Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಪಾಕಿಸ್ತಾನ, ಪಾಕಿಸ್ತಾನ vs ಶ್ರೀಲಂಕಾ ಕುತೂಹಲಕಾರಿ ಇತಿಹಾಸ!

Pakistan vs Sri Lanka, India vs Pak: World cup Interesting factor

ಬೆಂಗಳೂರು, ಜೂನ್ 7: ಕ್ರಿಕೆಟ್ ಅಂಗಳದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆಯೆಂದರೆ ಆ ಪಂದ್ಯಕ್ಕೆ ವಿಶೇಷ ಕಿಕ್ಕೊಂದು ಮೆಲ್ಲಗೆ ಮೆತ್ತಿಕೊಂಡು ಬಿಡುತ್ತೆ. ಕ್ರೀಡೆಯಲ್ಲಂತೂ ಸಾಂಪ್ರದಾಯಿಕ ಎದುರಾಳಿಗಳೆಂದೇ ಗುರುತಿಸಿಕೊಂಡಿರುವ ಭಾರತ-ಪಾಕ್ ಸೆಣಸಾಟ ವಿಶೇಷ ಆಕರ್ಷಣೆ ಮೂಡಿಸೋದಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ವಿಶ್ವಕಪ್ ವಿಚಾರಕ್ಕೆ ಬಂದರೆ ಭಾರತ ಮತ್ತು ಪಾಕಿಸ್ತಾನ ತಂಡಗಳ ಹಣಾಹಣಿಗೆ ಸಂಬಂಧಿಸಿ ಒಂದು ಕುತೂಹಲಕಾರಿ ಸಂಗತಿಯಿದೆ. ಅದೇನೆಂದರೆ, ಭಾರತ ತಂಡ ಈವರೆಗೂ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ವಿಶ್ವಕಪ್ ನಲ್ಲಿ ಎಲ್ಲಾ ಮುಖಾಮುಖಿಯಾಲ್ಲೂ ಟೀಮ್ ಇಂಡಿಯಾ ಪಾಕ್ ಎದುರು ಮೇಲುಗೈ ಸಾಧಿಸಿದೆ.

ಭಾರತ vs ಪಾಕಿಸ್ತಾನ, ಪಾಕಿಸ್ತಾನ vs ಶ್ರೀಲಂಕಾ ವಿಶ್ವಕಪ್ ಮುಖಾಮುಖಿಯ ಬಗ್ಗೆ ಒಂದಿಷ್ಟು ಕುತೂಹಲಕಾರಿ ಸಂಗತಿಗಳಿವೆ.

ಏಳರಲ್ಲೂ ಸೋಲು

ಏಳರಲ್ಲೂ ಸೋಲು

ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳ ಹಣಹಣಿಯೂ ಇಂಥದ್ದೇ ಸ್ವಾರಸ್ಯಕರ ಸಂಗತಿಯನ್ನು ಹೊಂದಿದೆ. ಪಾಕ್ ತಂಡ ಈವರೆಗೂ ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧ ಒಂದೂ ಪಂದ್ಯ ಸೋತಿಲ್ಲ. 12ನೇ ವಿಶ್ವಕಪ್ ಆವೃತ್ತಿಯಲ್ಲಿ ಶುಕ್ರವಾರ (ಜೂನ್ 7) ಇತ್ತಂಡಗಳು ಬ್ರಿಸ್ಟಲ್ ಮೈದಾನದಲ್ಲಿ 11ನೇ ಪಂದ್ಯಕ್ಕಾಗಿ ಎದುರುಬದುರಾಗಿದ್ದು, ಪಂದ್ಯ ಕುತೂಹಲ ಕೆರಳಿಸಿದೆ.

ಪಾಕ್ ಎದುರು ಗೆಲುವೇ ಇಲ್ಲ

ಪಾಕ್ ಎದುರು ಗೆಲುವೇ ಇಲ್ಲ

ಈವರೆಗೆ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಒಟ್ಟಿಗೆ ಏಳುಸಾರಿ ಕಾದಾಡಿವೆ. ಇದರಲ್ಲೂ ಏಳೂ ಸಾರಿ ಶ್ರೀಲಂಕಾ ಸೋಲಿನ ಮುಖಭಂಗ ಅನುಭವಿಸಿದೆ. ಅಂದರೆ 1975ರ ವಿಶ್ವಕಪ್ ಟೂರ್ನಿಯಿಂದ ಹಿಡಿದು ಇಲ್ಲೀವರೆಗೂ ಶ್ರೀಲಂಕಾಕ್ಕೆ ಪಾಕ್ ಎದುರು ಗೆಲುವೇ ಲಭಿಸಿಲ್ಲ.

ಪಾಕ್‌ದೂ ಇದೇ ಕತೆ

ಪಾಕ್‌ದೂ ಇದೇ ಕತೆ

ಶ್ರೀಲಂಕಾ ವಿರುದ್ಧ ವಿಶ್ವಕಪ್‌ನಲ್ಲಿ ಪ್ರತೀಸಾರಿಯೂ ಗೆದ್ದು ಬೀಗಿರೋ ಇತಿಹಾಸವಿರುವ ಪಾಕಿಸ್ತಾನ ತಂಡಕ್ಕೆ ಭಾರತ ವಿರುದ್ಧ ಅದೇ ಇತಿಹಾಸ ಉಲ್ಟಾ ಹೊಡೆದಂತಿದೆ. ಇಲ್ಲಿ ಪಾಕ್‌ ತಂಡ ಆಡಿರುವ 6 ಪಂದ್ಯಗಳಲ್ಲಿ ಒಂದೂ ಸಾರಿಯೂ ಭಾರತದೆದುರು ಜಯಿಸಿಲ್ಲ. ಈ ಬಾರಿಯೂ ಪಾಕ್ ಎದುರು ಮೇಲುಗೈ ವಿಶ್ವಾಸವನ್ನು ಕೊಹ್ಲಿ ಬಳಗ ಹೊಂದಿದೆ.

ತಿರುಗಿಬಿದ್ದ ಪಾಕ್

ತಿರುಗಿಬಿದ್ದ ಪಾಕ್

ವಿಶ್ವಕಪ್ 2019ರ ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಹೀನಾಯ ಸೋಲ ಕಂಡ ಸರ್ಫರಾಜ್ ಅಹಮ್ಮದ್ ಬಳಗ ಅನಂತರ ಚೇತರಿಸಿಕೊಂಡಿತ್ತು. ಮುಂದಿನ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ಗೆ ಸೋಲಿನ ಆಘಾತವನ್ನೂ ನೀಡಿತ್ತು. ಸದ್ಯದ ಸ್ಥಿತಿಯಲ್ಲಿ ಪಾಕಿಸ್ತಾನವನ್ನು ತೀರಾ ಕಡೆಗಣಿಸುವಂತಿಲ್ಲ. ಒಟ್ಟಿನಲ್ಲಿ ಜೂನ್ 16ರಂದಿನ ಭಾರತ-ಪಾಕ್ ಮುಖಾಮುಖಿ ಕುತೂಹಲ ಮೂಡಿಸಿದೆ.

Story first published: Friday, June 7, 2019, 17:26 [IST]
Other articles published on Jun 7, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+