ಏಕದಿನ ಪಂದ್ಯ: ಇಫ್ತಿಖರ್ ಅಹ್ಮದ್ ಮಾರಕ ದಾಳಿಗೆ ಶರಣಾದ ಜಿಂಬಾಬ್ವೆ

ರಾವಲ್ಪಿಂಡಿ: ಬಾಬರ್ ಅಝಾಮ್ ನಾಯಕನ ಆಟಕ್ಕೆ ಜಿಂಬಾಬ್ವೆ ತಂಡ ಶರಣಾಗಿದೆ. ಪಾಕಿಸ್ತಾನ ಪ್ರವಾಸದಲ್ಲಿರುವ ಜಿಂಬಾಬ್ವೆ ತಂಡ, ರಾವಲ್ಪಿಂಡಿಯಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಆತಿಥೇಯ ಪಾಕ್ ವಿರುದ್ಧ 6 ವಿಕೆಟ್‌ಗಳ ಸೋಲುಭವಿಸಿದೆ. ಜಿಂಬಾಬ್ವೆ ವಿರುದ್ಧ ಸೀನ್ ವಿಲಿಯಮ್ಸ್ ಮಾಡಿದ ಹೋರಾಟ ವ್ಯರ್ಥಗೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಜಿಂಬಾಬ್ವೆ, ಬ್ರಿಯಾನ್ ಚಾರಿ 25, ಬ್ರೆಂಡನ್ ಟೇಲರ್ 36, ಸೀನ್ ವಿಲಿಯಮ್ಸ್ 75 (70 ಎಸೆತ), ವೆಸ್ಲಿ ಮಾಧೆವೆರೆ 10, ಕಾರ್ಲ್ ಮುಂಬಾ 11, ಬ್ಲೆಸ್ಸಿಂಗ್ ಮುಜರಬಾನಿ 17 ರನ್‌ನೊಂದಿಗೆ 45.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 206 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಪಾಕಿಸ್ತಾನ, ಇಮಾಮ್ ಉಲ್ ಹಕ್ 49, ಅಬಿದ್ ಅಲಿ 22, ನಾಯಕ ಬಾಬರ್ ಅಝಮ್ 77 (74), ಇಫ್ತಿಖರ್ ಅಹ್ಮದ್ 16 ರನ್ ಸೇರ್ಪಡೆಯೊಂದಿಗೆ 35.2ನೇ ಓವರ್‌ಗೆ 4 ವಿಕೆಟ್ ಕಳೆದು 208 ರನ್ ಬಾರಿಸಿ ಗೆಲುವಿನ ನಗೆ ಬೀರಿತು. ಇದರೊಂದಿಗೆ 3 ಪಂದ್ಯಗಳ ಏಕದಿನ ಸರಣಿ 2-0ಯಿಂದ ಪಾಕ್ ವಶವಾಗಿದೆ.
ಜಿಂಬಾಬ್ವೆ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನದ ಹ್ಯಾರಿಸ್ ರೌಫ್ 1, ಮುಹಮ್ಮದ್ ಮೂಸ 2, ಫಹೀಮ್ ಅಶ್ರಫ್ 1, ಇಮಾದ್ ವಾಸಿಮ್ 1, ಇಫ್ತಿಖರ್ ಅಹ್ಮದ್ 5 ವಿಕೆಟ್ ಪಡೆದು ಗಮನ ಸೆಳೆದರೆ, ಪಾಕಿಸ್ತಾನ ಇನ್ನಿಂಗ್ಸ್‌ನಲ್ಲಿ ಜಿಂಬಾಬ್ವೆಯ ತೆಂಡೈ ಚಿಸೊರೊ 2, ಸೀನ್ ವಿಲಿಯಮ್ಸ್ 1, ಸಿಕಂದರ್ ರಾಝಾ 1 ವಿಕೆಟ್ ಪಡೆದರು. ಇಫ್ತಿಖರ್ ಅಹ್ಮದ್ ಪಂದ್ಯಶ್ರೇಷ್ಠರೆನಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications