Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Women's World Cup 2025: ಅರ್ಹತೆ ಪಡೆದ ಪಾಕ್ ವನಿತೆಯರು; ಹೈಬ್ರಿಡ್ ಮಾದರಿಗೆ ಬಿಸಿಸಿಐ ಒಪ್ಪಿಗೆ?

ಭಾರತದಲ್ಲಿ ನಡೆಯಲಿರುವ ಐಸಿಸಿ 2025 ರ ಮಹಿಳಾ ವಿಶ್ವಕಪ್‌ ಟೂರ್ನಿಗೆ ಪಾಕಿಸ್ತಾನ ತಂಡ ಅರ್ಹತೆ ಪಡೆದಿದೆ. ಏಪ್ರಿಲ್ 17, ಗುರುವಾರ ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಥೈಲ್ಯಾಂಡ್ ತಂಡವನ್ನು 87 ರನ್‌ಗಳಿಂದ ಸೋಲಿಸುವ ಮೂಲಕ ಪಾಕಿಸ್ತಾನ ವನಿತೆಯರ ತಂಡ ಅರ್ಹತಾ ಸುತ್ತಿನಲ್ಲಿ ಸತತ ನಾಲ್ಕನೇ ಗೆಲುವು ದಾಖಲಿಸಿದೆ.

ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಮುಂಬರುವ ಮಹಿಳಾ ವಿಶ್ವಕಪ್ ಅನ್ನು ಹೈಬ್ರಿಡ್ ಮಾದರಿಯಲ್ಲಿ ಆಡಲಾಗುವುದು ಎಂದು ನಿರ್ಧರಿಸಲಾಗಿದೆ. ಏಕೆಂದರೆ ಈಗ ಪಾಕಿಸ್ತಾನ ಕೂಡ ಟೂರ್ನಿಯ ಭಾಗವಾಗಲಿದೆ. ಹೈಬ್ರಿಡ್ ಮಾದರಿಯಡಿಯಲ್ಲಿ ಐಸಿಸಿ 2025 ರ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತನ್ನ ಎಲ್ಲಾ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಡಲಿದೆ.

Pakistan women qualify for Women s World Cup 2025 to be held in India

ಐಸಿಸಿ 2025ರ ಪುರುಷರ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನ ಆಯೋಜಿಸಿತ್ತು. ಆದರೆ, ಭದ್ರತಾ ಕಾರಣಗಳಿಂದ ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿತು. ಈ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನಡುವೆ ಒಂದು ಪರಿಹಾರಕ್ಕೆ ಬರಲಾಯಿತು. ಇದರ ಪ್ರಕಾರ ಎರಡೂ ದೇಶಗಳು ಐಸಿಸಿ ಟೂರ್ನಿಗಳಲ್ಲಿಗೆ ಪರಸ್ಪರರ ದೇಶಗಳಿಗೆ ಪ್ರಯಾಣಿಸುವುದಿಲ್ಲ. ಎಲ್ಲಾ ಐಸಿಸಿ ಟೂರ್ನಿಗಳನ್ನು ಹೈಬ್ರಿಡ್ ಮಾದರಿಯ ಅಡಿಯಲ್ಲಿ ತಟಸ್ಥ ಸ್ಥಳದಲ್ಲಿ ಆಡಿಸಬೇಕು ಎಂದು ನಿರ್ಧರಿಸಲಾಯಿತು.

ಪಾಕಿಸ್ತಾನ vs ಥೈಲ್ಯಾಂಡ್ ಪಂದ್ಯ ಹೇಗಿತ್ತು?

ಪಾಕಿಸ್ತಾನ ಮತ್ತು ಥೈಲ್ಯಾಂಡ್ ನಡುವಿನ ಅರ್ಹತಾ ಪಂದ್ಯದ ಭಾರಿ ಕುತೂಹಲ ಮೂಡಿಸಿತ್ತು. ಥೈಲ್ಯಾಂಡ್ ಬೌಲರ್‌ಗಳು ಅದ್ಭುತವಾಗಿ ಬೌಲಿಂಗ್ ಮಾಡಿ ಪಾಕಿಸ್ತಾನ ಬ್ಯಾಟರ್ಸ್ ಮುಕ್ತವಾಗಿ ರನ್ ಗಳಿಸಲು ಅವಕಾಶ ನೀಡಲಿಲ್ಲ. ಇದರಿಂದಾಗಿ ವಿಕೆಟ್‌ಗಳು ಸತತವಾಗಿ ಬೀಳುತ್ತಲೇ ಇದ್ದವು. ಇಂತಹ ಸಂದರ್ಭದಲ್ಲಿ ಆತಿಥೇಯ ತಂಡಕ್ಕೆ ರನ್ ಗಳಿಸುವುದು ತುಂಬಾ ಕಷ್ಟಕರವಾಗಿತ್ತು. ಪಾಕಿಸ್ತಾನ ತಂಡ 36ನೇ ಓವರ್‌ನಲ್ಲಿ 100 ರನ್‌ಗಳ ಗಡಿ ದಾಟಿತು. ಪಾಕಿಸ್ತಾನ ಪರ ಸಿದ್ರಾ ಅಮೀನ್ ಮತ್ತು ನಾಯಕಿ ಫಾತಿಮಾ ಸನಾ 5ನೇ ವಿಕೆಟ್‌ಗೆ 97 ರನ್‌ಗಳ ಜೊತೆಯಾಟ ನೀಡಿದರು. ಫಾತಿಮಾ 105 ಎಸೆತಗಳಲ್ಲಿ 80 ರನ್ ಗಳಿಸಿದರೆ, ಸನಾ 59 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ ಅಜೇಯ 62 ರನ್ ಗಳಿಸಿದರು. ಅಂತಿಮವಾಗಿ ಪಾಕಿಸ್ತಾನ ನಿಗದಿತ 50 ಓವರ್‍‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 205 ರನ್ ಕಲೆ ಹಾಕಿತು.

ಈ ಗುರಿ ಬೆನ್ನಟ್ಟಿದ ಥೈಲ್ಯಾಂಡ್ ತಂಡ ಪಾಕಿಸ್ತಾನಕ್ಕಿಂತ ವೇಗವಾಗಿ ಆರಂಭ ಪಡೆಯಿತು. ಆದರೆ ಸನಾ, ರಮೀನ್ ಶಮಿಮ್ ಮತ್ತು ನಶ್ರಾ ಸಂಧು ಉರಿ ಬೌಲಿಂಗ್‌ ದಾಳಿಗೆ ಥೈಲ್ಯಾಂಡ್ ತತ್ತರಿಸಿತು. ಥೈಲ್ಯಾಂಡ್‌ ತಂಡದ 6 ಬ್ಯಾಟರ್ಸ್ ಎರಡಂಕಿಯ ತಲುಪಿದರು. ಆದರೆ ಅವರಲ್ಲಿ ಯಾರಿಗೂ 20 ರನ್‌ಗಳನ್ನು ತಲುಪಲು ಸಾಧ್ಯವಾಗಲಿಲ್ಲ. 35 ನೇ ಓವರ್‌ನಲ್ಲಿ ಇಡೀ ತಂಡವು 118 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಪಾಕಿಸ್ತಾನ ತಂಡವು 87 ರನ್‌ಗಳಿಂದ ಪಂದ್ಯವನ್ನು ಗೆದ್ದು ಭಾರತದಲ್ಲಿ ನಡೆಯಲಿರುವ ಮಹಿಳಾ ವಿಶ್ವಕಪ್‌ಗೆ ಅರ್ಹತೆ ಪಡೆಯಿತು.

Story first published: Friday, April 18, 2025, 17:10 [IST]
Other articles published on Apr 18, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+