Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಾಕ್‌ ಹಿಂದುಗಳಿಗೆ ಈಗ ಉಸಿರಾಡಲು ಸಾಧ್ಯ: ಸಿಎಎ ಜಾರಿಗೆ ಪಾಕ್‌ ಕ್ರಿಕೆಟಿಗನ ಹರ್ಷ

ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿ ಮಾಡಿ ಸೋಮವಾರ ಆದೇಶ ಹೊರಡಿಸಿದೆ. ಈ ಕುರಿತು ಕೇಂದ್ರ ಗೃಹ ಸಚಿವಾಲಯದಿಂದ ಅಧಿಸೂಚನೆ ಪ್ರಕಟವಾಗಿದೆ. ಇದರ ಅಡಿಯಲ್ಲಿ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಅಲ್ಪಸಂಖ್ಯಾತರು ಭಾರತೀಯ ಪೌರತ್ವವನ್ನು ಪಡೆಯಲು ಸಾಧ್ಯವಾಗುತ್ತದೆ.

ಭಾರತ ಸರ್ಕಾರದ ಈ ನಿರ್ಧಾರವನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಬೆಂಬಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದ ಅರ್ಪಿಸಿದರು.

Pakistani Hindus can breathe now Pakistani cricketer rejoices over CAA

ಪೌರತ್ವ ತಿದ್ದುಪಡಿ ಮಸೂದೆ 2019 ಅನ್ನು ಸಂಸತ್ತು ಅಂಗೀಕರಿಸಿದೆ. ಬಳಿಕ ಈ ವಿಧೇಯಕಕ್ಕೆ ರಾಷ್ಟ್ರಪತಿಗಳ ಒಪ್ಪಿಗೆ ದೊರೆಯಿತು. CAA ಮೂಲಕ, ಮೂರು ನೆರೆಯ ರಾಷ್ಟ್ರಗಳ ಹಿಂದೂ, ಸಿಖ್, ಜೈನ್, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯಗಳಿಗೆ ಸೇರಿದ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವವನ್ನು ಪಡೆಯುವುದು ಸುಲಭವಾಗುತ್ತದೆ.

43 ವರ್ಷದ ಮಾಜಿ ಬೌಲರ್ ಈ ಬಗ್ಗೆ ಎರಡು ಟ್ವೀಟ್ ಮಾಡಿದ್ದಾರೆ. ಮೊದಲ ಟ್ವೀಟ್‌ನಲ್ಲಿ, "ಪಾಕಿಸ್ತಾನಿ ಹಿಂದೂಗಳು ಈಗ ಉಸಿರಾಡಲು ಸಾಧ್ಯವಾಗುತ್ತದೆ" ಎಂದು ಬರೆದಿದ್ದಾರೆ. ಎರಡನೇ ಟ್ವೀಟ್‌ನಲ್ಲಿ, "ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸೂಚಿಸಿದ್ದಕ್ಕಾಗಿ ನರೇಂದ್ರ ಮೋದಿ ಜಿ ಮತ್ತು ಅಮಿತ್ ಶಾ ಜಿ ಅವರಿಗೆ ಧನ್ಯವಾದಗಳು" ಎಂದು ಕನೇರಿಯಾ ಬರೆದಿದ್ದಾರೆ. ಡ್ಯಾನಿಶ್ ಹಿಂದೂ ಎಂಬ ಕಾರಣಕ್ಕೆ ಪಾಕಿಸ್ತಾನದಲ್ಲಿ ಡಬಲ್ ಟ್ರೀಟ್‌ಮೆಂಟ್ ಬಗ್ಗೆ ಹಲವು ಬಾರಿ ದೂರು ನೀಡಿದ್ದಾರೆ.

ಡ್ಯಾನಿಶ್ ಕನೇರಿಯಾ ಅವರು ಪಾಕಿಸ್ತಾನದ ಪರ 61 ಟೆಸ್ಟ್ ಮತ್ತು 18 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು ಟೆಸ್ಟ್‌ನಲ್ಲಿ 261 ಮತ್ತು ಏಕದಿನದಲ್ಲಿ 15 ವಿಕೆಟ್‌ಗಳನ್ನು ಪಡೆದರು. ಟೆಸ್ಟ್‌ನಲ್ಲಿ ಪಾಕಿಸ್ತಾನದ ಅತ್ಯುತ್ತಮ ಸ್ಪಿನ್ ಬೌಲರ್‌ಗಳಲ್ಲಿ ಒಬ್ಬರಾಗಿದ್ದರು.

Story first published: Tuesday, March 12, 2024, 18:16 [IST]
Other articles published on Mar 12, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+