Pakistan's ODI World Cup 2023 Schedule: 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವೇಳಾಪಟ್ಟಿ
ಮಂಗಳವಾರ, ಜೂನ್ 27ರಂದು ಮುಂಬೈನಲ್ಲಿ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯ ಅಂತಿಮ ಹಾಗೂ ಸಂಪೂರ್ಣ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು ಪ್ರಕಟಿಸಿದೆ.
ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿ ನಡೆಯಲಿದ್ದು, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.

ಇನ್ನು ಮಾಜಿ ವಿಶ್ವ ಚಾಂಪಿಯನ್ ಪಾಕಿಸ್ತಾನ ತಂಡವು ಅಕ್ಟೋಬರ್ 6ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಕ್ವಾಲಿಫೈಯರ್ 1ರ ವಿರುದ್ಧ ಆಡುವ ಮೂಲಕ ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರಲ್ಲಿ ತಮ್ಮ ಅಭಿಯಾನ ಪ್ರಾರಂಭಿಸಲಿದೆ.
ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡವು ಅಕ್ಟೋಬರ್ 12ರಂದು ಹೈದರಾಬಾದ್‌ನಲ್ಲಿಯೇ ಎರಡನೇ ಪಂದ್ಯದಲ್ಲಿ ಕ್ವಾಲಿಫೈಯರ್ 2 ತಂಡವನ್ನು ಎದುರಿಸಲಿದೆ.
ಹೈದರಾಬಾದ್‌ನಲ್ಲಿನ ಎರಡು ಪಂದ್ಯಗಳು ಮುಗಿದ ನಂತರ, ಅಕ್ಟೋಬರ್ 15ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಹೈ-ವೋಲ್ಟೇಜ್ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಆತಿಥೇಯ ಭಾರತ ತಂಡವನ್ನು ಎದುರಿಸಲಿದ್ದು, ವಿಶ್ವಕಪ್‌ನ ಅತಿದೊಡ್ಡ ಪಂದ್ಯಗಳಲ್ಲಿ ಒಂದಾಗಿರಲಿದೆ.
ಈ ಮೊದಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ( ಪಿಸಿಬಿ) ಭಾರತ ವಿರುದ್ಧದ ಪಂದ್ಯವನ್ನು ಅಹಮದಾಬಾದ್‌ನಿಂದ ಸ್ಥಳಾಂತರಿಸಲು ವಿನಂತಿಸಿತ್ತು, ಆದರೆ ಐಸಿಸಿ ಮತ್ತು ಬಿಸಿಸಿಐ ವಿನಂತಿಯನ್ನು ತಿರಸ್ಕರಿಸಿದವು.
ಅಹಮದಾಬಾದ್‌ನಲ್ಲಿ ಆಡಿದ ನಂತರ ಪಾಕಿಸ್ತಾನ ಕ್ರಿಕೆಟ್ ತಂಡ ಬೆಂಗಳೂರಿಗೆ ಬರಲಿದೆ. ಅಕ್ಟೋಬರ್ 20ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 1999ರ ವಿಶ್ವಕಪ್ ಫೈನಲ್‌ನ ಪಂದ್ಯದ ಎದುರಾಳಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.
ಆ ಬಳಿಕ ಪಾಕಿಸ್ತಾನ ತಂಡ ತನ್ನ ಮುಂದಿನ ಎರಡು ಪಂದ್ಯಗಳನ್ನು ಚೆನ್ನೈನಲ್ಲಿ ಆಡಲಿದೆ. ಅಕ್ಟೋಬರ್ 23 ಮತ್ತು 27ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಕ್ರಮವಾಗಿ ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಲಿದೆ.

ಅಕ್ಟೋಬರ್ 31ರಂದು ಬಾಂಗ್ಲಾದೇಶದ ವಿರುದ್ಧದ ಪಂದ್ಯಕ್ಕಾಗಿ ಪಾಕಿಸ್ತಾನ ತಂಡ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ಗೆ ತೆರಳಲಿದೆ. ನಂತರ ಬಾಬರ್ ಅಜಂ ನಾಯಕ್ವದ ತಂಡವು ನವೆಂಬರ್ 4ರಂದು 2019ರ ವಿಶ್ವಕಪ್ ರನ್ನರ್-ಅಪ್ ನ್ಯೂಜಿಲೆಂಡ್ ತಂಡವನ್ನು ಎದುರಿಸಲು ಬೆಂಗಳೂರಿಗೆ ಬರಲಿದೆ.
ನವೆಂಬರ್ 12 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ 2022 ರ ಟಿ 20 ವಿಶ್ವಕಪ್‌ನಲ್ಲಿಯೂ ಅವರನ್ನು ಸೋಲಿಸಿದ ಹಾಲಿ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಲೀಗ್ ಹಂತಗಳಲ್ಲಿ ಪಾಕಿಸ್ತಾನದ ಅಂತಿಮ ಪಂದ್ಯ ನಡೆಯಲಿದೆ.
2023ರ ವಿಶ್ವಕಪ್‌ಗಾಗಿ ಪಾಕಿಸ್ತಾನ ತಂಡ ಭಾರತಕ್ಕೆ ಬರಲಿದೆಯೇ?
ಪಾಕಿಸ್ತಾನ ಕ್ರಿಕೆಟ್ ತಂಡ 2023ರ ವಿಶ್ವಕಪ್‌ಗಾಗಿ ಭಾರತಕ್ಕೆ ತೆರಳುವುದೇ ಎಂಬ ಅನುಮಾನ ಇನ್ನೂ ಮುಂದುವರೆದಿದೆ. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ತಂಡವು ಅವರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅನುಮತಿಯ ಪಡೆಯುವ ಅಗತ್ಯವಿದೆ.
"ಪಂದ್ಯದ ಸ್ಥಳಗಳು ಸೇರಿದಂತೆ ಭಾರತಕ್ಕೆ ಯಾವುದೇ ಪ್ರವಾಸಕ್ಕಾಗಿ ಪಿಸಿಬಿಗೆ ಪಾಕಿಸ್ತಾನ ಸರ್ಕಾರದ ಅನುಮತಿ ಅಗತ್ಯವಿದೆ. ನಾವು ಮಾರ್ಗದರ್ಶನಕ್ಕಾಗಿ ನಮ್ಮ ಸರ್ಕಾರದೊಂದಿಗೆ ಸಂಪರ್ಕ ಹೊಂದಿದ್ದೇವೆ. ಸರ್ಕಾರದಿಂದ ಏನಾದರೂ ಆದೇಶ ಬಂದ ತಕ್ಷಣ ನಾವು ಐಸಿಸಿಯ ಟೂರ್ನಿ ಆಯೋಜಕರಿಗೆ ಮಾಹಿತಿಯನ್ನು ತಿಳಿಸಲಿದ್ದೇವೆ," ಎಂದು ಪಿಸಿಬಿ ಸಂವಹನ ನಿರ್ದೇಶಕ ಸಾಮಿ ಉಲ್ ಹಸನ್ ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ವೆಬ್‌ಸೈಟ್‌ಗೆ ತಿಳಿಸಿದ್ದಾರೆ.
"ಈ ಸ್ಥಾನವು ಒಂದೆರಡು ವಾರಗಳ ಹಿಂದೆ ಐಸಿಸಿ ನಮ್ಮೊಂದಿಗೆ ಕರಡು ವೇಳಾಪಟ್ಟಿಯನ್ನು ಹಂಚಿಕೊಂಡು, ನಮ್ಮ ಪ್ರತಿಕ್ರಿಯೆಯನ್ನು ಕೋರಿದಾಗ ನಾವು ಈ ಕುರಿತು ಐಸಿಸಿಗೆ ಹೇಳಿರುವುದಾಗಿ," ಎಂದು ಸಾಮಿ ಉಲ್ ಹಸನ್ ಹೇಳಿದರು.
2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ಪೂರ್ಣ ವೇಳಾಪಟ್ಟಿ:
| ಕ್ರಮ ಸಂಖ್ಯೆ | ದಿನಾಂಕ | ಪಂದ್ಯ | ಸ್ಥಳ | ಸಮಯ |
| 1 | ಅಕ್ಟೋಬರ್ 6 | ಪಾಕಿಸ್ತಾನ vs ಕ್ವಾಲಿಫೈಯರ್ 1 | ಹೈದರಾಬಾದ್ | ಮಧ್ಯಾಹ್ನ 2 ಗಂಟೆ |
| 2 | ಅಕ್ಟೋಬರ್ 12 | ಪಾಕಿಸ್ತಾನ vs ಕ್ವಾಲಿಫೈಯರ್ 2 | ಹೈದರಾಬಾದ್ | ಮಧ್ಯಾಹ್ನ 2 ಗಂಟೆ |
| 3 | ಅಕ್ಟೋಬರ್ 15 | ಭಾರತ vs ಪಾಕಿಸ್ತಾನ | ಅಹಮದಾಬಾದ್ | ಮಧ್ಯಾಹ್ನ 2 ಗಂಟೆ |
| 4 | ಅಕ್ಟೋಬರ್ 20 | ಪಾಕಿಸ್ತಾನ vs ಆಸ್ಟ್ರೇಲಿಯಾ | ಬೆಂಗಳೂರು | ಮಧ್ಯಾಹ್ನ 2 ಗಂಟೆ |
| 5 | ಅಕ್ಟೋಬರ್ 23 | ಪಾಕಿಸ್ತಾನ vs ಅಫ್ಘಾನಿಸ್ತಾನ | ಚೆನ್ನೈ | ಮಧ್ಯಾಹ್ನ 2 ಗಂಟೆ |
| 6 | ಅಕ್ಟೋಬರ್ 27 | ಪಾಕಿಸ್ತಾನ vs ದಕ್ಷಿಣ ಆಫ್ರಿಕಾ | ಚೆನ್ನೈ | ಮಧ್ಯಾಹ್ನ 2 ಗಂಟೆ |
| 7 | ಅಕ್ಟೋಬರ್ 31 | ಪಾಕಿಸ್ತಾನ vs ಬಾಂಗ್ಲಾದೇಶ | ಕೋಲ್ಕತ್ತಾ | ಮಧ್ಯಾಹ್ನ 2 ಗಂಟೆ |
| 8 | ನವೆಂಬರ್ 4 | ಪಾಕಿಸ್ತಾನ vs ನ್ಯೂಜಿಲೆಂಡ್ | ಬೆಂಗಳೂರು | ಮಧ್ಯಾಹ್ನ 2 ಗಂಟೆ |
| 9 | ನವೆಂಬರ್ 12 | ಪಾಕಿಸ್ತಾನ vs ಇಂಗ್ಲೆಂಡ್ | ಕೋಲ್ಕತ್ತಾ | ಮಧ್ಯಾಹ್ನ 2 ಗಂಟೆ |
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications