ಸೆಪ್ಟಂಬರ್ 9 ರಂದು ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ. ಈ ಟೂರ್ನಿಗೆ ಟೀಮ್ ಇಂಡಿಯಾವನ್ನು ಇನ್ನೇನು ಕೆಲವೇ ದಿನಗಳಲ್ಲಿ ಪ್ರಕಟಿಸಲಾಗುವುದು. ಮತ್ತೊಮ್ಮೆ ಕ್ರಿಕೆಟ್ ಜಗತ್ತಿನ ಅತಿದೊಡ್ಡ ಪಂದ್ಯ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಟೀಮ್ ಇಂಡಿಯಾ ಹಾಗೂ ಪಾಕ್ ನಡುವಣ ಪಂದ್ಯವನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಸಹ ಕಾತುರರಾಗಿದ್ದಾರೆ.
ಸೆಪ್ಟಂಬರ್ 14 ರಂದು ನಡೆಯಲಿರುವ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಏಷ್ಯಾ ಕಪ್ ಟೂರ್ನಿಯ ಸೂಪರ್ 4 ಹಂತದ ಪಂದ್ಯಗಳು ಸೆ.21 ರಿಂದ ಆರಂಭವಾಗಲಿವೆ. ಭಾರತಹಾಗೂ ಪಾಕಿಸ್ತಾನ ತಂಡಗಳು ಚಾಂಪಿಯನ್ಸ್ ಟ್ರೋಫಿ ಬಳಿಕ ಮುಖಾಮುಖಿ ಆಗುತ್ತಿರುವುದು ಇದೇ ಮೊದಲು. ಇನ್ನು ಇತ್ತೀಚಿಗೆ ಪಾಕ್ ವಿಂಡೀಸ್ ಪ್ರವಾಸದಿಂದ ಮರಳಿದೆ. ಈ ಪ್ರವಾಸದಲ್ಲಿ ಪಾಕ್ ತಂಡ ವಿಶೇಷ ಸಾಧನೆಯನ್ನು ಮಾಡಲು ಸಾಧ್ಯವಾಗಿರಲಿಲ್ಲ. ಪಾಕಿಸ್ತಾನದ ಮಾಜಿ ಆಟಗಾರ ಬಸಿತ್ ಅಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯದ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ನಡುವಣ ಕೆಲ ತಿಂಗಳು ಹಿಂದೆ ಪರಿಸ್ಥಿತಿ ಉದ್ವಿಗ್ನವಾಗಿತ್ತು. ಭಾರತ ಆಪ್‌ರೇಷನ್ ಸಿಂಧೂರದ ಬಳಿಕ ಉಭಯ ದೇಶಗಳ ನಡುವೆ ಇದೇ ಮೊದಲ ಬಾರಿಗೆ ಕ್ರಿಕೆಟ್ ಮೈದಾನದಲ್ಲಿ ಕಾದಾಟ ನಡೆಸುತ್ತಿವೆ. ಪಾಕಿಸ್ತಾನ ಈ ಪಂದ್ಯದಲ್ಲಿ ಮುಜುಗರದಿಂದ ಪಾರಾಗಲು ಇದೊಂದೆ ಮಾರ್ಗ ಎಂದು ಎಂದು ಬಾಸಿತ್ ಅಲಿ ಹೇಳಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನಲ್ಲಿ ಪಾಕಿಸ್ತಾನದ ವಿರುದ್ಧ ಆಡಲು ಭಾರತ ನಿರಾಕರಿಸಿದ ರೀತಿಯಲ್ಲಿಯೇ ಆದರೆ, ಪಾಕ್ ಸೋಲಿನಿಂದ ಪಾರಾಗಬಹುದು. ಇಲ್ಲದಿದ್ದರೆ ಪಾಕ್ ತಂಡವನ್ನು ಭಾರತ ಸೋಲಿಸುತ್ತದೆ ಎಂದಿದ್ದಾರೆ.
ಭಾರತ ಹಾಗೂ ಪಾಕ್ ನಡುವಣ ಪಂದ್ಯದಲ್ಲಿ ಉಭಯ ತಂಡಗಳು ಗೆಲ್ಲುವ ಪ್ಲ್ಯಾನ್ ಮಾಡಿಕೊಂಡಿವೆ. ಪಾಕ್ ತಂಡ ಭಾರತದ ವಿರುದ್ಧ ಸೋಲುವುದನ್ನು ಅಲ್ಲಿನ ಅಭಿಮಾನಿಗಳು ಸಹ ಸಹಿಸುವುದಿಲ್ಲ ಎಂದು ಬಾಸಿತ್ ಅಲಿ ಹೇಳಿದರು. ಈ ಬಾರಿಯ ಏಷ್ಯಾಕಪ್‌ನ್ನು ಟಿ20 ಸ್ವರೂಪದಲ್ಲಿ ಆಡಿಸಲಾಗುತ್ತಿದೆ. ಇತ್ತಿಚಿಗೆ ವಿಂಡೀಸ್ ಪ್ರವಾಸದಲ್ಲಿ ಪಾಕ್ ಟಿ20 ಸರಣಿಯನ್ನು ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿದೆ. ಇನ್ನು ವಿಂಡೀಸ್ ಪ್ರವಾಸದಲ್ಲಿ ಪಾಕಿಸ್ತಾನದ ಭರವಸೆಯ ಬ್ಯಾಟರ್‌ಗಳಾದ ಮೊಹಮ್ಮದ್ ರಿಜ್ವಾನ್, ಬಾಬರ್ ರಿಜ್ವಾನ್ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಆದರೆ ಸಲ್ಮಾನ್ ಅಘಾ ನಾಯಕರಾಗಿ ಯಶ ಕಂಡಿದ್ದರು. ಭಾರತ ಪಾಕಿಸ್ತಾನ ನಡುವಣ ಪಂದ್ಯ ನಡೆಯುತ್ತಿದ್ದೋ ಇಲ್ಲವೋ ಎಂಬ ಬಗ್ಗೆ ಇನ್ನು ಖಚಿತತೆ ಇಲ್ಲ.