Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಅಭ್ಯಾಸದಲ್ಲಿ ಹೆಲಿಕಾಪ್ಟರ್ ಶಾಟ್ ಬಾರಿಸಿದ ಹಾರ್ದಿಕ್: ವಿಡಿಯೋ

Pandya attempts trademark MS Dhoni helicopter shot ahead of IPL - Watch

ಮುಂಬೈ, ಮಾರ್ಚ್ 15: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಬಲಿಷ್ಠ ತಂಡಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್ ತಂಡದ ಆಲ್ ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ ಅವರು ಧೋನಿಯ ಟ್ರೇಡ್ ಮಾರ್ಕ್ ಆಗಿರುವ ಹೆಲಿಕಾಪ್ಟರ್ ಶಾಟ್ ಬಾರಿಸಿ ಗಮನ ಸೆಳೆದಿದ್ದಾರೆ.

ಟ್ವಿಟರ್ ವಿಡಿಯೋವನ್ನು ಅಪ್‌ಲೋಡ್ ಮಾಡಿರುವ ಹಾರ್ದಿಕ್, 'ಈ ಹೊಡೆತದ ಹಿಂದಿರುವ ನನ್ನ ಸ್ಫೂರ್ತಿ ಯಾರು ಅನ್ನೋದನ್ನು ಗೆಸ್ ಮಾಡಿ' ಎಂಬ ಸಾಲನ್ನೂ ಸೇರಿಸಿಕೊಂಡಿದ್ದಾರೆ. ಮುಂಬೈಯ ಘನ್ಸೋಲಿಯಲ್ಲಿರುವ ರಿಲಯನ್ಸ್ ಕಾರ್ಪೊರೇಟ್ ಪಾರ್ಕ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಈ ಅಭ್ಯಾಸ ಶಿಬಿರ ನಡೆಯುತ್ತಿದೆ.

ಗಾಯದ ಕಾರಣದಿಂದಾಗಿ ಹಾರ್ದಿಕ್, ಭಾರತ-ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯಿಂದ ಹೊರಗುಳಿದಿದ್ದರು. ಈಗ ಚೇತರಿಸಿಕೊಂಡಿದ್ದು, ಐಪಿಎಲ್ ಅಭ್ಯಾಸದಲ್ಲಿ ತೊಡಗಿದ್ದಾರೆ. ಬರೋಡಾ ಆಲ್‌ ರೌಂಡರ್ ಆಟಗಾರರಾಗಿರುವ ಪಾಂಡ್ಯ, ಮೂರು ಬಾರಿಯ ಐಪಿಎಲ್ ಚಾಂಪಿಯನ್ ಮುಂಚೈ ತಂಡವನ್ನು 2015ರಲ್ಲಿ ಸೇರಿಕೊಂಡಿದ್ದರು.

Story first published: Friday, March 15, 2019, 11:58 [IST]
Other articles published on Mar 15, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+