Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಸ್ಲಾಂ ಧರ್ಮದ ಪ್ರಕಾರ ಬದುಕು ಸಾಗಿಸುತ್ತೇನೆ: ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ 18ನೇ ವರ್ಷದ ಪಾಕ್ ಮಹಿಳಾ ಆಟಗಾರ್ತಿ

ಪಾಕಿಸ್ತಾನ ಮಹಿಳಾ ಕ್ರಿಕೆಟ್‌ ತಂಡದ ಭರವಸೆಯ ಯುವ ಆಟಗಾರ್ತಿ ಆಯೇಷಾ ನಸೀಮ್ ಅವರು ಕ್ರಿಕೆಟ್ ವೃತ್ತಿಜೀವನಕ್ಕೆ ದಿಢೀರ್ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.

ಗುರುವಾರ, ಜುಲೈ 20ರಂದು 18 ವರ್ಷದ ಕ್ರಿಕೆಟರ್ ಆಯೇಷಾ ನಸೀಮ್ ತಾನು ತೆಗೆದುಕೊಂಡ ನಿವೃತ್ತಿ ನಿರ್ಧಾರವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ತಿಳಿಸಿದ್ದಾರೆ.

ಇಸ್ಲಾಂ ಧರ್ಮಕ್ಕೆ ಅನುಗುಣವಾಗಿ ಹೆಚ್ಚು ಧಾರ್ಮಿಕ ಜೀವನವನ್ನು ನಡೆಸುವ ಸಲುವಾಗಿ ಕ್ರಿಕೆಟ್‌ನಿಂದ ತನ್ನ ನಿವೃತ್ತಿಯನ್ನು ಘೋಷಿಸಿದ್ದರಿಂದ ಈಗ ಪಾಕಿಸ್ತಾನ ಮಹಿಳಾ ತಂಡದ ಅಂತಾರಾಷ್ಟ್ರೀಯ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ.

Ayesha Naseem Announced Retirement

"ನಾನು ಕ್ರಿಕೆಟ್ ತ್ಯಜಿಸುತ್ತಿದ್ದೇನೆ ಮತ್ತು ಇಸ್ಲಾಂ ಧರ್ಮದ ಪ್ರಕಾರ ನನ್ನ ಜೀವನವನ್ನು ನಡೆಸಲು ಬಯಸುತ್ತೇನೆ," ಎಂದು ಆಯೇಷಾ ನಸೀಮ್ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ತಿಳಿಸಿದರು.

ಪಾಕಿಸ್ತಾನ ದೇಶದಲ್ಲಿ ಮಹಿಳಾ ಕ್ರಿಕೆಟ್‌ ಅಗಾಧ ಬೆಳವಣಿಗೆಯೊಂದಿಗೆ, ಆಯೇಷಾ ನಸೀಮ್ ತನ್ನ ಆಟದ ಉತ್ತುಂಗದಲ್ಲಿದ್ದಳು. ಹೀಗಾಗಿ ಕ್ರಿಕೆಟ್ ತೊರೆಯುವ ಅವರ ನಿರ್ಧಾರವು ಪಾಕಿಸ್ತಾನ ತಂಡಕ್ಕೆ ಮತ್ತು ಅಭಿಮಾನಿಗಳಿಗೆ ದೊಡ್ಡ ಆಶ್ಚರ್ಯ ಉಂಟುಮಾಡಿತು.

2020ರಲ್ಲಿ ಪಾಕಿಸ್ತಾನ ಮಹಿಳಾ ತಂಡಕ್ಕೆ ಪದಾರ್ಪಣೆ ಮಾಡಿದ ಆಯೇಶಾ ನಸೀಮ್ ಅವರು 30 ಟಿ20 ಪಂದ್ಯಗಳು ಮತ್ತು ನಾಲ್ಕು ಏಕದಿನ ಪಂದ್ಯಗಳಲ್ಲಿ ತನ್ನ ದೇಶವನ್ನು ಪ್ರತಿನಿಧಿಸಿದ್ದಾರೆ. ಎರಡು ಸ್ವರೂಪದ ಆಟಗಳಲ್ಲಿ ಕ್ರಮವಾಗಿ 369 ಮತ್ತು 33 ರನ್ ಗಳಿಸಿದ್ದಾರೆ.

Story first published: Thursday, July 20, 2023, 17:58 [IST]
Other articles published on Jul 20, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+