ಗಡಿ ಮೀರಿದ ಭಾರತದ ವಿಶ್ವಕಪ್ ಕನಸು
ಮೆಲ್ಬೋರ್ನ್, ಫೆ. 23 : ಭಾರತದ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯೂ ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲಲಿ ಎಂದು ಆಸೆ ಪಡುವುದು ಸಾಮಾನ್ಯ. ಆದರೆ ಈ ಹಾರೈಕೆ, ಆಸೆ, ನಿರೀಕ್ಷೆಗಳಿಗೆ ಗಡಿಯ ಬಂಧನವಿಲ್ಲ.
ಮಾರ್ಚ್ 29 ರಂದು ಭಾರತ ಚಾಂಪಿಯನ್ ಪಟ್ಟ ಅಲಂಕರಿಸಲಿ ಎಂದು ಹಾರೈಸುವವರಿಗೆ ಕಡಿಮೆಯಿಲ್ಲ. ಆದರೆ, ಕರಾಚಿ ಮೂಲದ ಮೊಹಮದ್ ಬಷೀರ್ ಆಸೆಗಳೇ ಬೇರೆ![ವಿಶ್ವಕಪ್ : ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ]

ಟೀಮ್ ಇಂಡಿಯಾ ನಾಯಕ ಎಂಸ್ ಧೋನಿಗೆ ಆತನ ಪುಟ್ಟ ಮಗಳು ಹೊಸ ಅದೃಷ್ಟ ತಂದುಕೊಟ್ಟಿದ್ದಾಳೆ ಮತ್ತು ತಂದುಕೊಡಲಿದ್ದಾಳೆ ಎಂಬುದು ಬಷೀರ್ ಮನದಾಳದ ಮಾತು. 'ನಾನು ಕರಾಚಿ ಮೂಲದವನಾದರೂ ಚಿಕಾಗೋದಲ್ಲಿ ವಾಸವಿದ್ದೇನೆ. ನನ್ನ ಹಂಡತಿ ರಫಿಯಾ ಹೈದ್ರಾಬಾದ್ ನವಳು. ನಾನು ಧೋನಿಯನ್ನು ಮತ್ತು ಆತನ ಆಟವನ್ನು ಪ್ರೀತಿಸುತ್ತೇನೆ' ಎಂದು 62 ವರ್ಷದ ಬಷೀರ್ ದುಬೈ ಮೂಲದ ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ.
ವಿಶ್ವಕಪ್ ಪಂದ್ಯಗಳನ್ನು ಕಣ್ಣು ತುಂಬಿಸಿಕೊಳ್ಳಲು ಬಷೀರ್ ಸದ್ಯ ಆಸ್ಟ್ರೇಲಿಯಾದಲ್ಲಿದ್ದಾರೆ. "ಧೋನಿ ಐ ಲವ್ ಯು' ಎಂಬ ಟೀ ಶರ್ಟ್ ಕಂಡಾಗ ನನಗೆ ಹೊಸ ಹುಮ್ಮಸ್ಸು ಉಂಟಾಗುತ್ತದೆ ಎಂದು ಹೇಳಿದ್ದಾರೆ. ಚಿಕಾಗೋದಲ್ಲಿ ರೆಸ್ಟೋರೆಂಟ್ ವೊಂದನ್ನು ನಡೆಸುತ್ತಿರುವ ಬಷೀರ್ ವಿಶ್ವಕಪ್, ಟಿ-20, ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು ನಡೆದಾಗ ಹಾಜರಿರುತ್ತಾರೆ.
ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ | ಫೈನಲ್ ಪಂದ್ಯಗಳ ಮೆಲುಕು
2011ರ ವಿಶ್ವಕಪ್ ಪಂದ್ಯದ ವೇಳೆ ಎಂಎಸ್ ಧೋನಿ ಪಂದ್ಯಕ್ಕೆ ಟಿಕೆಟ್ ಕಲ್ಪಿಸಿಕೊಟ್ಟಿದ್ದನ್ನು, ಹಸಿವಾದಾಗ ಸಾಂಡ್ ವಿಚ್ ನೀಡಿದ್ದನ್ನು ಬಷೀರ್ ಸ್ಮರಿಸುತ್ತಾರೆ. 2011ರ ವಿಶ್ವಕಪ್ ನೋಡಲು ನನಗೆ ಟಿಕೆಟ್ ದೊರೆತಿರಲಿಲ್ಲ. ಈ ವೇಳೆ ಧೋನಿ ಸಹಾಯ ಮಾಡಿದರು. ನನಗೆ ಹಸಿವಾದಾಗ ಹೊಟ್ಟೆ ತುಂಬಿಸಿದರು. ಅವರೊಬ್ಬ ಉತ್ತಮ ಆಟಗಾರ ಎನ್ನುವುದಕ್ಕಿಂತ ಅತ್ಯುತ್ತಮ ಮನುಷ್ಯ. ಅವರ ಪುಟ್ಟ ಮಗಳು ಖಂಡಿತವಾಗಿಯೂ ಹೊಸ ಅದೃಷ್ಟ ತಂದಿದ್ದಾಳೆ ಎಂದು ಬಷೀರ್ ಹೇಳುತ್ತಾರೆ.
ದಕ್ಷಿಣ ಆಫ್ರಿಕಾ ಪಂದ್ಯಕ್ಕೂ ಮುನ್ನ ಬಷೀರ್ ಎಂಎಸ್ ಧೋನಿ ಅವರನ್ನು ಭೇಟಿ ಮಾಡಿದ್ದರು. ಭಾರತ ಜಯಗಳಿಸಿದ ನಂತರ ಧೋನಿ ಅಪ್ಪಿಕೊಂಡಿದ್ದಲ್ಲದೇ ಸಹಿ ಮಾಡಿರುವ ಟೀ ಶರ್ಟ್ ವೊಂದನ್ನು ನೀಡಿದ್ದಾರೆ ಎಂದು ತಿಳಿಸಿರುವ ಬಷೀರ್ ಈ ಬಾರಿಯ ವಿಶ್ವಕಪ್ ಭಾರತಕ್ಕೆ ದಕ್ಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.
2014 ರ ಟಿ-20 ಪಂದ್ಯಾವಳಿ ಫೈನಲ್ ಪಂದ್ಯಕ್ಕೆ, ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಧೋನಿ ಟಿಕೆಟ್ ತೆಗೆಸಿಕೊಟ್ಟಿದ್ದನ್ನು ಬಷೀರ್ ಸ್ಮರಿಸುತ್ತಾರೆ.(ಒನ್ ಇಂಡಿಯಾ ನ್ಯೂಸ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications