
ಪಾಕಿಸ್ತಾನ ಪ್ರವಾಸ ಕೈಗೊಂಡಿರುವ ನ್ಯೂಜಿಲೆಂಡ್ ತಂಡ ವೈಟ್‌ಬಾಲ್ ಸರಣಿಗಳಲ್ಲಿ ಭಾಗಿಯಾಗಿದೆ. ಮೊದಲಿಗೆ ಟಿ20 ಸರಣಿ ನಡೆಯುತ್ತಿದ್ದು ಇಂದು ನಾಲ್ಕನೇ ಟಿ20 ಪಂದ್ಯ ಆರಂಭವಾಗಿದೆ. ಈ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬೌಲಿಂಗ್ ನಡೆಸುವ ಸವಾಲು ಸ್ವೀಕರಿಸಿದೆ. ಹೀಗಾಗಿ ನ್ಯೂಜಿಲೆಂಡ್ ತಂಡ ಆರಂಭದಲ್ಲಿ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದೆ.
ಐದು ಪಂದ್ಯಗಳ ಈ ಸರಣಿಯಲ್ಲಿ ಈಗಾಗಲೇ ನಾಲ್ಕು ಪಂದ್ಯಗಳು ಮುಕ್ತಾಯವಾಗಿದೆ. ಈ ಪೈಕಿ ಎರಡು ಪಂದ್ಯಗಳಲ್ಲಿ ಪಾಕಿಸ್ತಾನ ಗೆದ್ದಿಕೊಂಡಿದ್ದು ಪಂದು ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಗೆಲುವು ಸಾಧಿಸಿದೆ. ಹೀಗಾಗಿ ಈ ಪಂದ್ಯದಲ್ಲಿ ಗೆದ್ದು ಸರಣಿ ಸಮಬಲಗೊಳಿಸುವ ಇರಾದೆಯಲ್ಲಿದೆ ನ್ಯೂಜಿಲೆಂಡ್ ತಂಡ. ಅತ್ತ ಪಾಕಿಸ್ತಾನ ಸರಣಿ ಗೆಲುವಿನ ಮೇಲೆ ಚಿತ್ತ ನೆಟ್ಟಿದ್ದು ಕುತೂಹಲ ಮೂಡಿಸಿದೆ.
Live ಸ್ಕೋರ್ ಹೀಗಿದೆ
ಇನ್ನು ನ್ಯೂಜಿಲೆಂಡ್ ತಂಡದ ಬಹುತೇಕ ಸ್ಟಾರ್ ಆಟಗಾರರು ಈ ಸರಣಿಯಿಂದ ಹೊರಗುಳಿದಿದ್ದಾರೆ. ಐಪಿಎಲ್‌ನಲ್ಲಿ ಆಡುವ ಹಿನ್ನೆಲೆಯಲ್ಲಿ ಭಾರತದಲ್ಲಿದ್ದು ಟಾಮ್ ಲ್ಯಾಥಮ್ ನಾಯಕತ್ವದಲ್ಲಿ ಈ ಸರಣಿಯಲ್ಲಿ ಭಾಗಿಯಾಗಿದೆ ನ್ಯೂಜಿಲೆಂಡ್ ತಂಡ. ಐದು ಪಂದ್ಯಗಳ ಟಿ20 ಸರಣಿಯ ಬಳಿಕ ಈ ಎರಡು ತಂಡಗಳು ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಲಿದೆ.
ಪಾಕಿಸ್ತಾನ ಆಡುವ ಬಳಗ: ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಬಾಬರ್ ಅಜಮ್ (ನಾಯಕ), ಫಖರ್ ಜಮಾನ್, ಸೈಮ್ ಅಯೂಬ್, ಶಾದಾಬ್ ಖಾನ್, ಇಫ್ತಿಕರ್ ಅಹ್ಮದ್, ಇಮಾದ್ ವಾಸಿಮ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಜಮಾನ್ ಖಾನ್
ಬೆಂಚ್: ನಸೀಮ್ ಶಾ, ಮೊಹಮ್ಮದ್ ನವಾಜ್, ಶಾನ್ ಮಸೂದ್, ಮೊಹಮ್ಮದ್ ಹಾರಿಸ್, ಇಹ್ಸಾನುಲ್ಲಾ
ನ್ಯೂಜಿಲೆಂಡ್ ಆಡುವ ಬಳಗ: ಟಾಮ್ ಲ್ಯಾಥಮ್ (ನಾಯಕ & ವಿಕೆಟ್ ಕೀಪರ್), ಚಾಡ್ ಬೋವ್ಸ್, ವಿಲ್ ಯಂಗ್, ಡೇರಿಲ್ ಮಿಚೆಲ್, ಮಾರ್ಕ್ ಚಾಪ್ಮನ್, ರಚಿನ್ ರವೀಂದ್ರ, ಆಡಮ್ ಮಿಲ್ನೆ, ಮ್ಯಾಟ್ ಹೆನ್ರಿ, ಇಶ್ ಸೋಧಿ, ಕೋಲ್ ಮೆಕಾಂಚಿ, ಹೆನ್ರಿ ಶಿಪ್ಲಿ
ಬೆಂಚ್: ಜೇಮ್ಸ್ ನೀಶಮ್, ಬೆನ್ ಲಿಸ್ಟರ್, ಡೇನ್ ಕ್ಲೀವರ್, ಬ್ಲೇರ್ ಟಿಕ್ನರ್