ಪಾಕ್ vs ಕಿವೀಸ್ ಟೆಸ್ಟ್: 8 ವರ್ಷಗಳ ಬಳಿಕ ಸರ್ಫರಾಜ್ ಶತಕ; 2ನೇ ಪಂದ್ಯವೂ ರೋಚಕ ಡ್ರಾದಲ್ಲಿ ಅಂತ್ಯ

ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಕೂಡ ರೋಚಕವಾಗಿ ಅಂತ್ಯವಾಗಿದೆ. ಕೊನೆಯ ಹಂತದವರೆಗೂ ಎಲ್ಲಾ ಮೂರು ಫಲಿತಾಂಶಕ್ಕೂ ಅವಕಾಶವಿದ್ದ ಈ ಪಂದ್ಯ ಅಂತಿಮವಾಗಿ ಡ್ರಾದಲ್ಲಿ ಅಂತ್ಯಕಂಡಿದೆ. ಪಾಕಿಸ್ತಾನದ ಅನುಭವಿ ಆಟಗಾರ ಮಾಜಿ ನಾಯಕ ಸರ್ಫರಾಜ್ ಖಾನ್ ಈ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದು 8 ವರ್ಷಗಳ ಬಳಿಕ ಟೆಸ್ಟ್ ಮಾದರಿಯಲ್ಲಿ ಶತಕದ ಸಾಧನೆ ಮಾಡಿದಂತಾಗಿದೆ.
ಕರಾಚಿ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಎರಡು ತಂಡಗಳು ಕೂಡ ಬಹುತೇಕ ಸಮಬಲದ ಹೋರಾಟ ಪ್ರದರ್ಶಿಸಿದ್ದವು. 41 ರನ್‌ಗಳ ಅಲ್ಪ ಮೊತ್ತದ ಮುನ್ನಡೆ ಪಡೆದುಕೊಂಡಿದ್ದ ನ್ಯೂಜಿಲೆಂಡ್ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ 277 ರನ್‌ಗಳಿಗೆ ಡಿಕ್ಲೇರ್ ಮಾಡುವ ಮೂಲಕ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿತ್ತು. ಹೀಗಾಗಿ ಪಾಕಿಸ್ತಾನಕ್ಕೆ ಗೆಲ್ಲಲು 319 ರನ್‌ಗಳ ಗುರಿ ನಿಗದಿಪಡಿಸಿತು ನ್ಯೂಜಿಲಂಡ್ ತಂಡ.

ರೋಚಕತೆ ಮೂಡಿಸಿದ್ದ ಅಂತಿಮ ದಿನದಾಟ
ನಾಲ್ಕನೇ ದಿನದಾಟದ ಅಂತ್ಯದಲ್ಲಿ ಈ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಪಾಕಿಸ್ತಾನ ಆಘಾತಕಾರಿ ಆರಂಭ ಪಡೆಯಿತು. ರನ್ ಖಾತೆ ತೆರೆಯುವ ಮುನ್ನವೇ 2 ವಿಕೆಟ್ ಕಳೆದುಕೊಂಡ ಪಾಕಿಸ್ತಾನ ದಿನದಾಟವನ್ನು ಅಂತ್ಯಗೊಳಿಸಿತು. ಹೀಗಾಗಿ ಅಂತಿಮ ದಿನ ಪಾಕಿಸ್ತಾನಕ್ಕೆ ಗೆಲ್ಲಲ್ಲು 8 ವಿಕೆಟ್‌ಗಳಲ್ಲಿ 319 ರನ್‌ಗಳನ್ನು ಗಳಿಸಬೇಕಿತ್ತು. ಈ ಮೂಲಕ ನ್ಯೂಜಿಲೆಂಡ್ ತಂಡ ಪಂದ್ಯದಲ್ಲಿ ಬಿಗಿ ಹಿಡಿತವನ್ನು ಸಾಧಿಸುವಲ್ಲಿ ಯಶಸ್ವಿಯಾಯಿತು.

ಕುಸಿದ ಅಗ್ರಕ್ರಮಾಂಕ, ಸರ್ಫರಾಜ್ ಆಸರೆ
ಮತ್ತೊಂದೆಡೆ ಐದನೇ ದಿನವೂ ಪಾಕಿಸ್ತಾನದ ಆರಂಭ ಉತ್ತಮವಾಗಿರಲಿಲ್ಲ. 80 ರನ್ ಗಳಿಸುವಷ್ಟರಲ್ಲಿ ಪಾಕ್ ಪಡೆ 5 ವಿಕೆಟ್ ಕಳೆದುಕೊಂಡಿತ್ತು. ನಾಯಕ ಬಾಬರ್ ಅಜಂ ಸಹಿತ ಅಗ್ರ ಕ್ರಮಾಂಕದ ಪ್ರಮುಖ ಆಟಗಾರರು ಫೆವಿಲಿಯನ್ ಸೇರಿಕೊಂಡಾಗಿತ್ತು. ಆದರೆ ಈ ಸಂದರ್ಭದಲ್ಲಿ ಪಾಕಿಸ್ತಾನ ತಂಡಕ್ಕೆ ಆಸರೆಯಾಗಿದ್ದು ಮಾಜಿ ನಾಯಕ ಸರ್ಫರಾಜ್ ಖಾನ್ ಹಾಗೂ ಸೌದ್ ಶಕೀಲ್. ಸರ್ಫರಾಜ್ ಅಹ್ಮದ್ ಅಂತಿಮ ಹಂತದವರೆಗೂ ಹೋರಾಟ ನಡೆಸಿ ಪಾಕಿಸ್ತಾನ ತಂಡವನ್ನು ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿದ್ದರು. ಮತ್ತೊಂದು ತುದಿಯಲ್ಲಿ ಅಘಾ ಸಲ್ಮಾನ್ ಅದ್ಭುತವಾಗಿ ಸಾಥ್ ನೀಡಿದ್ದು 146 ಎಸೆತಗಳಲ್ಲಿ 32 ರನ್ ಗಳಿಸಿ ಪಾಕ್ ಪಡೆಗೆ ಆಸರೆಯಾದರು. ಬಳಿಕ ಅಘಾ ಸಲ್ಮಾನ್ ಕೂಡ ನೆರವಿಗೆ ನಿಂತರು.

ಸರ್ಫರಾಜ್ ಅಮೋಘ ಶತಕ, ಡ್ರಾಗೆ ತೃಪ್ತಿ!
ಇನ್ನು ಈ ಪಂದ್ಯದಲ್ಲಿ ಸರ್ಫರಾಜ್ ಅಹ್ಮದ್ 176 ಎಸೆತಗಳನ್ನು ಎದುರಿಸಿ 118 ರನ್‌ಗಳ ಕೊಡುಗೆ ನೀಡಿ 9ನೇ ವಿಕೆಟ್ ರೂಪದಲ್ಲಿ ಔಟಾದರು. ಈ ಹಂತದಲ್ಲಿ ನ್ಯೂಜಿಲೆಂಡ್ ತಂಡ ಗೆಲುವು ಸಾಧಿಸುವ ನಿರೀಕ್ಷೆ ಮೂಡಿಸಿತ್ತು. ಈ ಸಂದರ್ಭದಲ್ಲಿ ನಸೀಮ್ ಶಾ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿ ನಿರ್ಭೀತ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಪಾಕಿಸ್ತಾನದ ಹೋರಾಟವನ್ನು ಚಾಲ್ತಿಯಲ್ಲಿರಿಸಿದರು. ಪಾಕಿಸ್ತಾನ ಅಂತಿಮ ವಿಕೆಟ್ ಪಡೆಯಲು ನ್ಯೂಜಿಲೆಂಡ್ ಬೌಲರ್‌ಗಳು ವಿಫಲವಾದರು. ಅಂತಿಮವಾಗಿ ದಿನದಾಟ ಮುಕ್ತಾಯವಾದಾಗ ಪಾಕಿಸ್ತಾನ ತಂಡ ಇನ್ನೂ 15 ರನ್‌ಗಳಷ್ಟು ಹಿಂದಿತ್ತು. ಹೀಗಾಗಿ ಪಂದ್ಯ ಡ್ರಾಗೊಂಡಿದೆ. ಸರಣಿಯ ಮೊದಲ ಪಂದ್ಯ ಕೂಡ ಡ್ರಾದಲ್ಲಿ ಅಂತ್ಯವಾಗಿತ್ತು.

ಇತ್ತಂಡಗಳ ಆಡುವ ಬಳಗ
ಪಾಕಿಸ್ತಾನ ಆಡುವ ಬಳಗ: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಶಾನ್ ಮಸೂದ್, ಬಾಬರ್ ಅಜಮ್ (ನಾಯಕ), ಸೌದ್ ಶಕೀಲ್, ಸರ್ಫರಾಜ್ ಅಹ್ಮದ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಹಸನ್ ಅಲಿ, ನಸೀಮ್ ಶಾ, ಮೀರ್ ಹಮ್ಜಾ, ಅಬ್ರಾರ್ ಅಹ್ಮದ್
ಬೆಂಚ್: ನೌಮನ್ ಅಲಿ, ಮೊಹಮ್ಮದ್ ವಾಸಿಂ ಜೂನಿಯರ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಕಮ್ರಾನ್ ಗುಲಾಮ್, ಜಾಹಿದ್ ಮಹಮೂದ್,
ಶಾನವಾಜ್ ದಹಾನಿ, ಸಾಜಿದ್ ಖಾನ್
ನ್ಯೂಜಿಲೆಂಡ್ ಆಡುವ ಬಳಗ: ಟಾಮ್ ಲ್ಯಾಥಮ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್,
ಇಶ್ ಸೋಧಿ, ಟಿಮ್ ಸೌಥಿ (ನಾಯಕ), ಮ್ಯಾಟ್ ಹೆನ್ರಿ, ಅಜಾಜ್ ಪಟೇಲ್
ಬೆಂಚ್: ನೀಲ್ ವ್ಯಾಗ್ನರ್, ಬ್ಲೇರ್ ಟಿಕ್ನರ್, ಗ್ಲೆನ್ ಫಿಲಿಪ್ಸ್, ವಿಲ್ ಯಂಗ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications