PAK vs ENG Test: ಸಲ್ಮಾನ್ ಅಘಾ ಶತಕ, ಪಾಕ್ ಮೊದಲ ಇನಿಂಗ್ಸ್‌ನಲ್ಲಿ 556: ಮತ್ತೊಂದು ದಾಖಲೆ ಬರೆದ ರೂಟ್
ಮುಲ್ತಾನ್: ಪಾಕ್ ತಂಡ ಮತ್ತೆ ಲಯಕ್ಕೆ ಬಂದಂತೆ ಕಾಣುತ್ತಿದೆ. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕ್ ಅಮೋಘ ಪ್ರದರ್ಶನ ನೀಡಿದೆ. ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯ ತಂಡ 556 ರನ್‌ಗಳನ್ನು ಕಲೆ ಹಾಕಿದೆ. ಮೊದಲ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್‌ಗೆ ಆರಂಭಿಕ ಆಘತಾ ಎದುರಾಗಿದೆ.
ಮಂಗಳವಾರ ಎರಡನೇ ದಿನದಾಟವನ್ನು 4 ವಿಕೆಟ್‌ಗೆ 328 ರನ್‌ಗಳಿಂದ ಮೊದಲ ಇನಿಂಗ್ಸ್ ಮುಂದುವರೆಸಿ 556 ರನ್‌ಗಳಿಗೆ ಸರ್ವ ಪತನ ಕಂಡಿತು. ಮೊದಲ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ದಿನದಾಟದಂತ್ಯಕ್ಕೆ 1 ವಿಕೆಟ್‌ಗೆ 96 ರನ್ ಕಲೆ ಹಾಕಿದ್ದು, 460 ರನ್‌ಗಳ ಹಿನ್ನಡೆಯನ್ನು ಅನುಭವಿಸುತ್ತಿದೆ.

ಎರಡನೇ ದಿನ ಇಂಗ್ಲೆಂಡ್ ಬೌಲರ್‌ಗಳ ವಿರುದ್ಧ ನಸೀಮ್ ಶಾ ಅಬ್ಬರಿಸಿದರು. ಇವರು 81 ಎಸೆತಗಳಲ್ಲಿ 1 ಬೌಂಡರಿ ಮತ್ತು ಮೂರು ಸಿಕ್ಸರ್ ಸಹಾಯದಿಂದ 33 ರನ್ ಗಳಿಸಿದರು. ವಿಶೇಷವೆಂದರೆ ಟೆಸ್ಟ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಅವರು ಇನ್ನಿಂಗ್ಸ್‌ನಲ್ಲಿ 30 ಪ್ಲಸ್ ರನ್ ಗಳಿಸಿದ್ದಾರೆ. ನಸೀಮ್ ತಮ್ಮ ವೇಗದ ಬೌಲಿಂಗ್‌ಗೆ ಹೆಸರುವಾಸಿ. ಇವರು ಪಾಕ್ ಪರ ಮೂರು ಫಾರ್ಮೆಟ್‌ಗಳಲ್ಲಿ ಆಡುವ ಆಟಗಾರ.
ಅಘಾ ಸಲ್ಮಾನ್ ಶತಕ ಸಾಧನೆ
ಮೊಹಮ್ಮದ್ ರಿಜ್ವಾನ್ ಬಂದು ಹೋಗುವ ಸಂಪ್ರದಾಯ ಮುಗಿಸಿದರು. ಸೌದ್ ಶಕೀಲ್ ಅವರು ಅಘಾ ಸಲ್ಮಾನ್ ಅವರೊಂದಿಗೆ ಜವಾಬ್ದಾರಿಯುತ ಇನಿಂಗ್ಸ್ ಕಟ್ಟಿದರು. ಸೌದ್ ಶಕೀಲ್ 82 ರನ್ ಬಾರಿಸಿದರು. ಅಘಾ ಸಲ್ಮಾನ್ ತಮ್ಮ ನೈಜ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರ ಬ್ಯಾಟಿಂಗ್‌ಗೆ ಬ್ರೇಕ್ ಹಾಕುವಲ್ಲಿ ಇಂಗ್ಲೆಂಡ್ ಬೌಲರ್‌ಗಳು ವಿಫಲರಾದರು. ಅಘಾ ಸಲ್ಮಾನ್ 119 ಎಸೆತಗಳನ್ನು ಎದುರಿಸಿ, 10 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 104 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ಪಾಕ್ ದಾಖಲೆ
ಬ್ರೆಡಂ ಮೆಕಲಂ ಕೋಚ್ ಆದಾಗಿನಿಂದ ಈ ವರೆಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನ ಇನ್ನಿಂಗ್ಸ್‌ನಲ್ಲಿ ಕೇವಲ ಮೂರು ಬಾರಿ ಮಾತ್ರ 500 ಕ್ಕಿಂತ ಹೆಚ್ಚು ಸ್ಕೋರ್ ಗಳಿಸಲಾಗಿದೆ. ಪಾಕಿಸ್ತಾನ ಎರಡನೇ ಬಾರಿಗೆ ಈ ಸಾಧನೆ ಮಾಡಿದೆ.

ಇಂಗ್ಲೆಂಡ್ ಪರ ಜಾಕ್ ಲೀಚ್ 3, ಗಸ್ ಅಟ್ಕಿನ್ಸನ್ ಹಾಗೂ ಬ್ರೈಡನ್ ಕಾರ್ಸೆ ತಲಾ ಎರಡು ವಿಕೆಟ್ ಪಡೆದರು.
ರೂಟ್ ಐದು ಸಾವಿರ ರನ್ ಸಾಧನೆ
ಇಂಗ್ಲೆಂಡ್ ತಂಡದ ಪರ ನಾಯಕ ಓಲಿ ಪೋಪ್ ಜವಾಬ್ದಾರಿ ಮರೆತರು. ಆರಂಭಿಕ ಜಾಕ್ ಕ್ರಾಲಿ ಅಜೇಯ 64 ಹಾಗೂ ಭರವಸೆಯ ಬ್ಯಾಟರ್ ಜೋ ರೂಟ್ ಅಜೇಯ 32 ರನ್ ಬಾರಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇದೇ ವೇಳೆ ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮತ್ತೊಂದು ಸಾಧನೆ ಮಾಡಿದರು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ರೂಟ್ 5000 ರನ್‌ಗಳ ಗಡಿ ದಾಟಿದ ಸಾಧನೆ ಮಾಡಿದರು. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications