ಪಾಕಿಸ್ತಾನ ತಂಡದ ಸದ್ಯ ಬಾಂಗ್ಲಾದೇಶ ಪ್ರವಾಸದಲ್ಲಿದೆ. ಈ ವೇಳೆ ಉಭಯ ದೇಶಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದೆ. ಈ ಸರಣಿಯ ಎರಡನೇ ಏಕದಿನ ಪಂದ್ಯ ಢಾಕಾದ ಮೀರ್‌ಪುರ್‌ನ ಶೇರ್ ಏ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯವನ್ನು ಪಾಕಿಸ್ತಾನ ತಂಡ ಡಕ್ವರ್ತ್-ಲೂಯಿಸ್ ನಿಯಮದಂತೆ 128 ರನ್‌ಗಳಿಂದ ಗೆದ್ದು ಬೀಗಿತು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸಮಬಲ ಸಾಧಿಸಿದೆ. ಈ ಪಂದ್ಯದ ವೇಳೆ ರನ್ಔಟ್ ಒಂದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಬಾಂಗ್ಲಾದೇಶ ವಿರುದ್ಧ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡದ ಅನುಭವಿ ಆಟಗಾರ ಸಲ್ಮಾನ್ ಅಲಿ ಆಘಾ ರನೌಟ್ ಆದರು. ಇವರು ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಚೆಂಡನ್ನು ಪ್ಲೇಡ್ ಮಾಡಿದರು. ಆ ಚೆಂಡನ್ನು ಮೆಹದಿ ಹಸನ್ ಅವರು ಹಿಡಿಯಲು ಯತ್ನಿಸಿದರು. ಆಗ ಸಲ್ಮಾನ್ ಅಲಿ ಹಾಗೂ ಮೆಹದಿ ಹಸನ್ ನಡುವೆ ಡಿಕ್ಕಿ ಸಂಭವಿಸಿತು. ಸಮಯಪ್ರಜ್ಞೆ ಮೆರೆದು ಚೆಂಡನ್ನು ಹಿಡಿದು ಸಲ್ಮಾನ್ ಅಲಿ ಆಘಾ ಅವರನ್ನು ರನೌಟ್ ಮಾಡಿದರು.

ಬಾಂಗ್ಲಾದೇಶ ಬೌಲರ್ ಮೆಹದಿ ಹಸನ್ ಮಿರ್ಜಾ ಅವರು ಚೆಂಡನ್ನು ಎಸೆದು ಸ್ಟಂಪ್‌ಗೆ ಬಡಿಸುತ್ತಿದ್ದಂತೆ ಅಂಪೈರ್‌ಗೆ ಮನವಿ ಮಾಡಿದರು. ಟಿವಿ ಅಂಪೈರ್ ಇದನ್ನು ಪರೀಕ್ಷಿಸಲು ಮುಂದಾದರು.ಆಗ ಸಲ್ಮಾನ್ ಅಲಿ ಆಘಾ ಹತಾಶರಾಗಿ ಗ್ಲೌಸ್ ಹಾಗೂ ಹೆಲ್ಮೆಟ್‌ಗಳನ್ನು ಮೈದಾನದಲ್ಲಿ ಒಗೆದರು. ಸಲ್ಮಾನ್ ಅಲಿ ಅವರ ಈ ನಡೆ ಐಸಿಸಿ ನೀತಿ ಸಂಹಿತಿಯ ವಿರೋಧವಾಗಿದೆ.
ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.2 ಅನ್ನು ಉಲ್ಲಂಘಿಸಿದ್ದಕ್ಕಾಗಿ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿದೆ. ಈ ನಿರ್ದಿಷ್ಟ ಕಲಂ ಮೈದಾನದಿಂದ ಹೊರಡುವಾಗ ಆಟಗಾರ ಕ್ರಿಕೆಟ್ ಉಪಕರಣಗಳ ದುರುಪಯೋಗವನ್ನು ಮಾಡಿದ್ದಾರೆ ಎಂದು ಮ್ಯಾಚ್ ರೆಫರಿ ನಿಯಾಮೂರ್ ರಶೀದ್ ಹೇಳಿದ್ದಾರೆ. ಸಲ್ಮಾನ್ ಅಲಿ ಆಘಾ ಅವರ ಈ ಮೊದಲು ಈ ರೀತಿಯ ವರ್ತನೆಯನ್ನು ಪ್ರದರ್ಶಿಸಿಲ್ಲ. ಹೀಗಾಗಿ ಅವರ ಖಾತೆಗೆ ಒಂದು ಡಿಮೆರಿಟ್ ಪಾಯಿಂಟ್ ಸೇರಿಸಲಾಗಿದೆ.
ಬಾಂಗ್ಲಾದೇಶ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಿರಲಿಲ್ಲ. ಭಾರತದಲ್ಲಿ ಭದ್ರತೆಯ ಕಾರಣಗಳನ್ನು ನೀಡಿ ಟಿ20 ವಿಶ್ವಕಪ್‌ನಿಂದ ಬಾಂಗ್ಲಾ ದೂರ ಉಳಿದಿತ್ತು. ಆಗ ಪಾಕಿಸ್ತಾನ ಸಹ ಬಾಂಗ್ಲಾದೇಶಕ್ಕೆ ಬೆಂಬಲ ಸೂಚಿಸಿತ್ತು. ಆದರೆ ಕೊನೆಯಲ್ಲಿ ಆದ ನಾಟಕೀಯ ಬೆಳವಣಿಗೆಯಿಂದಾಗ ಪಾಕಿಸ್ತಾನ ಮತ್ತೆ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಆಡಲು ಸಮ್ಮತಿಸಿತು. ಟಿ20 ವಿಶ್ವಕಪ್ ಬಳಿಕ ಪಾಕಿಸ್ತಾನ, ಬಾಂಗ್ಲಾದೇಶದ ವಿರುದ್ಧ ಏಕದಿನ ಸರಣಿಯನ್ನು ಆಡುತ್ತಿರುವುದು ವಿಶೇಷ. ಈಗ ಉಭಯ ಆಟಗಾರರು ಮೈದಾನದಲ್ಲಿ ತೋರಿದ ವರ್ತನೆ ಚರ್ಚೆಗೆ ಗ್ರಾಸವಾಗಿದೆ.
ಎರಡನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ 128 ರನ್‌ಗಳಿಂದ ಜಯ ಸಾಧಿಸಿದ್ದು, ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.