Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಾಕಿಸ್ತಾನ vs ಶ್ರೀಲಂಕಾ, ಮೂರನೇ ಏಕದಿನ ಪಂದ್ಯ, Live ಸ್ಕೋರ್‌

Pakistan vs Sri Lanka, 3rd ODI - Live Cricket Score

ಕರಾಚಿ, ಅಕ್ಟೋಬರ್ 2: ಪಾಕಿಸ್ತಾನ ಪ್ರವಾಸದಲ್ಲಿರುವ ಶ್ರೀಲಂಕಾ ಕ್ರಿಕೆಟ್ ತಂಡ ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ಬುಧವಾರ (ಅಕ್ಟೋಬರ್ 2) ಆತಿಥೇಯ ಪಾಕಿಸ್ತಾನ ವಿರುದ್ಧ 3ನೇ ಮತ್ತು ಕೊನೆಯ ಏಕದಿನ ಪಂದ್ಯವನ್ನಾಡುತ್ತಿದೆ. ಟಾಸ್ ಗೆದ್ದಿರುವ ಶ್ರೀಲಂಕಾ, ಬ್ಯಾಟಿಂಗ್ ಆಯ್ದುಕೊಂಡಿದೆ.

ಇತ್ತಂಡಗಳ ದ್ವಿತೀಯ ಏಕದಿನ ಪಂದ್ಯದಲ್ಲಿ ಬಾಬರ್ ಅಝಾಮ್ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಆತಿಥೇಯ ಪಾಕಿಸ್ತಾನ 67 ರನ್‌ ಜಯ ಗಳಿಸಿತ್ತು. 3 ಪಂದ್ಯಗಳ ಏಕದಿನ ಸರಣಿಯ ಆರಂಭಿಕ ಪಂದ್ಯ ಮಳೆಯ ಕಾರಣ ಟಾಸ್ ಕೂಡ ನಡೆಯದೆ ರದ್ದಾಗಿತ್ತು. ಪಾಕ್‌ ತಂಡ ಸರಣಿಯಲ್ಲಿ 1-0ಯ ಮುನ್ನಡೆಯಲ್ಲಿತ್ತು.

ಪಾಕಿಸ್ತಾನ vs ಶ್ರೀಲಂಕಾ, 3ನೇ ಏಕದಿನ ಪಂದ್ಯ, Live ಸ್ಕೋರ್‌ಕಾರ್ಡ್

1
46781

2009ರ ಮಾರ್ಚ್‌ನಲ್ಲಿ ಲಾಹೋರ್‌ನಲ್ಲಿನ ಟೆಸ್ಟ್ ಪಂದ್ಯವೊಂದಕ್ಕಾಗಿ ಶ್ರೀಲಂಕಾ ತಂಡ ಪಾಕ್‌ಗೆ ತೆರಳಿದ್ದಾಗ ಲಂಕಾ ಆಟಗಾರರಿದ್ದ ಬಸ್‌ನ ಮೇಲೆ ಭಯೋತ್ಪಾದನಾ ದಾಳಿ ನಡೆದಿತ್ತು. ಅದಾಗಿ ಸುಮಾರು 10 ವರ್ಷಗಳ ಬಳಿಕ ಅಂದರೆ ಇದೇ ಮೊದಲ ಬಾರಿಗೆ ಲಂಕಾ, ಪಾಕ್ ಪ್ರವಾಸ ಕೈಗೊಂಡಿದೆ. ಈ ಬಾರಿಯೂ ಭಯೋತ್ಪಾದನಾ ಬೆದರಿಕೆ ಬಂದಿದ್ದ ಹೊರತಾಗಿಯೂ ಲಂಕಾ ಪಾಕ್ ಸರಣಿಯಲ್ಲಿ ಪಾಲ್ಗೊಂಡಿದೆ.

ಪಾಕಿಸ್ತಾನ ತಂಡ: ಫಖರ್ ಝಮಾನ್, ಅಬಿದ್ ಅಲಿ, ಬಾಬರ್ ಅಝಮ್, ಹ್ಯಾರಿಸ್ ಸೊಹೈಲ್, ಇಫ್ತಿಖರ್ ಅಹ್ಮದ್, ಸರ್ಫರಾಜ್ ಅಹ್ಮದ್ (ಸಿ & ವಿಕೆ), ಮೊಹಮ್ಮದ್ ನವಾಝ್, ವಹಾಬ್ ರಿಯಾಜ್, ಶದಾಬ್ ಖಾನ್, ಮೊಹಮ್ಮದ್ ಅಮೀರ್, ಉಸ್ಮಾನ್ ಶಿನ್ವಾರಿ.

ಶ್ರೀಲಂಕಾ ತಂಡ: ದನುಷ್ಕಾ ಗುಣತಿಲಕ, ಅವಿಷ್ಕಾ ಫರ್ನಾಂಡೊ, ಮಿನೋಡ್ ಭನುಕಾ (ವಿಕೆ), ಏಂಜೆಲೊ ಪೆರೆರಾ, ಲಹಿರು ತಿರಿಮನ್ನೆ (ಸಿ), ಶೆಹನ್ ಜಯಸೂರ್ಯ, ದಾಸುನ್ ಶನಕಾ, ವನಿಡು ಹಸರಂಗ, ಲಕ್ಷನ್ ಸಂದಕನ್, ನುವಾನ್ ಪ್ರದೀಪ್, ಲಹಿರು ಕುಮಾರ.

Story first published: Wednesday, October 2, 2019, 16:05 [IST]
Other articles published on Oct 2, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+