ಶ್ರೀಲಂಕಾ vs ಪಾಕಿಸ್ತಾನ, ಎರಡನೇ ಏಕದಿನ ಪಂದ್ಯ, Live ಸ್ಕೋರ್

ಕರಾಚಿ, ಸೆಪ್ಟೆಂಬರ್ 30: ಭಯೋತ್ಪಾದನಾ ದಾಳಿಯ ಬೆದರಿಕೆಯ ಹೊರತಾಗಿಯೂ ಪಾಕಿಸ್ತಾನ ಪ್ರವಾಸ ಕೈಗೊಂಡಿರುವ ಶ್ರೀಲಂಕಾ ಕ್ರಿಕೆಟ್ ತಂಡ ಇಂದು (ಸೆಪ್ಟೆಂಬರ್ 30) ಕರಾಚಿಯಲ್ಲಿ ಆತಿಥೇಯರ ವಿರುದ್ಧ ದ್ವಿತೀಯ ಏಕದಿನ ಪಂದ್ಯವನ್ನಾಡುತ್ತಿದೆ. ಟಾಸ್ ಗೆದ್ದಿರುವ ಪಾಕ್ ಬ್ಯಾಟಿಂಗ್ ಆಯ್ದುಕೊಂಡಿತ್ತು.
ಕರಾಚಿ ನ್ಯಾಷನಲ್ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 27ರಂದು ನಡೆಯಬೇಕಿದ್ದ ಇತ್ತಂಡಗಳ ಮೊದಲ ಏಕದಿನ ಪಂದ್ಯ ಮಳೆಯಿಂದಾಗಿ ಟಾಸ್ ಕೂಡ ನಡೆಯದೆ ರದ್ದಾಗಿತ್ತು. ಇಂದಿನ ಪಂದ್ಯದಲ್ಲಿ ಸರ್ಫರಾಜ್ ಪಡೆಗೆ ಉತ್ತಮ ಆರಂಭ ಲಭಿಸಿದೆ. ಏಕದಿನ ಸರಣಿ 3 ಪಂದ್ಯಗಳನ್ನು ಒಳಗೊಂಡಿದೆ.
ಶ್ರೀಲಂಕಾ vs ಪಾಕ್, 2ನೇ ಏಕದಿನ ಪಂದ್ಯ, Live ಸ್ಕೋರ್‌ಕಾರ್ಡ್
ಲಾಹೋರ್‌ನಲ್ಲಿನ ಟೆಸ್ಟ್ ಪಂದ್ಯವೊಂದಕ್ಕಾಗಿ 2009ರ ಮಾರ್ಚ್‌ನಲ್ಲಿ ಶ್ರೀಲಂಕಾ ತಂಡ ಪಾಕ್‌ಗೆ ತೆರಳಿದ್ದಾಗ ಲಂಕಾ ಆಟಗಾರರಿದ್ದ ಬಸ್‌ನ ಮೇಲೆ ಭಯೋತ್ಪಾದನಾ ದಾಳಿ ನಡೆದಿತ್ತು. ಅದಾಗಿ ಇದೇ ಮೊದಲ ಬಾರಿಗೆ ಶ್ರೀಲಂಕಾ ಕ್ರಿಕೆಟ್ ತಂಡ ಸಂಪೂರ್ಣ ಪ್ರವಾಸ ಸರಣಿಗಾಗಿ ಪಾಕ್‌ಗೆ ತೆರಳಿದೆ.
ಶ್ರೀಲಂಕಾ ತಂಡ: ಅವಿಷ್ಕಾ ಫರ್ನಾಂಡೊ, ಒಷಾದಾ ಫರ್ನಾಂಡೊ, ಲಹಿರು ತಿರಿಮನ್ನೆ (ಸಿ), ಸದೀರಾ ಸಮರವಿಕ್ರಮ (ವಾರ), ದನುಷ್ಕಾ ಗುಣತಿಲಕ, ಶೆಹನ್ ಜಯಸೂರ್ಯ, ದಾಸುನ್ ಶನಕಾ, ಇಸುರು ಉದಾನ, ವನಿಂಡು ಹಸರಂಗ, ನುವಾನ್ ಪ್ರದೀಪ್, ಲಹಿರು ಕುಮಾರ.
ಪಾಕಿಸ್ತಾನ ತಂಡ: ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಝಾಮ್, ಹ್ಯಾರಿಸ್ ಸೊಹೈಲ್, ಇಫ್ತಿಖರ್ ಅಹ್ಮದ್, ಸರ್ಫರಾಜ್ ಅಹ್ಮದ್ (ಸಿ & ವಿಕೆ), ಇಮಾದ್ ವಾಸಿಮ್, ಶದಾಬ್ ಖಾನ್, ವಹಾಬ್ ರಿಯಾಜ್, ಮೊಹಮ್ಮದ್ ಅಮೀರ್, ಉಸ್ಮಾನ್ ಶಿನ್ವಾರಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications