For Quick Alerts
ALLOW NOTIFICATIONS  
For Daily Alerts
 

IND vs PAK: ಭಾರತಕ್ಕೆ 172 ರನ್‌ ಗುರಿ ನೀಡಿದ ಪಾಕಿಸ್ತಾನ

ಟಾಸ್‌ ಗೆದ್ದ ಟೀಮ್ ಇಂಡಿಯಾ ಮೊದಲು ಬೌಲಿಂಗ್ ಮಾಡುವ ನಿರ್ಧಾರವನ್ನು ಮಾಡಿತು. ನಾಯಕ ನಿರ್ಧಾರವನ್ನು ಸಮರ್ಥಿಸಿಕೊಳ್ಳುವ ಇರಾದೆಯಿಂದ ಬೌಲರ್‌ಗಳ ಶ್ರಮಿಸಿದರು. ಆದರೆ ಫೀಲ್ಡರ್‌ಗಳು ಮಾತ್ರ ನಾಯಕನ ತೀರ್ಮಾನಕ್ಕೆ ತಕ್ಕ ಪ್ರದರ್ಶನ ನೀಡಲಿಲ್ಲ. ಆರಂಭಿಕ ಆಟಗಾರ ಫಖರ್ ಜಮಾನ್ (15) ಜವಾಬ್ದಾರಿಯನ್ನು ಮರೆತರು. ಎರಡನೇ ವಿಕೆಟ್‌ಗೆ ಸಾಹಿಬ್‌ಜಾದಾ ಫರ್ಹಾನ್, ಸೈಮ್ ಅಯೂಬ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು.

ಪವರ್‌ ಪ್ಲೇನಲ್ಲಿ ಪಾಕಿಸ್ತಾನ ಉತ್ತಮ ಬ್ಯಾಟಿಂಗ್ ನಡೆಸಿ ಒಂದು ವಿಕೆಟ್‌ ನಷ್ಟಕ್ಕೆ 55 ರನ್‌ ಕಲೆ ಹಾಕಿತು. ಎರಡನೇ ವಿಕೆಟ್‌ಗೆ ಸಾಹಿಬ್‌ಜಾದಾ ಫರ್ಹಾನ್, ಸೈಮ್ ಅಯೂಬ್ ಜೋಡಿ 49 ಎಸೆತಗಳಲ್ಲಿ 72 ರನ್‌ ಸೇರಿಸಿತು. ಸೈಮ್‌ ಅಯೂಬ್‌ 1 ಬೌಂಡರಿ, 1 ಸಿಕ್ಸರ್ ಸಹಾಯದಿಂದ 21 ರನ್‌ ಸಿಡಿಸಿದರು. ಹುಸೇನ್ ತಲಾತ್ 10 ರನ್‌ಗೆ ಆಟ ಮುಗಿಸಿದರು. ಆರಂಭಿಕ ಆಟಗಾರ ಸಾಹಿಬ್‌ಜಾದಾ ಫರ್ಹಾನ್ ಮನಮೋಹಕ ಬ್ಯಾಟಿಂಗ್ ನಡೆಸಿದರು. ಇವರು 45 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಸಹಾಯದಿಂದ 58 ರನ್‌ ಸಿಡಿಸಿದರು.

Pakistan s Competitive Target Against India in Asia Cup T20

ಮಧ್ಯಮ ಕ್ರಮಾಂಕದಲ್ಲಿ ಮೊಹಮ್ಮದ್‌ ನವಾಜ್ 21, ಸಲ್ಮಾನ್‌ ಅಘಾ ಅಜೇಯ 17, ಫಹೀಮ್‌ ಅಶ್ರಫ್‌ ಅಜೇಯ 20 ರನ್‌ ಸಿಡಿಸಿದರು. ಅಂತಿಮವಾಗಿ ಪಾಕಿಸ್ತಾನ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 171 ರನ್‌ ಸೇರಿಸಿತು. ಟೀಮ್ ಇಂಡಿಯಾ ಪರ ಆಲ್‌ರೌಂಡರ್‌ ಶಿವಂ ದುಬೆ 33 ರನ್‌ ನೀಡಿ 2 ವಿಕೆಟ್‌ ಕಬಳಿಸಿದರೆ, ಹಾರ್ದಿಕ್ ಪಾಂಡ್ಯ ಹಾಗೂ ಕುಲ್‌ದೀಪ್ ಯಾದವ್ ತಲಾ ಒಂದು ವಿಕೆಟ್‌ ಪಡೆದರು.

ಕ್ಯಾಚ್‌ ಬಿಟ್ಟು ಕೈ ಸುಟ್ಟುಕೊಂಡ ಭಾರತ

ಟೀಮ್ ಇಂಡಿಯಾದ ಪರ ಹಾರ್ದಿಕ್ ಪಾಂಡ್ಯ ಅವರ ಮೊದಲ ಓವರ್‌ನಲ್ಲಿ ಸಾಹಿಬ್‌ಜಾದಾ ಫರ್ಹಾನ್ ಥರ್ಡ್ ಮ್ಯಾನ್‌ನಲ್ಲಿ ಕ್ಯಾಚ್‌ ಕೈ ಬಿಟ್ಟರು. ಇನ್ನು ಐದನೇ ಓವರ್‌ನಲ್ಲಿ ವರುಣ್‌ ಚಕ್ರವರ್ತಿ ಅವರ ಎಸೆತದಲ್ಲಿ ಸೈಮ್ ಅಯುಬ್ ಸ್ಲಾಗ್ ಸ್ವೀಪ್‌ ಮಾಡಲು ಹೋದಾಗ, ಶಾರ್ಟ್‌ ಫೈನ್‌ನಲ್ಲಿ ನಿಂತಿದ್ದ ಕುಲ್‌ದೀಪ್‌ ಯಾದವ್ ಕ್ಯಾಚ್ ಬಿಟ್ಟರು. ಸಾಹಿಬ್‌ಜಾದಾ ಫರ್ಹಾನ್ ಅವರಿಗೆ ಅಭಿಷೇಕ್‌ ಶರ್ಮಾ ಮತ್ತೊಂದು ಜೀವದಾನ ನೀಡಿದರು. ವರುಣ್ ಚಕ್ರವರ್ತಿ ಅವರ ಎಸೆತದಲ್ಲಿ ಸೈಮ್ ಲಾಂಗ್‌ ಆನ್‌ನಲ್ಲಿ ಮತ್ತೊಂದು ಜೀವದಾನ ನೀಡಿದರು. ಇನ್ನು ಟೀಮ್ ಇಂಡಿಯಾದ ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರೀತ್ ಬುಮ್ರಾ ಅವರ ಎಸೆತದಲ್ಲಿ ಫಹೀನ್ ಅಶ್ರಫ್‌ ನೀಡಿದ್ದ ಕ್ಯಾಚ್‌ನ್ನು ಶುಭಮನ್‌ ಗಿಲ್‌ ಕೈ ಚೆಲ್ಲಿದರು. ಪರಿಣಾಮ ಪಾಕಿಸ್ತಾನ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಿತು.

Pakistan s Competitive Target Against India in Asia Cup T20

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಅಭಿಷೇಕ್‌ ಶರ್ಮಾ ಸೂಪರ್ 4 ಹಂತದ ಮಹತ್ವದ ಪಂದ್ಯದಲ್ಲಿ ಎರಡು ಕ್ಯಾಚ್‌ಗಳನ್ನು ಬಿಟ್ಟು ನಿರಾಸೆ ಅನುಭವಿಸಿದರು. ಇದರ ಸಂಪೂರ್ಣ ಲಾಭ ಪಡೆದ ಪಾಕ್‌ ಭಾರತಕ್ಕೆ 172 ರನ್‌ಗಳ ಗುರಿಯನ್ನು ನೀಡುವಲ್ಲಿ ಸಫಲವಾಯಿತು.

Story first published: Sunday, September 21, 2025, 21:58 [IST]
Other articles published on Sep 21, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+