ಪಾಕಿಸ್ತಾನದಿಂದ ಹೊರಬರುತ್ತಿರುವ ಪ್ರತಿಭೆಗಳನ್ನು ನೋಡಿದರೆ ಅಚ್ಚರಿಯಾಗುತ್ತದೆ: ಕೇನ್ ವಿಲಿಯಮ್ಸನ್

ಪಾಕಿಸ್ತಾನ ಪ್ರವಾಸದಲ್ಲಿರುವ ನ್ಯೂಜಿಲೆಂಡ್ ತಂಡ ಮೊದಲ ಪಂದ್ಯವನ್ನು ಗೆಲ್ಲುವ ಅವಕಾಶವನ್ನು ಸ್ವಲ್ಪದಲ್ಲಿ ತಪ್ಪಿಸಿಕೊಂಡಿತು. ಇತ್ತ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡ ತವರಿನಲ್ಲಿಯೇ ಮತ್ತೊಂದು ಸೋಲಿನ ಅವಮಾನದಿಂದ ಪಾರಾಗಿದ್ದು ಎರಡನೇ ಪಂದ್ಯದತ್ತ ಚಿತ್ತ ನೆಟ್ಟಿದೆ. ಈ ಸಂದರ್ಭದಲ್ಲಿ ನ್ಯೂಜಿಲೆಂಡ್ ತಮಡದ ಹಿರಿಯ ಆಟಗಾರ ಕೇನ್ ವಿಲಿಯಮ್ಸನ್ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಪಾಕಿಸ್ತಾನ ಸತತವಾಗಿ ಸಾಕಷ್ಟು ಪ್ರತಿಭಾವಂತ ಆಟಗಾರರನ್ನು ಹೊರತರುತ್ತಿರುವುದು ನೋಡಿದರೆ ಅಚ್ಚರಿಯಾಗುತ್ತದೆ ಎಂದಿದ್ದಾರೆ ಕೇನ್ ವಿಲಿಯಮ್ಸನ್.
ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಟೆಸ್ಟ್ ಸರಣಿಯ ಎರಡನೇ ಹಾಗೂ ಅಂತಿಮ ಪಂದ್ಯ ಸೋಮವಾರದಿಂದ ಆರಂಭವಾಗಲಿದ್ದು ಕರಾಚಿಯ ನ್ಯಾಶನಲ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮಾಧ್ಯಮ ಜಿಯೋ ಟಿವಿ ಜೊತೆಗೆ ಮಾತನಾಡಿದ ಕೇನ್ ವಿಲಿಯಮ್ಸನ್ ಪಾಕ್ ತಂಡ ಪ್ರತಿ ಬಾರಿಯೂ ಹೊಸ ಪ್ರತಿಭೆಗಳೊಂದಿಗೆ ಕಣಕ್ಕಿಳಿಯುತ್ತಿದ್ದು ಸಾಕಷ್ಟು ಪ್ರತಿಭಾವಂತ ಆಟಗಾರರನ್ನು ಪಾಕಿಸ್ತಾನ ತಯಾರಿಸುತ್ತಿದೆ ಎಂದಿದ್ದಾರೆ.
"ಪಾಕಿಸ್ತಾನ ಯಾವಾಗಲೂ ಸಾಕಷ್ಟು ಪ್ರತಿಭಾವಂತ ಆಟಗಾರರನ್ನು ಹೊಂದಿದೆ. ಹಲವು ವರ್ಷಗಳಿಂದ ನಾವು ಅವರ ವಿರುದ್ಧ ಆಡುತ್ತಿದ್ದು ಪ್ರತಿ ಭಾರಿಯೂ ಅವರಲ್ಲಿ ಹಲವು ಹೊಸ ಆಟಗಾರರು ಇರುತ್ತಾರೆ. ನನಗೆ ಅದು ಯಾವಾಗಲೂ ಅಚ್ಚರಿಯಾಗುತ್ತದೆ. ಅವರು ಈ ದೇಶದಲ್ಲಿ ಸಿದ್ಧಪಡಿಸುತ್ತಿರುವ ಗುಣಮಟ್ಟ ಮತ್ತು ಪ್ರತಿಭೆಯ ಬಗ್ಗೆ ನಮಗೆ ಯಾವಾಗಲೂ ಅರಿವಿದೆ. ಯಾವುದೇ ಬಳಗದೊಂದಿಗೆ ಅವರು ಕಣಕ್ಕಿಳಿಯಲಿ ಮತ್ತು ಯಾವುದೇ ಪರಿಸ್ಥಿತಿಗಳೇ ಇರಲಿ, ಅವರನ್ನು ಎದುರಿಸುವುದು ಯಾವಾಗಲೂ ಕಠಿಣವಾಗಿರುತ್ತದೆ" ಎಂದಿದ್ದಾರೆ ಕೇನ್ ವಿಲಿಯಮ್ಸನ್.
ಪಾಕಿಸ್ತಾನ ಸ್ಕ್ವಾಡ್: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಶಾನ್ ಮಸೂದ್, ಬಾಬರ್ ಅಜಮ್ (ನಾಯಕ), ಸೌದ್ ಶಕೀಲ್, ಸರ್ಫರಾಜ್ ಅಹ್ಮದ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ನೌಮನ್ ಅಲಿ, ಮೊಹಮ್ಮದ್ ವಾಸಿಮ್ ಜೂನಿಯರ್, ಅಬ್ರಾರ್ ಅಹ್ಮದ್, ಮೀರ್ ಹಮ್ಜಾ, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ನವಾಜ್, ನಸೀಮ್ ಶಾ, ಹಸನ್ ಅಲಿ, ಜಾಹಿದ್ ಮಹಮೂದ್, ಶಾನವಾಜ್ ದಹಾನಿ, ಸಾಜಿದ್ ಖಾನ್, ಕಮ್ರಾನ್ ಗುಲಾಮ್
ನ್ಯೂಜಿಲೆಂಡ್ ಸ್ಕ್ವಾಡ್: ಟಾಮ್ ಲ್ಯಾಥಮ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್, ಟಿಮ್ ಸೌಥಿ (ನಾಯಕ), ಇಶ್ ಸೋಧಿ, ನೀಲ್ ವ್ಯಾಗ್ನರ್, ಅಜಾಜ್ ಪಟೇಲ್, ವಿಲ್ ಯಂಗ್, ಮ್ಯಾಟ್ ಹೆನ್ರಿ, ಬ್ಲೇರ್ ಟಿಕ್ನರ್, ಗ್ಲೆನ್ ಫಿಲಿಪ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications