ಕೈಯಲ್ಲಿನ ಕ್ಯಾಚ್ ಬಿಟ್ಟರು, ಡೈವ್ ಮಾಡಿ ಸೂಪರ್ ಮ್ಯಾನ್ ರೀತಿ ಕ್ಯಾಚ್ ಪಡೆದ ಪಾಕ್ ಪ್ಲೇಯರ್
ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಪ್ರವಾಸದ ಮೊದಲ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿತ್ತು. ಆದರೆ ಎರಡನೆಯಲ್ಲಿ ಪಾಕಿಸ್ತಾನ ಕಾಂಗರೂಗಳಿಗೆ ಕಠಿಣ ಪೈಪೋಟಿ ನೀಡುತ್ತಿದ್ದಾರೆ.
ಎಂಸಿಜಿಯಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಕೇವಲ 318 ರನ್ ಗಳಿಸಿತು. ಪಾಕಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ 264 ರನ್ ಗಳಿಸಿತು. ಎರಡನೇ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ ಅಗ್ರ ಕ್ರಮಾಂಕ ಸಂಪೂರ್ಣ ವಿಫಲವಾಯಿತು. 4 ಬ್ಯಾಟ್ಸ್‌ಮನ್‌ಗಳು 16 ರನ್‌ಗಳಿಗೆ ಔಟಾದರು. ಇದಾದ ನಂತರ ಮಿಚೆಲ್ ಮಾರ್ಷ್ ಮತ್ತು ಸ್ಟೀವ್ ಸ್ಮಿತ್ ಇನ್ನಿಂಗ್ಸ್ ಬೆಳೆಸುವ ಜವಾಬ್ದಾರಿಯನ್ನು ಹೊತ್ತುಕೊಂಡರು.

ಸುಲಭದ ಕ್ಯಾಚ್ ಡ್ರಾಪ್
ಪಾಕಿಸ್ತಾನದ ಫೀಲ್ಡಿಂಗ್ ಸದಾ ಸುದ್ದಿಯಲ್ಲಿರುತ್ತದೆ. ವಿಶ್ವಕಪ್ ವೇಳೆಯೂ ಪಾಕಿಸ್ತಾನದ ಫೀಲ್ಡರ್‌ಗಳು ಸುಲಭ ಕ್ಯಾಚ್‌ಗಳನ್ನು ಕೈಬಿಟ್ಟಿದ್ದರು. ಆಸ್ಟ್ರೇಲಿಯ ಪ್ರವಾಸದಲ್ಲೂ ಇಂಥದ್ದೇ ಘಟನೆ ನಡೆದಿದೆ. ಪಾಕಿಸ್ತಾನದ ಫೀಲ್ಡರ್‌ಗಳು ಪರ್ತ್‌ನಲ್ಲಿ ಸಾಕಷ್ಟು ಕ್ಯಾಚ್‌ಗಳನ್ನು ಕೈಬಿಟ್ಟಿದ್ದರು.
ಮೆಲ್ಬೋರ್ನ್‌ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯನ್ ಆಟಗಾರರು ಸಹ ಜೀವದಾನವನ್ನು ಪಡೆದಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲೂ ಇಂತಹದ್ದೇ ಘಟನೆ ನಡೆದಿದೆ. ಅಬ್ದುಲ್ಲಾ ಶಫೀಕ್ ಅವರು ಮಾರ್ಷ್ ಅವರ ಕ್ಯಾಚ್ ಅನ್ನು ಸ್ಲಿಪ್‌ನಲ್ಲಿ ಕೈಬಿಟ್ಟರು. ಆಗ ಅವರು ಕೇವಲ 20 ರನ್ ಗಳಿಸಿ ಆಡುತ್ತಿದ್ದರು. ಆಸ್ಟ್ರೇಲಿಯಾದ ಸ್ಕೋರ್ ಆಗ ಕೇವಲ 46 ರನ್. ಮೊದಲ ಇನಿಂಗ್ಸ್‌ನಲ್ಲೂ ಶಫೀಕ್ ಸ್ಲಿಪ್‌ನಲ್ಲಿ ಕ್ಯಾಚ್ ಕೈ ಬಿಟ್ಟರು.
ಸೂಪರ್ ಕ್ಯಾಚ್
ಜೀವದಾನ ಪಡೆದ ನಂತರ, ಮಿಚೆಲ್ ಮಾರ್ಷ್ ಪಾಕಿಸ್ತಾನದ ಬೌಲರ್‌ಗಳನ್ನು ದಂಡಿಸುತ್ತಾ ಸಾಗಿದರು. ಅರ್ಧಶತಕ ಪೂರೈಸಿದ ಅವರು ನಂತರ ಶತಕದತ್ತ ದಾಪುಗಲು ಇಟ್ಟರು. ಆಸ್ಟ್ರೇಲಿಯಾದ ಮುನ್ನಡೆಯೂ 200 ದಾಟಿತು. ಆದರೆ ನಂತರ ಅಘಾ ಸಲ್ಮಾನ್ ಹಿಡಿದ ಭರ್ಜರಿ ಕ್ಯಾಚ್‌ಗೆ ಮಿಚೆಲ್ ಮಾರ್ಷ್ ಸಪ್ಪೆ ಮುಖ ಮಾಡಿ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು.
ಮೀರ್ ಹಮ್ಜಾ ಎಸೆತದಲ್ಲಿ ಸಲ್ಮಾನ್ ಮೊದಲ ಸ್ಲಿಪ್‌ನಲ್ಲಿ ಎಡಕ್ಕೆ ಬಿದ್ದು ಒಂದು ಕೈಯಿಂದ ಚೆಂಡನ್ನು ಹಿಡಿದರು. ಈ ಮೂಲಕ ಮಿಚೆಲ್ ಮಾರ್ಷ ಅವರ 96 ರನ್‌ಗಳ ಇನಿಂಗ್ಸ್‌ನಲ್ಲಿ ಕೊನೆಗೊಂಡಿತು.
ನರ್ವಸ್ 90
ಮಿಚೆಲ್ ಮಾರ್ಷ್ ಸತತ ಎರಡನೇ ಪಂದ್ಯದಲ್ಲಿ ಶತಕ ವಂಚಿತರಾಗಿದ್ದಾರೆ. ಪರ್ತ್‌ನಲ್ಲೂ ಶತಕ ವಂಚಿತರಾಗಿದ್ದರು. ಮೊದಲ ಟೆಸ್ಟ್‌ನಲ್ಲಿ ಅವರು 90 ರನ್‌ಗಳ ಇನಿಂಗ್ಸ್ ಕಟ್ಟಿ ತಂಡಕ್ಕೆ ಆಧಾರವಾಗಿದ್ದರು. ಮೂರನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 6 ವಿಕೆಟ್‌ಗೆ 187 ರನ್ ಗಳಿಸಿದೆ. ಅವರ ಮುನ್ನಡೆ 241 ರನ್ ತಲುಪಿದೆ.
ಮಿಚೆಲ್ ಮಾರ್ಷ್ ಸ್ಲಿಪ್‌ನಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ನತ್ತ ಭಾರದ ಹೆಜ್ಜೆಯಿಂದ ನಡೆದರು. ಈ ಪಂದ್ಯವನ್ನು ನೋಡಲು ಬಂದಿದ್ದ ಅವರ ಕುಟುಂಬಕ್ಕೂ ನಿರಾಸೆ. ಅವರ ತಂದೆ ಮಾಜಿ ಕ್ರಿಕೆಟಿಗ ಜೆಫ್ ಮಾರ್ಷ್ ತಲೆಯ ಹಿಂದೆ ಎರಡೂ ಕೈಗಳನ್ನು ಹಾಕಿಕೊಂಡು ಶತಕ ವಂಚಿತನಾದ ಬಗ್ಗೆ ನಿರಾಸೆಯನ್ನು ವ್ಯಕ್ತ ಪಡಿಸಿದರು. ಅವರ ಪಕ್ಕದಲ್ಲಿ ಕುಳಿತಿದ್ದ ಆಸ್ಟ್ರೇಲಿಯದ ಕ್ರಿಕೆಟಿಗರ ಕುಟುಂಬದವರ ಮುಖದಲ್ಲೂ ಇದೇ ಭಾವ ಮೂಡಿತ್ತು. ಬಾಕ್ಸಿಂಗ್ ಡೇ ಟೆಸ್ಟ್ ಅನ್ನು ಪರಿಗಣಿಸಿ ಮಿಚೆಲ್ ಮಾರ್ಷ್‌ಗೆ ಈ ಶತಕ ಮಹತ್ವದ್ದಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications