಹ್ಯಾರಿ ಬ್ರೂಕ್ ವಿಶೇಷ ದಾಖಲೆಯೊಂದನ್ನು ಇಂಗ್ಲೆಂಡ್ ಪರವಾಗಿ ಬರೆದಿದ್ದಾರೆ.

ಇಂಗ್ಲೆಂಡ್ ತಂಡದ ಪರವಾಗಿ ಮೊದಲ ದಿನ ನಾಲ್ವರು ಆಟಗಾರರು ಶತಕ ಸಿಡಿಸಿದ್ದಾರೆ. ನಾಲ್ಕೇ ಆಟಗಾರನಾಗಿ ಶತಕ ಸಿಡಿಸಿದ ಬ್ರೂಕ್ ಕೇವಲ 80 ಎಸೆತಗಳಲ್ಲಿ ಶತಕದ ಸಾಧನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬ್ರೂಕ್ ಪಾಕಿಸ್ತಾನದ ಸ್ಪಿನ್ನರ್ ಸೌದ್ ಶಕೀಲ್ ಅವರ ಓವರ್‌ನಲ್ಲಿ ಎಲ್ಲಾ ಆರು ಎಸೆತಗಳನ್ನು ಕೂಡ ಬೌಂಡರಿಗಟ್ಟಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಕೇವಲ 5ನೇ ಆಟಗಾರ ಎನಿಸಿಕೊಂಡಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತಂಡ ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭಿಕರಾದ ಜಾಕ್ ಕ್ರಾವ್ಲೆ ಹಾಗೂ ಬೆನ್ ಡಕ್ಕೆಟ್ ಜೋಡಿ ಮೊದಲ ವಿಕೆಟ್‌ಗೆ 233 ರನ್‌ಗಳನ್ನು ಗಳಿಸಿದರು. ಈ ಇಬ್ಬರು ಕೂಡ ಶತಕ ಸಿಡಿಸಿ ವಿಕೆಟ್ ಕಳೆದುಕೊಂಡರು. ಕ್ರಾವ್ಲೆ 122 ರನ್‌ಗಳಿಸಿದರೆ ಡಕ್ಕೆಟ್ 107 ರನ್‌ಗಳಿಸಿದರು. ಬಳಿಕ ಬಂದ ಒಲ್ಲೀ ಪೋಪ್ ಕೂಡ 108 ರನ್‌ಗಳನ್ನು ಸಿಡಿಸಿದರು. ಜೋ ರೂಟ್ ಒಬ್ಬರೇ 23ರನ್‌ಗಳಿಸಿ ಔಟಾಗುವ ಮೂಲಕ ನಿರಾಸೆ ಅನುಭವಿಸಿದರು.

ಬಳಿಕ ಬಂದ ಹ್ಯಾರಿ ಬ್ರೂಕ್ ಕೂಡ ಸ್ಪೋಟಕವಾಗಿ ಬ್ಯಾಟ್ ಬೀಸಿದ್ದು 101 ರನ್‌ಗಳಿಸಿ ಅಜೇಯವಾಗುಳಿದಿದ್ದಾರೆ. ಬೆನ್ ಸ್ಟೋಕ್ಸ್ ಕೂಡ ಕ್ರೀಸ್‌ನಲ್ಲಿದ್ದು 15 ಎಸೆತಗಳಲ್ಲಿ 34 ರನ್ ಸಿಡಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ. ಹೀಗಾಗಿ ಮೊದಲ ದಿನದಾಟದಲ್ಲಿ ಇಂಗ್ಲೆಂಡ್ ತಂಡ ಕೇವಲ 4 ವಿಕೆಟ್ ಕಳೆದುಕೊಂಡಿದ್ದು 506 ರನ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು. ಇಂಗ್ಲೆಂಡ್ ತಂಡದ ಪರವಾಗಿ ಬರೊಬ್ಬರಿ ನಾಲ್ವರು ಆಟಗಾರರು ಮೊದಲ ದಿನೇ ಶತಕ ದಾಖಲಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳು ನಿಬ್ಬೆರಗಾಗುವಂತೆ ಮಾಡಿದ್ದಾರೆ

ಪಾಕಿಸ್ತಾನ ಆಡುವ ಬಳಗ: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಅಜರ್ ಅಲಿ, ಬಾಬರ್ ಅಜಮ್ (ನಾಯಕ), ಸೌದ್ ಶಕೀಲ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ನಸೀಮ್ ಶಾ, ಮೊಹಮ್ಮದ್ ಅಲಿ, ಹಾರಿಸ್ ರೌಫ್, ಜಾಹಿದ್ ಮಹಮೂದ್
ಬೆಂಚ್: ಶಾನ್ ಮಸೂದ್, ಸರ್ಫರಾಜ್ ಅಹ್ಮದ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ನೌಮನ್ ಅಲಿ, ಫಹೀಮ್ ಅಶ್ರಫ್, ಅಬ್ರಾರ್ ಅಹ್ಮದ್

ಇಂಗ್ಲೆಂಡ್ ಆಡುವ ಬಳಗ: ಝಾಕ್ ಕ್ರಾಲಿ, ಬೆನ್ ಡಕೆಟ್, ಆಲಿ ಪೋಪ್ (ವಿಕೆಟ್ ಕೀಪರ್), ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಲಿಯಾಮ್ ಲಿವಿಂಗ್ಸ್ಟೋನ್, ವಿಲ್ ಜ್ಯಾಕ್ಸ್, ಜ್ಯಾಕ್ ಲೀಚ್, ಆಲಿ ರಾಬಿನ್ಸನ್, ಜೇಮ್ಸ್ ಆಂಡರ್ಸನ್
ಬೆಂಚ್: ಕೀಟನ್ ಜೆನ್ನಿಂಗ್ಸ್, ಬೆನ್ ಫೋಕ್ಸ್, ಜೇಮೀ ಓವರ್ಟನ್, ರೆಹಾನ್ ಅಹ್ಮದ್, ಮಾರ್ಕ್ ವುಡ್

Story first published: Friday, December 2, 2022, 5:35 [IST]
Other articles published on Dec 2, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+