8 ವರ್ಷಗಳ ಬಳಿಕ ಟೆಸ್ಟ್ ಶತಕ: ನಾಯಕ ಬಾಬರ್ ಅಜಂಗೆ ಧನ್ಯವಾದ ಹೇಳಿದ ಸರ್ಫರಾಜ್ ಅಹ್ಮದ್

ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಅಮೋಘ ಶತಕ ಸಿಡಿಸಿರುವ ಪಾಕಿಸ್ತಾನದ ಅನುಭವಿ ಆಟಗಾರ ಸರ್ಫರಾಜ್ ಅಹ್ಮದ್ ಪಾಕಿಸ್ತಾನವನ್ನು ಸೋಲಿನಿಂದ ಪಾರು ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಒಂದು ಹಂತದಲ್ಲಿ ಪಾಕಿಸ್ತಾನದ ಗೆಲುವಿನ ಸಾಧ್ಯತೆಯನ್ನು ಕೂಡ ತೆರೆದಿಟ್ಟುತು ಸರ್ಫರಾಜ್ ಅವರ ಈ ಇನ್ನಿಂಗ್ಸ್. ಈ ಪ್ರದರ್ಶನದ ಕಾರಣದಿಮದಾಗಿ ಸರ್ಫರಾಜ್ ಅಹ್ಮದ್ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ತಮ್ಮದಾಗಿಸಿಕೊಂಡಿದ್ದಾರೆ.
ಇನ್ನು ಈ ಶತಕದೊಂದಿಗೆ ಸರ್ಫರಾಜ್ ಸುದೀರ್ಘ 8 ವರ್ಷಗಳ ಬಳಿಕ ಟೆಸ್ಟ್ ಮಾದರಿಯಲಲಿ ತಮ್ಮ ಶತಕವನ್ನು ಸಿಡಿಸಿದಾಂತಾಗಿದೆ. ಅಲ್ಲದೆ ಪಾಕಿಸ್ತಾನ ತಂಡದಲ್ಲಿ ಸುದೀರ್ಘ ಕಾಲದ ಬಳಿಕ ಕಮ್‌ಬ್ಯಾಕ್ ಮಾಡಿ ಸ್ಮರಣೀಯ ಪ್ರದರ್ಶನ ನೀಡಿದ್ದಾರೆ. ಈ ಪ್ರದರ್ಶನದ ಬಳಿಕ ಮಾತನಾಡಿರುವ ಸರ್ಫರಾಜ್ ಖಾನ್ ನಾಯಕ ಬಾಬರ್ ಅಜಂಗೆ ಧನ್ಯವಾದ ಹೇಳಿದ್ದಾರೆ.
"ತಂಡದಲ್ಲಿ ಅವಕಾಶ ದೊರೆಯದಿದ್ದರೂ ನಾನು ಕಳೆದ ನಾಲ್ಕು ವರ್ಷಳಿಂದ ತಂಡದ ಭಾಗವಾಗಿದ್ದೇನೆ. ಹಾಗಾಗಿಯೇ ನಾನು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿದೆ. ನಾನು ಆಡುವ ಅವಕಾಶಕ್ಕಾಗಿ ದೇವರ ಬಳಿ ಪ್ರಾರ್ಥಿಸಿದ್ದೆ ಆ ಅವಕಾಶ ದೊರೆತಿದೆ. ಮೊದಲ ಟೆಸ್ಟ್‌ನಲ್ಲಿ ನಾನು ಸಾಕಷ್ಟು ಒತ್ತಡದಲ್ಲಿದ್ದೆ. ಆದರೆ ನಾಯಕ ಹಾಗೂ ಉಳಿದ ಆಟಗಾರರು ನನ್ನಲ್ಲಿ ಆತ್ಮವಿಶ್ವಾಸ ತುಂಬಿದರು ಎಂದಿದ್ದಾರೆ ಸರ್ಫರಾಜ್ ಅಹ್ಮದ್.
ಇತ್ತಂಡಗಳ ಆಡುವ ಬಳಗ
ಪಾಕಿಸ್ತಾನ ಆಡುವ ಬಳಗ: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಶಾನ್ ಮಸೂದ್, ಬಾಬರ್ ಅಜಮ್ (ನಾಯಕ), ಸೌದ್ ಶಕೀಲ್, ಸರ್ಫರಾಜ್ ಅಹ್ಮದ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಹಸನ್ ಅಲಿ, ನಸೀಮ್ ಶಾ, ಮೀರ್ ಹಮ್ಜಾ, ಅಬ್ರಾರ್ ಅಹ್ಮದ್
ಬೆಂಚ್: ನೌಮನ್ ಅಲಿ, ಮೊಹಮ್ಮದ್ ವಾಸಿಂ ಜೂನಿಯರ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಕಮ್ರಾನ್ ಗುಲಾಮ್, ಜಾಹಿದ್ ಮಹಮೂದ್,
ಶಾನವಾಜ್ ದಹಾನಿ, ಸಾಜಿದ್ ಖಾನ್
ನ್ಯೂಜಿಲೆಂಡ್ ಆಡುವ ಬಳಗ: ಟಾಮ್ ಲ್ಯಾಥಮ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್,
ಇಶ್ ಸೋಧಿ, ಟಿಮ್ ಸೌಥಿ (ನಾಯಕ), ಮ್ಯಾಟ್ ಹೆನ್ರಿ, ಅಜಾಜ್ ಪಟೇಲ್
ಬೆಂಚ್: ನೀಲ್ ವ್ಯಾಗ್ನರ್, ಬ್ಲೇರ್ ಟಿಕ್ನರ್, ಗ್ಲೆನ್ ಫಿಲಿಪ್ಸ್, ವಿಲ್ ಯಂಗ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications